ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸೂಪರ್ ಸ್ಟಾರ್ ರಜನಿಕಾಂತ್‌ರ 59ನೇ ಹುಟ್ಟುಹಬ್ಬ
ಸುದ್ದಿ/ಗಾಸಿಪ್
Feedback Print Bookmark and Share
 
IFM
ಕನ್ನಡ ಮೂಲದ ರಜನಿಕಾಂತ್ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್. ರಜನಿಕಾಂತ್ ತಮ್ಮ 59ನೇ ಹರೆಯಕ್ಕೆ ಇಂದು ಕಾಲಿಸಿರಿಸಿದ್ದಾರೆ. ಡಿಸಂಬರ್ 12, 1949ರಲ್ಲಿ ರಜನಿ ಜನಿಸಿದ್ದರು. ರಜನಿಯ ಮೂಲ ನಾಮಧೇಯ ಶಿವಾಜಿ ರಾವ್ ಗಾಯಕ್ ವಾಡ್.

ಇವರು ತಮ್ಮ ಫಿಲ್ಮಿ ಕೆರಿಯರ್‌ನ ಹೊರತಾಗಿ ಲೋಕೋಪಕಾರಿ ಮನೋಭಾವಕ್ಕಾಗಿ ಜನಜನಿತರು ಮತ್ತು ಉತ್ತಮ ಮಟ್ಟದ ರಾಜಕೀಯ ಪ್ರಭಾವವನ್ನೂ ಹೊಂದಿದ್ದಾರೆ. ಚಿತ್ರರಂಗದಲ್ಲಿ ನಟನೆಯಷ್ಟೇ ಅಲ್ಲದೇ ಸ್ಕ್ರಿಪ್ಟ್ ರೈಟರ್, ಚಿತ್ರ ನಿರ್ಮಾಪಕ ಮತ್ತು ಹಿನ್ನಲೆ ಗಾಯಕನಾಗಿಯೂ ರಜನಿಕಾಂತ್ ದುಡಿದಿದ್ದಾರೆ.

ಚಿತ್ರರಂಗಕ್ಕೆ ಬರುವ ಮುನ್ನ ಸಾಮಾನ್ಯ ಕುಟುಂಬ ಹಿನ್ನಲೆಯ ರಜನಿಕಾಂತ್ ಬೆಂಗಳೂರಿನಲ್ಲಿ ಆನೇಕ ವೃತ್ತಿಗಳನ್ನು ಮಾಡಿದ್ದಾರೆ. ಅವರು ಸ್ಟೇಜ್ ಶೊಗಳನ್ನು ನೀಡುತ್ತಿದ್ದರು. ತಮ್ಮ ಮನೆಯ ಸಮೀಪದ ಬೆಟ್ಟದಲ್ಲಿನ ರಾಮ ಹುನುಮಾನ್ ದೇವಾಲಯದಲ್ಲಿ ಅವರು ಸ್ಟಂಟ್‌ಗಳನ್ನು ಪ್ರದರ್ಶಿಸುತ್ತಿದ್ದರು. ನಂತರ ಅವರು ಬೆಂಗಳೂರು ಮೆಟ್ರೋಪೋಲಿಟನ್ ಟ್ರಾನ್ಸ್‌ಪೋರ್ಟ್‌ನಲ್ಲಿ ಬಸ್ ಕಂಡಕ್ಟರ್ ಆಗಿ ದುಡಿದರು. ಇಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ, ಟಿಕೆಟ್ ನೀಡುವ, ಶಿಳ್ಳೆ ಹೊಡೆಯುವ ಶೈಲಿ ಹಾಗೂ ಇನ್ನೂ ಆನೇಕ ರೀತಿಯಿಂದ ಅವರು ಪ್ರಯಾಣಿಕರ ಗಮನ ಸೆಳೆದರು. ಈ ಸಂದರ್ಭವೇ ಅವರು ಆನೇಕ ಸ್ಟೇಜ್ ಪ್ಲೆಗಳಲ್ಲಿ ನಟಿಸಿ ತಮ್ಮ ನಟನಾ ಕಲೆಯನ್ನು ಪೋಷಿಸಿದರು.

