ಗುರುವಾರ ಬಿಡುಗಡೆಯಾಗಬೇಕಿದ್ದ ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಅಮೀರ್ ಖಾನ್‌ರ ಗಜನಿ ಬಿಡುಗಡೆಯನ್ನು ವಿಶ್ವಾದ್ಯಂತ ತಡೆಹಿಡಿಯುವ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ಹೊರಡಿಸಿದೆ.
ಚಿತ್ರೋದ್ಯಮದ ಮಂದಿ ಹೇಳುವಂತೆ 1.2 ಬಿಲಿಯನ್ ರೂ.ಗಳನ್ನು ಅಮೀರ್ ಚಿತ್ರಕ್ಕೆ ಹೂಡಲಾಗಿದೆ.
ಗಜನಿಯ ತಮಿಳು ಅವೃತಿಯ ನಿರ್ಮಾಪಕ ಎ.ಚಂದ್ರಶೇಖರನ್, 'ಹಿಂದಿ ಗಜನಿ ತಯಾರಕರು ರೀಮೆಕ್ ಹಕ್ಕನ್ನು ಹೊಂದಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ' ಎಂದು ಅಪಾದಿಸಿ ದೂರಿತ್ತಿರುವ ಹಿನ್ನಲೆಯಲ್ಲಿ, ನ್ಯಾಯಮೂರ್ತಿ ಪಿ.ಆರ್ ಶಿವಕುಮಾರ್ ಗಜನಿ ಬಿಡುಗಡೆಗೆ ತಡೆಯಾಜ್ಞೆ ಹೊರಡಿಸಿದ್ದಾರೆ.
ಗೀತಾ ಆರ್ಟ್ಸ್ ಮತ್ತು ಗಜನಿ ನಿರ್ದೇಶಕ ಎ.ಆರ್ ಮುರುಗದಾಸ್ ಅವರ ಪರವಾಗಿ ವಕಾಲತ್ತು ನಡೆಸಿದ ವಕೀಲರಾದ ಶಿವರಾಮನ್ ಮತ್ತು ಅಂಬುಮನಿ, ವಿಶ್ವದೆಲ್ಲೆಡೆ ಬಿಡುಗಡೆಗಾಗಿ ಪ್ರಿಂಟ್‌ಗಳನ್ನು ಹಂಚಲಾಗಿದ್ದು ನ್ಯಾಯಾಲಯದ ಆದೇಶವನ್ನು ಅವರಿಗೆ ಮುಟ್ಟಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಬಗ್ಗೆ, ನ್ಯಾಯಮೂರ್ತಿಗಳು, "ಈ ಮನವಿಯನ್ನು ನಾವು ದಾಖಲಿಸುತ್ತೇವೆ. ಅದೇನೇ ಇದ್ದರೂ ವಿಶ್ವಾದ್ಯಂತ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಲಾಗಿದೆ" ಎಂದು ಹೇಳಿದ್ದಾರೆ.
"ಪ್ರಥಮ ಪ್ರತಿವಾದಿ (ಗೀತಾ ಆರ್ಟ್ಸ್)ಗಳು ಯಾರಿಗೆಲ್ಲಾ ಪ್ರಿಂಟ್‌ಗಳನ್ನು ಹಂಚಿದ್ದಾರೊ ಅವೆರೆಲ್ಲರೊಂದಿಗೂ ಅತ್ಯಂತ ವೇಗದ ಮಾಧ್ಯಮದ ಮೂಲಕ ಸಂಪರ್ಕ ಸಾಧಿಸಿ ಚಿತ್ರ ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕು ಮತ್ತು ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಬೇಕು" ಎಂದು ನ್ಯಾಯಾಮೂರ್ತಿ ಹೇಳಿದ್ದಾರೆ.
"ಗೀತಾ ಆರ್ಟ್ಸ್ ಮತ್ತು ಎಆರ್ ಮುರುಗದಾಸ್ ರೀಮೆಕ್ ಹಕ್ಕಿನ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂಬ ನಮ್ಮ ದೂರನ್ನು ಜಡ್ಜ ಒಪ್ಪಿಕೊಂಡಿದ್ದಾರೆ" ವಾದಿಗಳ ಪರವಾಗಿ ಹಾಜರಿದ್ಧ ಎಆರ್ಎಲ್. ಸುಂದರೇಶನ್ ಹೇಳಿದ್ದಾರೆ.
"ನಮ್ಮ ಪ್ರಕರಣ, ಇನ್ನಾವುದೇ ನ್ಯಾಯಾಲಯಗಳಲ್ಲಿರುವ ಇತರ ಪ್ರಕರಣಗಳಿಗೆ ಸಂಬಂಧಿಸಿಲ್ಲ" ಎಂದು ಅವರು ಗಜನಿ ಬಿಡುಗಡೆಗೆ ಮುಂಬಯಿ ಹೈಕೋರ್ಟ್ ಅನುಮತಿ ನೀಡಿರುವ ಬಗ್ಗೆ ಹೇಳಿದ್ದಾರೆ.
