'ಸೈಜ್ ಜೀರೊ' ಭೂತ ಕರೀನಾ ಕಪೂರ್ ತಲೆ ಮೇಲೆ ಎಷ್ಟರ ಮಟ್ಟಿಗೆ ಏರಿತ್ತು ಎಂದರೆ ಅವರು ಅಭಿನಯದ ಕಡೆಗೆ ಕಡಿಮೆ ಮತ್ತು ಸೈಫ್‌ಗಿಂತಲೂ ಹೆಚ್ಚು ಸೈಜ್ ಜೀರೊ ಕಡೆ ಹೆಚ್ಚು ಗಮನ ವಹಿಸಿದ್ದರು. ಊಟ-ತಿಂಡಿ ಎಲ್ಲವನ್ನೂ ಅರ್ಧಕ್ಕಿಳಿಸಿದ್ದರು. ಕೊನೆಗೆ ಅರೋಗ್ಯ ಕೈ ಕೊಟ್ಟಿತು, ಆದರೆ ಇದರಿಂದ ಆದ ಒಂದು ಉಪಯೋಗವೇನೆಂದರೆ ಕರೀನಾ ತಲೆಯಿಂದ ಸೈಜ್ ಜೀರೊ ಭೂತ ಕೆಳಗಿಳಿಯಿತು.
ಕರೀನಾ ಹೆಚ್ಚು ಚಿಂತೆ ಮಾಡದೆ ಚೆನ್ನಾಗಿ ತಿನ್ನುವುದು-ಕುಡಿಯುವುದನ್ನು ಆರಂಭಿಸಿದರು ಮತ್ತು ಅವರು ಈಗ ಹಿಂದಿಗಿಂತ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಪತ್ರಕರ್ತನೊಬ್ಬ ನಿಮ್ಮ ಸೈಜ್ ಜೀರೊ ಕತೆ ಏನಾಯಿತು ಎಂದು ಕೇಳಿಯೇ ಬಿಟ್ಟ.
ಅದಕ್ಕೆ ಕರೀನಾ, ತಾವು ಮುಂಬರುವ ಚಿತ್ರದಲ್ಲಿ ವಿವಾಹಿತ ಗೃಹಿಣಿಯ ಪಾತರ ವಹಿಸುತ್ತಿರುವುದಾಗಿ ಮತ್ತು ಅದಕ್ಕಾಗಿ ಸ್ವಲ್ಪ ದಪ್ಪಾಗಾಗಿ ಕಾಣಿಸಬೇಕಾಗಿದೆ ಎಂದು ತಿಳಿಸಿದರು. ಇದೇ ಕಾರಣಕ್ಕೆ ತೂಕ ಹೆಚ್ಚಿಸಿಕೊಂಡಿರುವುದಾಗಿ ಉತ್ತರಿಸಿದರು.
ವಾಹ್, ನಮ್ಮ ಬೆಬೊ ಎಷ್ಟು ಬುದ್ಧಿವಂತೆ, ತಮ್ಮ ಜೀರೊ ಫಿಗರ್ ವಿಷಯ ಮುಚ್ಚಿಟ್ಟರು....