ಫ್ಲಾಪ್ ಚಿತ್ರಗಳ ಹೊರತಾಗಿಯೂ ಕರೀನಾ ಕಪೂರ್ ನಿರ್ಮಾಪಕರ ನೆಚ್ಚಿನ ಆಯ್ಕೆಯಾಗಿದ್ದಾರೆ ಮತ್ತು ಅವರು ತಮ್ಮ ಪ್ರತಿ ಚಿತ್ರಗಳಿಗಾಗಿಯೂ ಬಹಳ ಶ್ರಮ ವಹಿಸುತ್ತಿದ್ದಾರೆ. ನಿರಂತರವಾಗಿ ದುಡಿಮೆಯಲ್ಲಿ ನಿರತರಾಗಿರುವ ಕರೀನಾ ಸುಸ್ತಾಗಿದ್ದಾರೆ. ಅತಿಯಾದ ದುಡಿಮೆಯ ಕಾರಣದಿಂದ ಅವರು ಅರೋಗ್ಯವೂ ಕೆಟ್ಟಿತ್ತು.
ಆದರೆ, ಅನಾರೋಗ್ಯಕ್ಕೆ ಕಾರಣ ಹೆಚ್ಚಿನ ದುಡಿಮೆ ಅಲ್ಲ, ಬದಲಾಗಿ 'ಜೀರೊ ಫಿಗರ್' ಬೆಳಿಸಿಕೊಳ್ಳುವ ಬರದಲ್ಲಿ ತಮ್ಮ ದೇಹವನ್ನು ಅತಿಯಾಗಿ ದಂಡಿಸಿದ್ದರಿಂದ ಅವರು ಅರೋಗ್ಯ ಕೆಡಿಸಿಕೊಂಡರು ಎನ್ನುತ್ತಾರೆ ಹಲವರು.
ಅದೇನೇ ಇರಲಿ, ಕರೀನಾ ಈಗ ವಿಶ್ರಾಂತಿ ತೆಗೆದುಕೊಳ್ಳುವ ಮೂಡ್ನಲ್ಲಿದ್ದಾರೆ ಮತ್ತು ತಮ್ಮ ಬಿಗಿಯಾದ ವೇಳಾಪಟ್ಟಿಯಲ್ಲಿ ಒಂದು ವಾರದ ರಜೆಯನ್ನು ಅವರು ಪಡೆದಿದ್ದಾರೆ. ಕರೀನಾ ತಮ್ಮ ರಜಾದಿನಗಳನ್ನು ಫ್ರಾನ್ಸ್ನಲ್ಲಿ ಕಳೆಯಲಿದ್ದಾರೆ ಏಕೆಂದರೆ ಇದು ಕರೀನಾರ ನೆಚ್ಚಿನ ತಾಣ.
ತಮ್ಮ ರಜಾದಿನಗಳನ್ನು ತಮ್ಮ ನೆಚ್ಚಿನ ತಾಣದಲ್ಲಿ ಕಳೆಯಲಿರುವ ಕರೀನಾಗೆ ಅವರ ಮೆಚ್ಚಿನ ವ್ಯಕ್ತಿ ಜೊತೆ ನೀಡುತ್ತಾರೆ. ಅವರು ಯಾರೆಂದು ಬೇರೆಯದಾಗಿ ಹೇಳಬೇಕಾಗಿಲ್ಲ ತಾನೇ.... ಒಂದು ವಾರ 'ಸೈಫೀನಾ' ತಮ್ಮದೇ ಲೋಕದಲ್ಲಿ ವಿಹರಿಸಲಿದ್ದಾರಂತೆ...