ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಗಜನಿ ಬಗ್ಗೆ ಆಸಿನ್ ಅಂಬೋಣ
ಸುದ್ದಿ/ಗಾಸಿಪ್
Feedback Print Bookmark and Share
 

IFM
ಗಜನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವ ದಕ್ಷಿಣದ ನಟಿ ಆಸಿನ್ ಈ ಮೊದಲು ಇತರ ಭಾಷೆಗಳಲ್ಲಿ 17 ಚಿತ್ರಗಳಲ್ಲಿ ನಟಿಸಿದ್ದಾರೆ.

"ಮುಂಬಯಿಯಲ್ಲಿ ನನ್ನನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು ಮತ್ತು ದಕ್ಷಿಣ ಭಾರತೀಯ ಚಿತ್ರಗಳಿಂದ ಹಿಂದಿ ಚಿತ್ರರಂಗಕ್ಕೆ ನನ್ನ ಪಯಣ ಸುಗಮವಾಗಿತ್ತು" ಎಂದು ಆಸಿನ್ ಹೇಳಿದ್ದಾರೆ. ತಮ್ಮನ್ನು ಡೆಬ್ಯೂಟ್ ಮಾಡುತ್ತಿರುವ ನಟಿ ಎಂದು ಕರೆಯುತ್ತಿದ್ದುದು ತಮಾಷೆಯಾಗಿತ್ತು ಎಂದು ಕೊಚ್ಚಿನ್‌ನಲ್ಲಿ ಜನಿಸಿದ ಆಸಿನ್ ಹೇಳುತ್ತಾರೆ. "ಗಜನಿ ನನ್ನ 18ನೇ ಚಿತ್ರ. ನಾನು ಈಗಾಗಲೇ ಮಲೆಯಾಳಂ, ತಮಿಳು ಮತ್ತು ತೆಲುಗುಗಳಲ್ಲಿ 17 ಚಿತ್ರಗಳಲ್ಲಿ ನಟಿಸಿದ್ದೇನೆ" ಎಂದು ಅವರು ಹೇಳುತ್ತಾರೆ.

ಗಜನಿ ಚಿತ್ರದಲ್ಲಿ ಅಮೀರ್ ಖಾನ್ ಎದುರು ಆಸಿನ್‌ತಮ್ಮ ಮೊದಲ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಗಜನಿ ಗುರುವಾರ(ಡಿಸೆಂಬರ್ 24) ರಂದು ಬಿಡುಗಡೆಯಾಗಲಿದೆ.

ಗಜನಿ ಚಿತ್ರ ತಮಿಳಿನಲ್ಲಿ 2005ರಲ್ಲಿ ಬಿಡುಗಡೆಯಾಗಿತ್ತು, ಅದರಲ್ಲೂ ಆಸಿನ್‌ರೇ ನಾಯಕಿಯಾಗಿದ್ದರು. ಪ್ರಸ್ತುತ ದಕ್ಷಿಣದ ಚಿತ್ರಭಿಮಾನಿಗಳು ಗಜನಿಯ ಹಿಂದಿ ಅವೃತ್ತಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಎಂದು ಆಸಿನ್ ಹೇಳುತ್ತಾರೆ.

ಚಿತ್ರದಲ್ಲಿ ತಮ್ಮ ಪಾತ್ರ ಕಲ್ಪನಾ ಬಗ್ಗೆ ಮಾತನಾಡುತ್ತಾ, ಕಲ್ಪನಾ ಜಾಹೀರಾತು ರಂಗದಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಬಯಕೆ ಹೊಂದಿರುವ ಮಧ್ಯಮ ವರ್ಗದ ಸರಳ ಮತ್ತು ಸಾಮಾನ್ಯ ಹುಡುಗಿ. ಚಿತ್ರದಲ್ಲಿ ಅಮೀರ್ ಖಾನ್ ಪಾತ್ರವಾದ ಸಂಜಯ್ ಸಿಂಗಾನಿಯಾ ಲುಕ್‌‌ಗಾಗಿ ನಿರ್ಮಾಪಕರು ಬಹಳ ಶ್ರಮ ವಹಿಸಿದ್ದರೆ ನನ್ನ ಲುಕ್‌ ಅನ್ನು ಸರಳವಾಗಿಡಲು ಅಷ್ಟೇ ಪ್ರಯತ್ನ ಮಾಡಲಾಗಿದೆ ಎಂದು ಆಸಿನ್ ಹೇಳಿದ್ದಾರೆ.

ಹಿಂದಿ ಅವೃತ್ತಿಯಲ್ಲಿ ನಿರ್ದೇಶಕ ಎ.ಅರ್ ಮುರುಗೇಶನ್ ಮತ್ತು ನನ್ನನ್ನು ಹೊರತು ಪಡಿಸಿ ಉಳಿದ ತಂಡ ಹೊಸದು. ಆಕ್ಷನ್ ದೃಶ್ಯಗಳಲ್ಲಿ ಮತ್ತು ಕ್ಲೈಮಾಕ್ಸ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ನನ್ನ ಪಾತ್ರವನ್ನು ಮುಟ್ಟಲಾಗಿಲ್ಲ ಎಂದು ಹೇಳಿದ ಆಸಿನ್, ಒಂದೇ ಪಾತ್ರವನ್ನು ಎರಡು ಬಾರಿ ನಿರ್ವಹಿಸುವ ಅವಕಾಶ ದೊರಕಿದ ನಾನು ಅದೃಷ್ಟಶಾಲಿ ಎಂದು ಹೇಳಲು ಮರೆಯುವುದಿಲ್ಲ.

IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಜನಿ, ಆಸಿನ್, ಅಮೀರ್ ಖಾನ್, ಎಅರ್ ಮುರುಗೇಶನ್