ಕೆಬಿಸಿ ಪಿಕ್ಚರ್ಸ್ ತಾವು ಇದೇ ಚಿತ್ರವನ್ನು ಕಹಾನಿ ಗಜನಿ ಕಿ ಎಂಬ ಹೆಸರಿನಡಿ ತಯಾರಿಸುತ್ತಿರುವುದಾಗಿ ಮುಂಬಯಿ ಹೈಕೋರ್ಟ್‌ನಲ್ಲಿ ಕ್ವಾಪಿ ರೈಟ್ ಉಲ್ಲಂಘನೆಯ ಪ್ರಕರಣ ದಾಖಲಿಸಿತ್ತು.
"ನನ್ನ ಪ್ರಕಾರ ನಾಳೆಯ ಒಳಗಡೆ ತಡೆಯನ್ನು ರದ್ದುಗೊಳಿಸಲಾಗುವುದು, ನಾವು ಈ ಬಗ್ಗೆ ಕಾರ್ಯನಿರತರಾಗಿದ್ದೇವೆ" ಗಜನಿ ಚಿತ್ರದ ಭಾರತದ ವಿತರಕರಾದ ಸ್ಟೂಡಿಯೊ 18 ನ ಸ್ಥಳೀಯ ಮುಖ್ಯಸ್ಥರಾದ ಪ್ರವೀಣ್ ತ್ರಿಕಾ ಹೇಳಿದ್ದಾರೆ.
ತಮಿಳು ಚಿತ್ರದ ನಿರ್ಮಾಪಕ, ವಾದಿ ಎ.ಚಂದ್ರಶೇಖರನ್ ಐಎಎನ್ಎಸ್‌ಗೆ ತಿಳಿಸುರುವಂತೆ;
"ಅಪಾದಿತರು (ಗೀತಾ ಆರ್ಟ್ಸ್ ಮಾಲಕ ಅಲ್ಲೂ ಅರವಿಂದ್ ಮತ್ತು ಇತರರು) ಖಾಲಿ ಸ್ಟಾಂಪ್ ಕಾಗದದ ಮೇಲೆ ನನ್ನ ಸಹಿ ತೆಗೆದುಕೊಂಡು ನಾನು ಅವರಿಗೆ ಚಿತ್ರದ ಎಲ್ಲಾ ಹಕ್ಕನ್ನು ನೀಡುವುದಕ್ಕೆ ಒಪ್ಪಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ"
"ಈ ಬಗ್ಗೆ ಎಪ್ರಿಲ್ 2008ರಿಂದ ಮದ್ರಾಸ್ ಹೈ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿತ್ತು ಮತ್ತು ದೇವರ ದಯೆಯಿಂದ ಇಂದು ತೀರ್ಪು ಹೊರಬಿದ್ದಿದೆ"
"ಇದುವರೆಗೆ, ಅಪಾದಿತರು ನನಗೆ ಕೇವಲ 1.6 ಕೋಟಿ(16 ಮಿಲಿಯನ್) ಮೊತ್ತವನ್ನು ಪಾವತಿಸಿದ್ದಾರೆ, ಆದರೆ ಅವರು ಮೂಲ ಮತ್ತು ತೆಲುಗು ಅವೃತ್ತಿಗಳಿಂದ ಡಜನ್‌ಗಟ್ಟಲೆ ಕೋಟಿಗಳನ್ನು ಗಳಿಸಿಕೊಂಡಿದ್ದಾರೆ. ಇದನ್ನು ಇತ್ಯರ್ಥಗೊಳಿಸುವ ನನ್ನ ವಿನಯಪೂರ್ವಕ ಮನವಿಯನ್ನು ಅವರು ಒಪ್ಪಲಿಲ್ಲ. ಈ ಚಿತ್ರದ ಮೇಲೆ 120 ಕೋಟಿ ರೂಪಾಯಿ ಹೂಡಲಾಗಿದೆ ಎಂಬುದು ನನಗೆ ತಿಳಿದಿದೆ, ಇದು ಕೇವಲ ಮೂಲ ಚಿತ್ರವನ್ನು ನಾನು ಹೊಂದಿರುವುದರಿಂದಾಗಿದೆ. ನನಗೆ ಮೋಸ ಮಾಡಲಾಗಿದೆ ಮತ್ತು ನಾನು ಹೋರಾಡದೇ ಬಿಟ್ಟಕೊಡುವುದಿಲ್ಲ"
"ಚಿತ್ರದ ಪ್ರತಿಗಳು ಈಗಾಗಲೇ ಚಿತ್ರಮಂದಿರಗಳನ್ನು ತಲುಪಿವೆ. ಈಗ ಬಿಡುಗಡೆಯನ್ನು ನಿಲ್ಲಿಸುವುದು ಸಾಧ್ಯವಾಗುವುದಿಲ್ಲ" ಎಂದು ದೆಹಲಿ ಮೂಲದ ವಿತರಕ ಜೋಗಿಂದರ್ ಮಹಾಜನ್ ಹೇಳುತ್ತಾರೆ.
"ಇದು ನಿರ್ಮಾಪಕರಿಂದ ಪಬ್ಲಿಸಿಟಿ ಗಿಮಕ್ ಆಗಿರಬಹುದು. ತಡೆಯಾಜ್ಞೆಯನ್ನು ನಾಳೆ ರದ್ದುಗೊಳಿಸಲಾಗುವುದು" ಎಂದು ಅವರು ಹೇಳಿದ್ದಾರೆ.