ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕತ್ರಿನಾ ಕೈಫ್ ಯಶಸ್ಸಿನ ಗುಟ್ಟು...
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕತ್ರಿನಾ ಕೈಫ್ ಅವರ ಯಶಸ್ಸಿನ ಗುಟ್ಟಿ ದುಡಿಮೆಯ ಬಗೆಗೆ ಅವರಿಗಿರುವ ಪ್ರಾಮಾಣಿಕತೆ, ಸಮರ್ಪಣಾ ಭಾವ ಮತ್ತು ಶಿಸ್ತಿನಲ್ಲಿದೆ ಎಂದೆನಿಸುತ್ತದೆ. ಕತ್ರಿನಾರಿಗೆ ಸಮಯವನ್ನು ವ್ಯರ್ಥವಾಗಿ ವ್ಯಯಿಸುವುದು ಸ್ವಲ್ಪವೂ ಇಷ್ಟವಿಲ್ಲ. ಅವರು ತಮ್ಮ ಕೆಲಸವನ್ನು ಗಂಭೀರತೆಯಿಂದ ಮಾಡುತ್ತಾರೆ ಬಹುಶಃ ಇದಕ್ಕಾಗಿಯೇ ಬಾಲಿವುಡ್‌ನ ನಿರ್ಮಾಪಕ-ನಿರ್ದೇಶಕರು ಅವರೊಂದಿಗೆ ಮತ್ತೆ ಮತ್ತೆ ದುಡಿಯಲು ಇಷ್ಟಪಡುತ್ತಾರೆ.

ದುಡಿಮೆಯ ಕಡೆಗೆ ಕತ್ರಿನಾರ ಗಂಭೀರತೆ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ' ಚಿತ್ರದ ಸೆಟ್‌ನಲ್ಲಿ ಕಾಣಸಿಕ್ಕಿತು. ಆ ದಿನ ಭಾರೀ ಮಳೆ ಸುರಿಯುತಿತ್ತು ಮತ್ತು ಚಿತ್ರೀಕರಣ ನಡೆಸುವುದು ಅಸಾಧ್ಯವಾಗಿತ್ತು. ನಿರ್ದೇಶಕರು ಚಿತ್ರೀಕರಣ ರದ್ದುಗೊಳಿಸಿರುವುದಾಗಿ ಘೋಷಿಸಿದರು.

ಸೆಟ್‌ನಲ್ಲಿದ್ದ ಒರ್ವ ಯೂನಿಟ್ ಸದಸ್ಯ ಹೇಳುವಂತೆ ಚಿತ್ರದ ನಾಯಕ ರಣ್‌ಬೀರ್ ಕಪೂರ್ ಅವರೂ ಸೇರಿದಂತೆ ಎಲ್ಲಾ ಜನರು ತಮಗೆ ಒಂದು ದಿನದ ಬ್ರೇಕ್ ಸಿಗುತ್ತಿದೆ ಎಂದು ಖುಷಿಯಾದರು, ಆದರೆ ಕತ್ರಿನಾರಿಗೆ ಇದರಿಂದ ನಿರಾಶೆಯಾಗಿತ್ತು. ಒಂದು ದಿನವನ್ನು ವ್ಯರ್ಥಗೊಳಿಸುವುದು ಅವರಿಗೆ ಸ್ವಲ್ಪವೂ ಸರಿಯೆನಿಸಲಿಲ್ಲ.

ಕತ್ರಿನಾರಿಗೆ ಪ್ರತಿ ದಿನವೂ ದುಡಿಯುವುದು ಇಷ್ಟ ಮತ್ತು ಖಾಲಿಯಾಗಿ ಕುಳಿತಿರುವುದು ಅವರಿಗಿಷ್ಟವಿಲ್ಲ. ಈಗ ಗೊತ್ತಾಯ್ತಲ್ಲ ಬಾಲಿವುಡ್ ರಾಣಿಯಾಗಿ ಮೆರೆಯುತ್ತಿರುವ ಕತ್ರಿನಾ ಯಶಸ್ಸಿನ ಗುಟ್ಟೇನೆಂದು.....
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ರಿನಾ ಕೈಫ್, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ, ರಣ್ಬೀರ್ ಕಪೂರ್