ನಂಗ್ಯಾಕೆ ಇನ್ನೂ ಬಚ್ಚನ್ ಬಿಟ್ಟ ಸಿನಿಮಾಗಳು: ನಾಸಿರುದ್ದೀನ್ ಪ್ರಶ್ನೆ
ಸಿನಿ ರಂಗದ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲೊಬ್ಬರಾಗಿರುವ ನಾಸಿರುದ್ದೀನ್ ಶಾ. ಆದರೆ ಈ ಶಾ, ತನ್ನ ಪ್ರತಿಭೆಗೆ ತಕ್ಕಂತೆ ಸಿನಿಮಾ ರಂಗದಲ್ಲಿ ಬೆಳಗಲಿಲ್ಲ. ಅವರಿಗೆ ಇನ್ನೂ ಅಮಿತಾಬ್ ಬಚ್ಚನ್ ಅವರು ತಿರಸ್ಕರಿಸಿದ ಪಾತ್ರಗಳೇ ಲಭಿಸುತ್ತಿವೆಯಂತೆ.
ಎ ವೆನಸ್ಡೇ ಚಿತ್ರವು ಬಾಕ್ಸ್ ಆಫೀಸ್ ಹಿಟ್. ಈ ಪಾತ್ರ ಮೊದಲು ಅಮಿತಾಬ್ ಕಡೆ ಹೋಗಿ, ಅಲ್ಲಿಂದ ನೋ ಎಂದಾದ ಮೇಲೆ ಅದು ಶಾ ಕಡೆಗೆ ತಿರುಗಿತ್ತು. ಇದೀಗ ಶೂಟ್ ಆನ್ ಸೈಟ್ ಎಂಬ ಚಿತ್ರವೂ ಮೊದಲಿಗೆ ಅತ್ತ ಹೋಗಿ, ಇತ್ತ ಬಂದಾಗ ಮಾತ್ರ ಶಾ ಅವರಿಗೆ ಸಹನೆಯ ಕಟ್ಟೆ ಒಡೆದಿದೆ. ಅವರು ಅದ್ಯಾಕೆ ನನಗಿನ್ನೂ ಅಮಿತಾಬ್ ಬೇಡ ಎಂದ ಅವಕಾಶಗಳೇ ಸಿಗುತ್ತವೆ ಎಂದು ಪ್ರಶ್ನಿಸಿದ್ದಾರೆ.
"ಬದಲಾವಣೆಯೇ ಇಲ್ಲ. ಶ್ರೀಯುತ ಅಮಿತಾಬಚ್ಚನ್ ಬೇಡ ಎಂದು ಹೇಳಿರುವ ಅವಕಾಶಗಳು ನನಗಿನ್ನೂ ಸಿಗುತ್ತಿದೆ. ಎ ವೆನಸ್ಡೇ ಸಿನಿಮಾ ಯಶಸ್ವಿಯಾಗಿದೆ. ಅದು ಸೋಲುತ್ತದೇನೋ ಎಂದು ನಾನು ತಿಳಿದಿದ್ದೆ" ಎಂದು ನಾಸಿರ್ ತನ್ನ ಅಳಲು ತೋಡಿಕೊಂಡಿದ್ದಾರೆ.
ಇದಾದ ಬಳಿಕ ಪರೇಶ್ ರಾವಲ್ ಅವರ 'ಮಹಾರತಿ' ಸಿನಿಮಾಗೆ ಸಹ ಮೊದಲಿಗೆ ಅಮಿತಾಬ್ ಅವರನ್ನು ಕೇಳಲಾಗಿತ್ತು. ಅಲ್ಲೂ ಅಮಿತಾಬ್ ಒಲ್ಲೆನೆಂದಾಗ ಅದು ನಾಸಿರುದ್ದೀನ್ ಶಾ ಅವರಿಗೆ ಒಲಿದಿತ್ತು.