ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸುಶ್ಮಿತಾಗೆ ಮದುವೆ ಯೋಚನೆ ಬಂದಿದೆಯೇ ?
ಸುದ್ದಿ/ಗಾಸಿಪ್
Feedback Print Bookmark and Share
 
IFM
ತಮ್ಮ ಚಿತ್ರಗಳಿಗಿಂತ ಬಾಯ್‌ಫ್ರೆಂಡ್‌ಗಳಿಂದಾಗಿಯೇ ಸುಶ್ಮಿತಾ ಸೇನ್ ಸುದ್ದಿಯಲ್ಲಿರುತ್ತಾರೆ. ಸುಶ್ಮಿತಾ ಜೀವನದಲ್ಲಿ ಬಾಯ್‌ಫ್ರೆಂಡ್‌ಗಳು ಆಗಮನ-ನಿರ್ಗಮನ ಆಗುತ್ತಲೆ ಇರುತ್ತದೆ, ಆದರೆ ಪ್ರಸಕ್ತ ಗೆಳೆಯ ಮುದಸ್ಸರ್ ಅಜೀಜ್ ಬಗ್ಗೆ ಸುಶ್ಮಿತಾ ಗಂಭೀರವಾಗಿರುವಂತೆ ಕಂಡುಬರುತ್ತಿದೆ.

ಮುದಸ್ಸರ್‌ರನ್ನು ಸುಶ್ಮಿತಾ ತಮ್ಮ ಜೀವನ ಸಂಗಾತಿಯನ್ನಾಗಿಸುವ ಸಾಧ್ಯತೆಗಳಿವೆ. ಈ ಚರ್ಚೆಗೆ ಕಾರಣವಾದದ್ದು ಸುಶ್ಮಿತಾ ಮತ್ತು ಮುದಸ್ಸರ್‌ರ ಕೋಲ್ಕತ್ತಾ ಪಯಣ. ಕೆಲವು ದಿನಗಳ ಹಿಂದೆ ಸುಶ್ಮಿತಾ ತಂದೆಯವರ ಜನ್ಮದಿನವಿತ್ತು. ಈ ಸಂದರ್ಭದ ಸಂಭ್ರಮಾಚರಣೆಗೆ ಸುಶ್, ಮುದಸ್ಸರ್‌ರನ್ನೂ ತಮ್ಮ ಮನೆಗೆ ಕರೆದೊಯ್ದಿದ್ದರು. ಮುದಸ್ಸರ್ ಮೂರು ದಿನಗಳ ಕಾಲ ಸುಶ್ಮಿತಾ ಮನೆಯಲ್ಲಿ ಉಳಿದುಕೊಂಡಿದ್ದರು ಮತ್ತು ಅವರ ತಂದೆಯನ್ನೂ ಭೇಟಿಯಾದರು.

ಸುಶ್ಮಿತಾ ಈವರೆಗೆ ತಮ್ಮ ಯಾವುದೇ ಗೆಳೆಯರನ್ನು ತಮ್ಮ ಮನೆಗೆ ಕರೆದೊಯ್ಯುವುದಾಗಲಿ ಅಥವಾ ಪರಿವಾರದವರಿಗೆ ಪರಿಚಯಿಸುವುದಾಗಲಿ ಮಾಡಿಲ್ಲ. ಮೂಲಗಳ ಪ್ರಕಾರ ಮುದಸ್ಸರ್ ಮತ್ತು ಸುಶ್ಮಿತಾ ಪರಿಚಿತರಾಗಿ ಬಹಳ ಕಾಲ ಸರಿದಿದೆ. ಇಬ್ಬರೂ ಒಟ್ಟಿಗೆ ಸಾಕಷ್ಟು ಕಾಲ ವ್ಯಯಿಸಿದ್ದಾರೆ ಮತ್ತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಆದ್ದರಿಂದ ವಿವಾಹಕ್ಕೆ ಒಪ್ಪಿಗೆ ಪಡೆಯುವುದಕ್ಕಾಗಿಯೇ ಸುಶ್ಮಿತಾ, ಮುದಸ್ಸರ್‌ರನ್ನು ತಂದೆಯೊಂದಿಗೆ ಭೇಟಿ ಮಾಡಿಸಿರಬಹುದು ಎನ್ನಲಾಗುತ್ತಿದೆ.

ಅಂದಹಾಗೆ ವಯಸ್ಸಿನಲ್ಲಿ ಸುಶ್‌ಗಿಂತ ಕಿರಿಯರಾದ ಮುದಸ್ಸರ್, ಸುಶ್ಮಿತಾ ನಾಯಕಿಯಾಗಿರುವ 'ದುಲ್ಹಾ ಮಿಲ್ ಗಯಾ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಫರ್ದಿನ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
IFM

ಮುದಸ್ಸರ್‌ರನ್ನು ಸುಶ್ಮಿತಾ ತಮ್ಮ ಜೀವನಸಂಗಾತಿಯನ್ನಾಗಿಸಿಕೊಳ್ಳುತ್ತಾರ ಅಥವಾ ಅವರ ಹೆಸರು ಸಹ ಸುಶ್ಮಿತಾರ ಮಾಜಿ ಪ್ರಿಯಕರರ ಪಟ್ಟಿಗೆ ಸೇರುತ್ತಾ ಎಂದು ಕಾದು ನೋಡಬೇಕಷ್ಟೇ....
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುಶ್ಮಿತಾ ಸೇನ್, ಮುದಸ್ಸರ್ ಅಜೀಜ್, ದುಲ್ಹಾ ಮಿಲ್ ಗಯಾ