ಕಮಾಂಡೊ ತರಬೇತಿ ಪಡೆದ ಅಮೀರ್
![](/img/cm/searchGlass_small.png)
ಗಜನಿ ಆಕ್ಷನ್ ಚಿತ್ರ. ಅಮೀರ್ ಖಾನ್ ಚಿತ್ರದಲ್ಲಿ ಹಲವಾರು ದುಷ್ಟರೊಂದಿಗೆ ಹೋರಾಡುತ್ತಾರೆ. ಇಂತಹ ದೃಶ್ಯಗಳಲ್ಲಿ ವಾಸ್ತವಿಕತೆ ಕಾಣಿಸಲು ಅಮೀರ್ ಖಾನ್ ಎಂಟು ಪ್ಯಾಕ್‌ಗಳುಲ್ಲ ದೇಹದಾರ್ಢ್ಯ ಬೆಳೆಸಿಕೊಂಡರು.ಈ ಚಿತ್ರದಲ್ಲಿ ಶಸ್ತ್ರಗಳ ಉಪಯೋಗ ಕಡಿಮೆ, ಹೆಚ್ಚಾಗಿ ಆಕ್ಷ್ಯನ್ ದೃಶ್ಯಗಳಿವೆ ಅಮೀರ್ ಬರಿಗೈಯಲ್ಲೇ ಹೊಡೆದಾಡಿದ್ದಾರೆ. ಇದಕ್ಕಾಗಿ ಅಮೀರ್ ಖಾನ್ ಮಾಜಿ ಕಮಾಂಡೊ ಒಬ್ಬರಿಂದ ತರಬೇತಿ ಪಡೆದುಕೊಂಡಿದ್ದಾರೆ. ಮೂಗದಾರ ಎಳೆದ ಸೆನ್ಸಾರ್ಗಜನಿಯಲ್ಲಿ ಹಿಂಸೆ ತಾಂಡವವಾಡುತ್ತದೆ. ಆದ್ದರಿಂದ ಸೆನ್ಸಾರ್‌ಗೆ ಚಿತ್ರ ತೋರಿಸುವ ವೇಳೆ ಅಮೀರ್ ಮತ್ತು ನಿರ್ದೇಶಕ ಎ.ಆರ್.ಮುರುಗದಾಸ್ ಸ್ವಲ್ಪಮಟ್ಟಿಗೆ ನರ್ವಸ್ ಆಗಿದ್ದರು. ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಮೂರು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಬೇಕೆಂಬ ಆದೇಶ ಹೊರಡಿಸಿಬಿಟ್ಟಿತು.ನಿರ್ದೇಶಕರು ಈ ದೃಶ್ಯಗಳನ್ನು ಉಳಿಸಿಕೊಳ್ಳಲು ಬಯಸಿದಲ್ಲಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ನೀಡುವುದಾಗಿ ಸೆನ್ಸಾರ್ ಶರತ್ತು ಮುಂದಿಟ್ಟಿತು. ತಮ್ಮ ಚಿತ್ರ ಕೇವಲ ವಯಸ್ಕರಿಗೆ ಸೀಮಿತವಾಗುವುದು ಅಮೀರ್‌ಗೆ ಇಷ್ಟವಿರಲಿಲ್ಲ ಆದ್ದರಿಂದ ಅವರು ದೃಶ್ಯಕ್ಕೆ ಕತ್ತರಿ ಹಾಕಲು ಒಪ್ಪಿಕೊಂಡರು. ಅಮೀರ್, ವಿಲನ್‌ಗೆ ಚೆನ್ನಾಗಿ ಚಚ್ಚಿ, ಆತನ ಹೊಟ್ಟೆಗೆ ನಲ್ಲಿಯನ್ನು ಹುಗಿಸಿಬಿಡುತ್ತಾರೆ ಮತ್ತು ನಲ್ಲಿಯನ್ನು ಓಪನ್ ಮಾಡಿದಾಗ ಅದರಿಂದ ರಕ್ತ ಹೊರ ಹರಿಯತೊಡಗುತ್ತದೆ, ಕತ್ತರಿ ಪ್ರಯೋಗಿಸಬೇಕಾಗಿರುವ ದೃಶ್ಯಗಳಲ್ಲಿ ಈ ದೃಶ್ಯವೂ ಸೇರಿದ್ದು ಇದು ನಿರ್ದೇಶಕರಿಗೆ ಇಷ್ಟವಿರಲಿಲ್ಲ. ಗುರುದಾಸ್ ಪ್ರಕಾರ ಚಿತ್ರದ ತೂಕದ ದೃಶ್ಯಗಳಲ್ಲಿ ಇದೂ ಒಂದು. ಮೂಲ ಚಿತ್ರದಲ್ಲಿ ಈ ದೃಶ್ಯವನ್ನು ಪಾಸು ಮಾಡಲಾಗಿದ್ದರೂ ರಿಮೇಕ್‌ನಲ್ಲಿ ನಪಾಸು ಮಾಡಿದ್ದೇಕೆ ಎಂಬುದು ಅವರಿಗರ್ಥವಾಗುತ್ತಿಲ್ಲ.ಏರುಗತಿಯಲ್ಲಿ ಗಜನಿ ಪ್ರಚಾರತಮ್ಮ ಗಜನಿ ಚಿತ್ರದ ಪ್ರಚಾರದಲ್ಲಿ ಅಮೀರ್ ವ್ಯಸ್ತರಾಗಿದ್ದಾರೆ. ಇತ್ತೀಚೆಗೆ ಕೆಲವು ಸಿನಿಮಾಮಂದಿರಗಳ ಸಿಬ್ಬಂದಿಗಳ ಕೇಶವಿನ್ಯಾಸವನ್ನು ಗಜನಿ ಸ್ಟೈಲ್‌ಗೆ ಬದಲಾಯಿಸಿದ್ದಾರೆ.ಅಮೀರ್ ಅಂಬೋಣದಂತೆ, ರಬ್ನೆ ಬನಾ ದಿ ಜೋಡಿ ಚಿತ್ರ ನೋಡಲು ಬರುವ ದರ್ಶಕರಿಗೆ ಸಿಬ್ಬಂದಿಗಳನ್ನು ನೋಡಿದಾಗ ಗಜನಿ ನೆನಪಾಗುತ್ತದೆ ಮತ್ತು ಏನನ್ನೂ ಹೇಳದೆಯೇ ಪ್ರಚಾರ ಸಿಗುತ್ತದೆ. ಹೇಗಿದೆ ಅಮೀರ್ ಐಡಿಯಾ....