ಹ್ಯಾಪಿ ಬರ್ತಡೇ ಜಾನ್...

ಇಂದು (ಡಿಸೆಂಬರ್ 17) ಬಾಲಿವುಡ್ ಹಾಟಿ ಜಾನ್ ಅಬ್ರಹಾಂ 36ರ ಹರೆಯದವರಾಗುತ್ತಾರೆ. ಈ ವರ್ಷದ ಕೊನೆ ಅವರ ಪಾಲಿಗೆ ಸಂತೋಷದಾಯಕವಾಗಿದೆ. ಜಾನ್ ಅಭಿನಯದ 'ದೋಸ್ತಾನ' ಚಿತ್ರ, ದೇಶ ವಿದೇಶಗಳಲ್ಲಿ ಚೆನ್ನಾಗಿ ಓಡುತ್ತಿದೆ. ಚಿತ್ರದಲ್ಲಿನ ಅರೆನಗ್ನ ಜಾನ್‌ರನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಮುಂಬರುವ ಚಿತ್ರ 'ನ್ಯೂಯಾರ್ಕ್'ನಲ್ಲಿ ಜಾನ್ ಪೂರ್ಣನಗ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿದೆ.ಕೆಲವೊಂದು ಚಿತ್ರಗಳಲ್ಲಿ ಅಂಗಪ್ರದರ್ಶನಕ್ಕಾಗಿಯೇ ನಾಯಕಿಯರನ್ನು ಉಪಯೋಗಿಸಿಕೊಳ್ಳುವಂತೆ ಜಾನ್‌ರನ್ನು ಸಹ ನಿರ್ಮಾಪಕ-ನಿರ್ದೇಶಕರು ಅದೇ ರೀತಿ ಬಳಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಜಾನ್ ಅಭಿನಯಕ್ಕಿಂತ ಹೆಚ್ಚು ತಮ್ಮ ದೇಹದ ಬಗ್ಗೆಯೇ ಹೆಚ್ಚು ಶ್ರಮ ವಹಿಸುತ್ತಾರೆ. ಅಭಿನಯಕ್ಕಾಗಿ ಜಾನ್‌ಗೆ ಯಾವುದೇ ಪ್ರಶಸ್ತಿ ಬಂದಿಲ್ಲವಾದರೂ, ದೇಹದಾರ್ಢ್ಯಕ್ಕಾಗಿ 2008ರ ಏಷ್ಯಾದ ಅತ್ಯಂತ ಸೆಕ್ಸಿ ಪುರುಷನೆಂಬ ಪ್ರಶಸ್ತಿ ಒಲಿದಿದೆ. ಜಾನ್‌ಗೆ ತಮ್ಮ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೇನೆಂದು ಅರಿವಾಗಿದೆ. ಜಾನ್ ಮಾಧ್ಯಮಗಳು ರೂಪಿಸಿದ ಸ್ಟಾರ್. ಬಿಪಾಶ ಬಸುರೊಂದಿಗಿನ ಗೆಳೆತನ, ಉದ್ದ ಕೂದಲು ಮತ್ತು ಬೈಕ್ ಪ್ರೇಮದಿಂದಾಗಿ ಜಾನ್ ಹೆಚ್ಚಾಗಿ ಚರ್ಚೆಯಲ್ಲಿದ್ದರು. ಜಾನ್‌ರ ಇಮೇಜ್ ರೂಪಿಸಿದ್ದು ಅದಿತ್ಯ ಚೋಪ್ರಾರ 'ಧೂಮ್'. ಫ್ಲಾಫ್ ಚಿತ್ರಗಳ ಹೊರತಾಗಿಯೂ ಜಾನ್‌ಗೆ ಅವಕಾಶಗಳು ಒಲಿದಿದ್ದು, ಜಾನ್ ಜನಪ್ರೀಯರು ಎಂದು ನಿರ್ಮಾಪಕರಿಗೆ ಅನಿಸಿದ್ದರಿಂದ. ಜಾನ್ ಪ್ರಾಮಾಣಿಕರಾಗಿ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ. ಮಾಧ್ಯಮಗಳು ಮತ್ತು ಅಭಿಮಾನಿಗಳ ಕಾರಣದಿಂದ ತಮಗೆ ಚಿತ್ರಗಳು ಸಿಗುತ್ತಿವೆ ಎಂಬುದು ಅವರಿಗೆ ತಿಳಿದಿದೆ.ಈಗ ಜಾನ್ ಕೈಯಲ್ಲಿ ಕೆಲವು ಉತ್ತಮ ಚಿತ್ರಗಳಿವೆ, ಇವುಗಳಲ್ಲಿ ನಾಗೇಶ್ ಕಾಕನೂರ್‌ರ 'ಅಶಾಯೇ' ಮತ್ತು ಕಬೀರ್ ಖಾನ್‌ರ 'ನ್ಯೂಯಾರ್ಕ್' ಪ್ರಮುಖವಾದವು. ಭವಿಷ್ಯದಲ್ಲಿ ಜನ ತಮ್ಮ ಅಬಿನಯದ ಬಗ್ಗೆಯೂ ಮಾತನಾಡಿಕೊಳ್ಳುತ್ತಾರೆ ಎಂಬುದು ಜಾನ್ ನಿರೀಕ್ಷೆ. ಅದೇನೇ ಇರಲಿ, ಹಾಟ್ ಸ್ಟಾರ್ ಜಾನ್‌ಗೆ ಹುಟ್ಟುಹಬ್ಬದ ಶುಭಕೋರಣವೇ...