ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಹ್ಯಾಪಿ ಬರ್ತಡೇ ಸಲ್ಮಾನ್ ಖಾನ್...
ಸುದ್ದಿ/ಗಾಸಿಪ್
Feedback Print Bookmark and Share
 
IFM
ಇಂದೋರ್‌ನಲ್ಲಿ 27 ಡಿಸೆಂಬರ್ 1965ಕ್ಕೆ ಜನಿಸಿದ ಸಲ್ಮಾನ್ ಖಾನ್ ಇಂದು 44ನೇ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. 40 ದಾಟಿದರೂ ಸಲ್ಲುಮಿಯಾ ಇಂದಿಗೂ 'ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್'.

ಬಹಳಷ್ಟು ಸ್ಟಾರ್‌ಗಳು ತಾವು ವಿವಾಹವಾಗುವುದರಿಂದ ತಮ್ಮ ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗುವುದು ಎಂದು ಭ್ರಮಿಸಿರುತ್ತಾರೆ ಆದ್ದರಿಂದಲೇ ಅವರ ಮದುವೆಯೆಂದರೆ ಸಿಡಿಮಿಡಿಗೊಳ್ಳುತ್ತಾರೆ. ಅಮೀರ್ ಖಾನ್ 'ಕಯಾಮತ್ ಸೇ ಕಯಾಮತ್ ತಕ್' ಚಿತ್ರ ಬಿಡುಗಡೆಗೆ ಮೊದಲೇ ವಿವಾಹವಾಗಿದ್ದರು ಆದರೆ ಚಿತ್ರ ಫ್ಲಾಫ್ ಆಗಬಹುದೆಂಬ ಭಯದಿಂದ ಅವರ ಮದುವೆ ಸುದ್ದಿಯನ್ನು ಮುಚ್ಚಿಡಲಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅಂತಹ ಪರಿಸ್ಥಿತಿ ಉಳಿದಿಲ್ಲ.

ಆನೇಕ ಪ್ರೇಯಸಿರನ್ನು ಬದಲಿಸಿರುವ ಸಲ್ಮಾನ್ ಈಗ ಮದುವೆಗೆ ಸಿದ್ಧರಾಗಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಆದರೆ ಈಗ ಅವರ ಗೆಳತಿ ಕತ್ರಿನಾ ಕೈಫ್ ಸಿದ್ಧರಿಲ್ಲ. ಎರಡು ವರ್ಷಗಳ ಹಿಂದೆ ಕತ್ರಿನಾ ವಿವಾಹವಾಗಲು ಬಯಸಿದ್ದರು, ಆದರೆ ಸಲ್ಮಾನ್‌ರೇ ಈ ವಿಷಯದಿಂದ ಕತ್ರಿನಾ ಗಮನವನ್ನು ಬೇರೆಡೆ ಹೊರಳಿಸಲು ಚಿತ್ರರಂಗಕ್ಕಿಳಿಯುವ ಸಲಹೆ ನೀಡಿದರು. ಪ್ರಸ್ತುತ ಕತ್ರಿನಾ ಬಾಲಿವುಡ್‌ನ ಅಗ್ರ ಗಣ್ಯ ನಾಯಕಿಯರಲ್ಲಿ ಒಬ್ಬರಾಗಿ ಗುರುತಿಸಲ್ಪಡುತ್ತಾರೆ ಮತ್ತು ಅವರು ಸ್ವಲ್ಪ ಸಮಯದ ನಂತರ ವಿವಾಹವಾಗಲು ಬಯಸುತ್ತಿದ್ದಾರೆ.

ಬಾಲಿವುಡ್ ಕೆರಿಯರ್‌ನ ದೃಷ್ಟಿಯಿಂದಲೂ ಈ ವರ್ಷ ಸಲ್ಮಾನ್ ಪಾಲಿಗೆ ಅಷ್ಟೇನು ಉತ್ತಮವಾಗಿರಲಿಲ್ಲ ಈ ವರ್ಷ ಬಿಡುಗಡೆಯಾದ ಅವರ ಚಿತ್ರಗಳಾವುವು ನೆನಪಿನಲ್ಲಿ ಉಳಿಯುವಂತವುಗಳಲ್ಲ. ಜೊತೆಗೆ ಕತ್ರಿನಾ ಹುಟ್ಟುಹಬ್ಬದ ದಿನ ಶಾರುಖ್‌ರೊಂದಿಗೆ ಕಾದಾಡುವ ಮೂಲಕ ಬಾಲಿವುಡ್‌ನಲ್ಲಿ ಎರಡು ಬಣಗಳನ್ನು ಹುಟ್ಟುಹಾಕಿತ್ತು.

ಸಲ್ಮಾನ್ ಸರಿಯಾದ ಚಿತ್ರಗಳನ್ನು ಆರಿಸಿಕೊಳ್ಳುತ್ತಿಲ್ಲ. ಇಂದೂ ಸಹ ಸಲ್ಮಾನ್‌ಗೆ ಸಾವಿರಾರು ಅಭಿಮಾನಿಗಳಿದ್ದಾರೆ, ಅವರ ಸ್ಟಾರ್ ವ್ಯಾಲ್ಯು ಈಗಲೂ ಕುಸಿತ ಕಂಡಿಲ್ಲ. ಆದರೆ ಸಲ್ಮಾನ್ ಚಿತ್ರಗಳು ಅವರ ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ಮುಟ್ಟುತ್ತಿಲ್ಲ. ಸಲ್ಮಾನ್‌ರ ಮುಂಬರುವ ಚಿತ್ರ ವೀರ್ ಮತ್ತು ಲಂಡನ್ ಡ್ರೀಮ್ಸ್‌ಗಳ ಕುರಿತು ನಿರೀಕ್ಷೆ ಇರಿಸಿಕೊಳ್ಳಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಕತ್ರಿನಾ ಕೈಫ್