ತಮಿಳು ಚಿತ್ರನಟಿ ಲಕ್ಷ್ಮಿ ರೈ ಸುದ್ದಿಯಲ್ಲಿದ್ದಾರೆ, ಇದು ಅಂತಹ ಉತ್ತಮ ಕಾರಣಕ್ಕೇನು ಅಲ್ಲದಿದ್ದರೂ, ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ದೋನಿ ಜೊತೆ ಲಕ್ಷ್ಮಿ ಹೆಸರು ತಳುಕು ಹಾಕಿಕೊಂಡು ಬಹಳಷ್ಟು ತರುಣಿಯರ ಮನಸ್ಸಿಗೆ ಕಿಚ್ಚಿಟ್ಟಿದಂತೂ ನಿಜ.
ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಸಂದರ್ಭವೂ ಧೋನಿ ಮತ್ತು ಲಕ್ಷ್ಮಿ ಭೇಟಿಯಾಗಿದ್ದರು ಎಂದು ವರದಿಯಾಗಿತ್ತು, ಆದರೆ ಲಕ್ಷ್ಮಿ ಇದನ್ನು ಬಲವಾಗಿ ನಿರಾಕರಿಸುತ್ತಾರೆ.
"ಇಲ್ಲ. ಈ ಸಲದ ಪಂದ್ಯದ ವೇಳೆ ನಾನು ಅವರನ್ನು ಭೇಟಿಯಾಗಿಲ್ಲ. ನಾನು ಬೇರೆಡೆ ಚಿತ್ರೀಕರಣದಲ್ಲಿ ವ್ಯಸ್ತಳಾಗಿದ್ದೆ" ಎಂದು ಲಕ್ಷ್ಮಿ ಹೇಳಿದ್ದಾರೆ. "ಈ ವದಂತಿಗಳಿಗೆ ಆಧಾರವೇ ಇಲ್ಲ. ನಾನು ಧೋನಿಯವರೊಂದಿಗೆ ಒಂದೆರಡು ಬಾರಿ ಐಪಿಎಲ್ ಪ್ರಚಾರದಲ್ಲಿ ಭಾಗವಹಿಸಿದಾಗಿನಿಂದ ಈ ವದಂತಿಗಳು ಹುಟ್ಟಿಕೊಂಡಿವೆ. ನನ್ನ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಅವರು ಆಗಮಿಸಿದ ನಂತರ ವದಂತಿಗಳು ಇನ್ನೂ ಹೆಚ್ಚಿದವು" ಎಂದು ಮೂಲದಿಂದ ವಿವರಿಸುತ್ತಾರೆ ಲಕ್ಷ್ಮಿ.
ತಾವು ಮತ್ತು ಧೋನಿ ಉತ್ತಮ ಸ್ನೇಹಿತರು ಎಂದು ಒಪ್ಪಿಕೊಳ್ಳುವ ಲಕ್ಷ್ಮಿ ಅದಕ್ಕಿಂತ ಹೆಚ್ಚಿನದೇನು ತಮ್ಮ ನಡುವೆ ಇಲ್ಲ ಎನ್ನುತ್ತಾರೆ.
ಇದೇ ಸಮಯ ಇನ್ನೊರ್ವ ಕ್ರಿಕೆಟಿಗ ಎಸ್.ಶ್ರೀಶಾಂತ್ರೊಂದಿಗೆ ಇದ್ದಿತ್ತು ಎನ್ನಲಾದ ಅಫೇರ್ ಕುರಿತು ಸಹ ಲಕ್ಷ್ಮಿ ಅಂತಹದೇನು ಇರಲೇ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
"ಶ್ರೀಶಾಂತ್ ಮತ್ತು ನಾನು ಮಳಿಯಾಳಿ ಮ್ಯಾಗಜಿನ್ ಒಂದಕ್ಕೆ ಫೋಟೊ ಶೂಟ್ಗಾಗಿ ಬೇಟಿಯಾಗಿದ್ದೆವು. ಆದರೆ ಕೆಲವು ಜನರು, ಅದರಲ್ಲೇ ಕೆಲವು ಫೋಟೊಗಳನ್ನು ಆರಿಸಿ ತಮ್ಮ ಆಧಾರವಿಲ್ಲದ ವದಂತಿಗಳಿಗೆ ಉಪಯೋಗಿಸಿಕೊಂಡರು" ಎಂದು ಲಕ್ಷ್ಮಿ ದೂರಿಕೊಂಡಿದ್ದಾರೆ.
PTI
ತಮ್ಮ ಇತ್ತೀಚಿನ ತಮಿಳು ಚಿತ್ರ ಧಾಮ್ ಧೂಮ್ನ ಯಶಸ್ಸಿನ ಖುಷಿಯಲ್ಲಿರುವ ಲಕ್ಷ್ಮಿ 'ಮುತಿರೈ' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.
ಅಂತೂ ನಮ್ಮ ಕ್ರಿಕೆಟಿಗರು ಲಕ್ಷ್ಮಿಪ್ರಿಯರಲ್ಲ ಎಂದಾಯ್ತು...!