ಹೋಟೆಲ್ ತಾಜ್ಗೆ ಭೇಟಿ ನೀಡಿ ವಿವಾದಕ್ಕೆ ಸಿಲುಕಿದ್ದ ರಾಮ್ ಗೋಪಾಲ್ ವರ್ಮಾ ಮುಂಬಯಿ ಮೇಲಿನ ಆತಂಕವಾದಿಗಳ ದಾಳಿಯ ಮೇಲೆ ಚಿತ್ರ ಮಾಡುವ ಯಾವುದೇ ಉದ್ದೇಶ ತಮಗಿಲ್ಲವೆಂದು ಹೇಳಿದ್ದಿರಬಹುದು, ಆದರೆ ಬಾಲಿವುಡ್ನ ಬಹಳಷ್ಟು ಚಿತ್ರ ನಿರ್ಮಾಪಕರು ಈ ಬಗ್ಗೆ ಚಿತ್ರ ತಯಾರಿಸಲು ಬಯಸಿದ್ದಾರೆ.
ಇತ್ತೀಚಿಗೆ ಹಲವಾರು ನಿರ್ಮಾಪಕರು ಈ ಮುಂಬಯಿ ಘಟನೆಗೆ ಸಂಬಂಧಿಸಿದಂತಹ ಟೈಟಲ್ಗಳನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಅವುಗಳಲ್ಲಿ ಕೆಲವು ಟೈಟಲ್ಗಳು ಈ ಕೆಳಗಿನಂತಿವೆ- ಶೂಟ್ಔಟ್ ಎಟ್ ತಾಜ್, 26/11, ಶೂಟ್ಔಟ್ ಔಟ್ ಎಟ್ ಸಿಯಾಸಾಟಿ, ಓ 60 ಗಂಟೆ (ಆ 60 ಗಂಟೆಗಳು), ತಾಜ್ ಟು ಓಬೆರಾಯ್ ಇತ್ಯಾದಿ 40ಕ್ಕೂ ಹೆಚ್ಚು ಇಂತಹುದೇ ಹೆಸರುಗಳು ದಾಖಲಾಗಿವೆ.
ಓರ್ವ ಚಿತ್ರ ನಿರ್ಮಾಪಕರು ಹೇಳುವಂತೆ ಈ ಘಟನೆಗಳ ಮೇಲೆ ಚಿತ್ರ ತಯಾರಿಸುವುದರಲ್ಲಿ ಯಾವುದೇ ತಪ್ಪೂ ಇಲ್ಲ, ಸಮಾಜದಲ್ಲಿ ಘಟಿಸುವಂತಹ ಘಟನೆಗಳನ್ನೇ ಚಿತ್ರಗಳಲ್ಲಿ ತೋರಿಸಲಾಗುತ್ತದೆ ಎನ್ನುತ್ತಾರವರು.
ಇವುಗಳಲ್ಲಿ ಎಷ್ಟು ಚಿತ್ರಗಳು ತಯಾರಾಗುತ್ತವೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕು.