ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಾರುಖ್‌ಗೆ ಸ್ಪರ್ಧೆ ನೀಡಲಾರೆ: ಅಮೀರ್
ಸುದ್ದಿ/ಗಾಸಿಪ್
Feedback Print Bookmark and Share
 

IFM
ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಮಾತಿನ ಸಮರದ ನಡುವೆ, ಗಜನಿ ಸ್ಟಾರ್ ಅಮೀರ್, ಬಾಲಿವುಡ್‌ನ ನಿಜವಾದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೊರತು ಮತ್ತಾರೂ ಅಲ್ಲ ಎಂದು ಘೋಷಿಸಿದ್ದಾರೆ.

"ನನ್ನ ಪಾಲಿಗೆ ಅಮಿತಾಬ್ ಬಚ್ಚನ್ ನಂಬರ್ 1. ಅಮಿತಾಬ್ ಬಚ್ಚನ್, ಲತಾ ಮಂಗೇಶ್ಕರ್, ಸಚಿನ್ ತೆಂಡುಲ್ಕರ್ ನಾವು ನಂಬರ್ 1 ಎಂದು ಹೇಳಿಕೊಳ್ಳುತ್ತಾರಾ?. ನಂಬರ್ ಒನ್ ಪಟ್ಟದ ಮೇಲೆರುವ ಯಾವ ವ್ಯಕ್ತಿಗೂ ನಾನು ನಂಬರ್ ಒನ್ ಎಂದು ಕೂಗಿ ಹೇಳುವುದರ ಅವಶ್ಯಕತೆ ಬೀಳುವುದಿಲ್ಲ. ಬೇರೆಯವರು ಮಾತ್ರ ನಾವು ನಂಬರ್ ಒನ್ ಎಂದು ಹೇಳಿಕೊಳ್ಳುತ್ತಲೇ ಇರುತ್ತಾರೆ" ಎಂದು ಅಮೀರ್ ಹೇಳುತ್ತಾರೆ.

ಇತ್ತೀಚಿಗಷ್ಟೇ, ಶಾರುಖ್ ತಾನು ಅತಿ ದೊಡ್ಡ ಬ್ರಾಂಡ್ ಮತ್ತು ಯಾರೂ ಸಹ ನನಗೆ ಸ್ಪರ್ಧೆ ನೀಡುವುದು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುವ ಮೂಲಕ ವಿವಾದ ಸೃಷ್ಟಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಅಮೀರ್, "ನಾನು ಬೇರೆಯವರೊಂದಿಗೆ ಸ್ಪರ್ಧೆಗಿಳಿಯುವುದರಲ್ಲಿ ನಂಬಿಕೆ ಹೊಂದಿಲ್ಲ. ನಾನು ನನ್ನೊಂದಿಗೆ ಸ್ಪರ್ಧಿಸುತ್ತೇನೆ" ಎಂದು ಹೇಳಿದ್ದಾರೆ.

"ನಾನು ಶಾರುಖ್‌ರೊಂದಿಗೆ ಸ್ಪರ್ಧೆಗಿಳಿಯುವ ಧೈರ್ಯ ಮಾಡಬಹುದೆಂದು ನಿಮಗನಿಸುತ್ತದೆಯೇ?. ಅವರು ನನ್ನ ಉತ್ತಮ ಗೆಳೆಯ ಮತ್ತು ನಾನು ಅವರೊಂದಿಗೆ ಹೋರಾಡುವುದು ಸಾಧ್ಯವಿಲ್ಲ. ನಾನು ಅವರನ್ನು ಬಹಳ ಗೌರವಿಸುತ್ತೇನೆ" ಎಂದು ಅಮೀರ್ ಹೇಳಿದ್ದಾರೆ.

IFM
ಬಾಲಿವುಡ್‌ನ ಮೂವರು ಇಡಿಯಟ್ಸ್...

ಅಮೀರ್‌ರ ಮುಂಬರುವ ಚಿತ್ರದ ಹೆಸರು '3 ಇಡಿಯಟ್ಸ್'. ಅಮೀರ್ ಹೇಳುವಂತೆ ಇದು ಸ್ವತಃ ಅವರೂ ಸೇರಿದಂತೆ ಬಾಲಿವುಡ್‌ನ ಮೂವರು ಖಾನ್‌ಗಳಿಗೆ ಸೂಕ್ತ ಹೆಸರು.

"ಗಜನಿ ನಂತರದ ನನ್ನ ಚಿತ್ರ ರಾಜಕುಮಾರ್ ಹಿರಾನಿ ಅವರ '3 ಇಡಿಯಟ್ಸ್' ಮತ್ತು ನಾನು ಆರ್ ಮಾಧವನ್ ಹಾಗು ಸರ್ಮನ್ ಜೋಶಿ ಅವರೊಂದಿಗೆ ಇಡಿಯಟ್ ಪಾತ್ರ ಮಾಡುತ್ತಿದ್ದೇನೆ. ಆದರೆ ನಾನು, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಬಾಲಿವುಡ್‌ನ ನಿಜವಾದ ಮೂವರು ಇಡಿಯಟ್ಸ್‌ಗಳು ಎಂದು ನನಗನಿಸುತ್ತದೆ" ಎಂದು ಅಮೀರ್ ಹೇಳಿದ್ದಾರೆ.

ಸಲ್ಮಾನ್ ಖಾನ್‌ರನ್ನೂ ಅಣಕಿಸಿದ ಅಮೀರ್, ವಿಶೇಷವಾಗಿ ಗಜನಿಗಾಗಿಯೇ ಬೆಳೆಸಿಕೊಂಡ ದೇಹದಾರ್ಢ್ಯವನ್ನು ಜನ ನೋಡಲು ಬಯಸುತ್ತಾರೆಯೇ ಎಂದು ಪ್ರಶ್ನಿಸಿದರು.

"ಯಾರಾದರೂ ನನ್ನ ಎಂಟು ಪ್ಯಾಕ್‌ಗಳನ್ನು ನೋಡಲು ಬಯಸುತ್ತೀರಾ?" ಎಂದು ಅವರು ಪ್ರಶ್ನಿಸಿದರು. ಹೌದು ನಾವು ನೋಡಲು ಬಯಸುತ್ತೇವೆ ಎಂಬ ಉತ್ತರ ಜನರ ಗುಂಪಿನಿಂದ ಬಂತು. ಅದಕ್ಕೆ ಅಮೀರ್, "ಕೇವಲ ಸಲ್ಮಾನ್ ಖಾನ್ ಮಾತ್ರ ತಮ್ಮ ಪ್ಯಾಕ್‌ಗಳನ್ನು ಪ್ರದರ್ಶಿಸಬಲ್ಲರು. ನಾನು ಹೀಗೆ ಮಾಡುವುದು ಸಾಧ್ಯವಿಲ್ಲ. ಅದು ನನ್ನ ಕಾರ್ಯವಲ್ಲ" ಎಂದು ಉತ್ತರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್, ಗಜನಿ