ಪ್ರಿಯಾಂಕ ಚೋಪ್ರಾರ ವೃತ್ತಿ ಜೀವನದ ಬಗ್ಗೆ ಮಾತನಾಡಲಾಗುತ್ತಿದೆ, ಪ್ರಿಯಾಂಕ ಇದುವರೆಗೆ ಯಾವುದೇ ಚಿತ್ರದಲ್ಲಿ ಚುಂಬನ ದೃಶ್ಯ ಮಾಡಿಲ್ಲ. ಆದರೆ ಬಾಲಿವುಡ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕೆಂದರೆ ಎಲ್ಲಾ ರೀತಿಯ ದೃಶ್ಯಗಳನ್ನು ಮಾಡಬೇಕಾಗುತ್ತದೆ ಎಂಬುದು ಅವರಿಗೆ ವೇದ್ಯವಾಗಿದೆ.
ವಿಶಾಲ್ ಭಾರದ್ವಾಜ್‌ರ ಕಾಮಿನೆ ಚಿತ್ರಕ್ಕಾಗಿ ಪ್ರಿಯಾಂಕ ಮೊದಲ ಚುಂಬನ ದೃಶ್ಯ ನೀಡಿದರು. ಈ ದೃಶ್ಯವನ್ನು ಶಾಹಿದ್ ಕಪೂರ್ ಮತ್ತು ಪ್ರಿಯಾಂಕ ನಡುವೆ ಚಿತ್ರೀಕರಿಸಲಾಗಿದೆ. ಈ ಚುಂಬನ್ ದೃಶ್ಯ ಅತ್ಯಂತ ಉತ್ತಮವಾಗಿ ಬಂದಿದ್ದು ಚಿತ್ರದ ಅತ್ಯುತ್ತಮ ದೃಶ್ಯಗಳಲ್ಲೊಂದು ಎಂದು ಮೂಲಗಳು ತಿಳಿಸಿವೆ.
ವಿಫಲ ಚಿತ್ರಗಳಿಂದ ವಿಚಲಿತರಾಗಿದ್ದ ಪ್ರಿಯಾಂಕ ಈಗ ಅಂಗ ಪ್ರದರ್ಶನದ ಕುರಿತು ಉದಾರಿಯಾಗಿದ್ದಾರೆ. ಕರಣ್ ಜೋಹಾರ್‌ರ ದೋಸ್ತಾನ ಚಿತ್ರವನ್ನು ಬಿಕಿನಿ ತೊಡಲು ಇಷ್ಟವಿಲ್ಲದ ಕಾರಣ ಐಶ್ವರ್ಯ ರೈ ನಿರಾಕರಿಸಿದ್ದರು, ಆದರೆ ಪ್ರಿಯಾಂಕ ಈ ಅವಕಾಶವನ್ನು ಬಾಚಿಕೊಂಡುಬಿಟ್ಟರು.
ಕಾಮಿನೆ ಚಿತ್ರದಲ್ಲಿ ಪ್ರಿಯಾಂಕ ಮರಾಠಿ ಮಾತನಾಡುವ ಮಧ್ಯಮ ವರ್ಗದ ಹುಡುಗಿ. ಪ್ರಿಯಾಂಕ ತಮ್ಮ ಪಾತ್ರದಲ್ಲಿ ವಾಸ್ತಾವಿಕತೆ ಮೂಡಿಸಲು ಟೀಚರ್ ಒಬ್ಬರಿಂದ ಮರಾಠಿ ಕಲಿತಿದ್ದಾರೆ. ಕಾಮಿನೆ ಚಿತ್ರ 2009ರ ಪ್ರಮುಖ ಚಿತ್ರಗಳಲ್ಲೊಂದು.