ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಯುಟಿವಿ ಚಿತ್ರದಲ್ಲಿ ಜಾನ್ ಜೊತೆ ಧೋನಿ...!
ಸುದ್ದಿ/ಗಾಸಿಪ್
Feedback Print Bookmark and Share
 
ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕ್ಯಾಮೆರಾ ಸಾಂಗತ್ಯ ಇಷ್ಟ. ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಅಥವಾ ರ‌್ಯಾಂಪ್‌ಗಳಲ್ಲಿ ಹೆಜ್ಜೆ ಹಾಕುವ ಯಾವುದೇ ಅವಕಾಶವನ್ನು ಅವರು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ಅವರು ಈ ಅಭಿನಯವನ್ನೂ ಪೂರ್ಣ ಆತ್ಮವಿಶ್ವಾಸದೊಂದಿಗೆ ಮಾಡುತ್ತಾರೆ. ಇದನ್ನು ಅವರ ಜಾಹೀರಾತು ಚಿತ್ರಗಳಲ್ಲಿ ನೋಡಬಹುದು.

ಯುಟಿವಿಯ 'ಹುಕ್ ಯಾ ಕ್ರುಕ್' ಚಿತ್ರಕ್ಕೆ ಧೋನಿ ಸಹಿ ಹಾಕಿದ್ದಾರೆ ಎಂಬ ಸುದ್ದಿಗಳಿವೆ. ಈ ಚಿತ್ರವನ್ನು ಡೇವಿಡ್ ಧವನ್ ನಿರ್ದೇಶಿಸಲಿದ್ದಾರೆ ಮತ್ತು ಚಿತ್ರ ಕ್ರಿಕೆಟ್ ಮೇಲೆ ಆಧಾರಿತವಾಗಿದೆ ಎಂದು ಹೇಳಲಾಗುತ್ತಿದೆ. ಜಾನ್ ಅಬ್ರಹಾಂ ಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿದ್ದಾರೆ.

ಮೂಲಗಳ ಪ್ರಕಾರ ಧೋನಿಗೆ ಚಿತ್ರದ ಕಥೆ ಹಿಡಿಸಿತು ಆದ್ದರಿಂದ ಅವರು ಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಅಭಿನಯಿಸಲು ಧೋನಿಯವರನ್ನು ಒಪ್ಪಿಸುವಲ್ಲಿ ಜಾನ್ ಅಬ್ರಹಾಂ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
PTI

ಜಾನ್ ಮತ್ತು ಧೋನಿಯವರ ನಡುವೆ ಉತ್ತಮ ಸ್ನೇಹವಿದೆ ಮತ್ತು ಕೆಲವು ಸಾಮ್ಯತೆಗಳೂ ಇವೆ. ಜಾನ್ ಮತ್ತು ಧೋನಿ ಈ ಹಿಂದೆ ಉದ್ದನೆಯ ಕೂದಲು ಬೆಳೆಸಿದ್ದರು. ಇಬ್ಬರೂ ಬೈಕ್ ಪ್ರಿಯರು. ಕಳೆದ ವರ್ಷ ಜಾನ್‌ರ ಗೋಲ್ ಚಿತ್ರ ಬಿಡುಗಡೆಯಾಗುವ ಸಂದರ್ಭ ವಿಶೇಷ ಶೊ ಒಂದಕ್ಕೆ ಜಾನ್, ಧೋನಿಯನ್ನು ಅಮಂತ್ರಿಸಿದ್ದರು.

ಧೋನಿ ಅವರು ನಿಭಾಯಿಸಬಹುದಾದಂತಹ ಪಾತ್ರವೊಂದು ಚಿತ್ರದಲ್ಲಿರುವುದು ಜಾನ್‌ಗೆ ತಿಳಿದಾಗ ಅವರು ಧೋನಿಯನ್ನು ಒಪ್ಪಿಸಿದರು. ಕ್ರಿಕೆಟ್ ಮೈದಾನದಂತೆ ಅಭಿನಯ ರಂಗದಲ್ಲೂ ಧೋನಿ ರಾರಾಜಿಸುತ್ತಾರೆ ಎಂಬುದು ಜಾನ್ ವಿಶ್ವಾಸ ಎಂಬುದಾಗಿ ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಹೇಂದ್ರ ಸಿಂಗ್ ಧೋನಿ, ಜಾನ್ ಅಬ್ರಹಾಂ, ಹುಕ್ ಯಾ ಕ್ರುಕ್ ಯುಟಿವಿ