ಬಸ್ ಡ್ರೈವರ್ ರಾಜ್ ಬಹದ್ದೂರ್ ಅವರ ಸಹಾದಿಂದ 1973ರಲ್ಲಿ ರಜನಿ ಮದ್ರಾಸ್ ಚಿತ್ರತರಬೇತಿ ಸಂಸ್ಥೆಗೆ ಸೇರಿಕೊಂಡರು. ತರಬೇತಿ ಕೇಂದ್ರದಲ್ಲಿ ಉಪ ಪ್ರಾಂಶುಪಾಲ ಎ. ಪ್ರಭಾಕರನ್ ರಜನಿ ಅವರಿಗೆ ಸಹಾಯ ಒದಗಿಸಿದರು.

ಚಿತ್ರರಂಗಕ್ಕಿಳಿದ ನಂತರ ರಜನಿ ಹಿಂತಿರುಗಿ ನೋಡಿದ್ದೇ ಇಲ್ಲ. ತಮಿಳು ಚಿತ್ರಪ್ರೇಮಿಗಳ ಅರಾಧ್ಯ ದೈವ ಎನಿಸಿಕೊಂಡಿರುವ ರಜನಿಕಾಂತ್ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ. ಇಂಗ್ಲೀಷ್ ಮತ್ತು ಬೆಂಗಾಳಿ ಭಾಷೆಗಳಲ್ಲಿ ಒಟ್ಟು 173 ಚಿತ್ರಗಳಲ್ಲಿ ನಟಿಸದ್ದಾರೆ.

ತಮ್ಮ 31ನೇ ವಯಸ್ಸಿನಲ್ಲಿ ಅವರು ಲತಾ ಪಾರ್ಥಸಾರಥಿ ಎಂಬಾಕೆಯನ್ನು ವರಿಸಿದರು. ಐಶ್ವರ್ಯ ಮತ್ತು ಸೌಂದರ್ಯ ರಜನಿಕಾಂತ್‌ರ ಇಬ್ಬರು ಕುವರಿಯರು. ಲತಾ ಪ್ರಸ್ತುತ ಆಶ್ರಮ ಎಂಬ ಶಾಲೆಯನ್ನು ನಡೆಸಿಕೊಂಡಿದ್ದಾರೆ.

ರಜನಿಕಾಂತ್ ದೈವಭಕ್ತಿ, ಧಾರ್ಮಿಕ ಚಟುವಟಿಕೆಗಳು ಮತ್ತು ಆಧ್ಯಾತ್ಮದಲ್ಲಿ ಹೆಚ್ಚಿನ ನಂಬಿಕೆ ಉಳ್ಳವರಾಗಿದ್ದಾರೆ. ಅವರು ಆಗಾಗ್ಗೆ ಹಿಮಾಲಯ ಮತ್ತು ತಿರುಪತಿಗಳಿಗೆ ಯಾತ್ರೆ ಕೈಗೊಳ್ಳತ್ತಾರೆ. ಅವರ ಪ್ರಕಾರ ಹಿಮಾಲಯ ಶಾಂತಿಯನ್ನು ಒದಗಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ನಂತರ ಅವರು ಹಿಮಾಲಯ ಮತ್ತು ತಿರುಪತಿಗಳಿಗೆ ಪ್ರವಾಸ ಕೈಗೊಳ್ಳತ್ತಾರೆ.

ಇವಿಷ್ಟು ಸೂಪರ್ ಸ್ಟಾರ್ ರಜನಿ‌ಕಾಂತ್ ಬದುಕಿನ ಇಣುಕುನೋಟ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಜನಿಕಾಂತ್, ತಮಿಳು, ಸೂಪರ್ಸ್ಟಾರ್