ಸಾಮಾನ್ಯವಾಗಿ ನಮ್ಮ ಹುಟ್ಟುಹಬ್ಬಕ್ಕೆ ನಮಗೆ ಇತರರು ಉಡುಗೊರೆ ನೀಡುತ್ತಾರೆ, ಆದರೆ ಬಿಪಾಶ ಬಸು ತಮ್ಮ ಹುಟ್ಟುಹಬ್ಬಕ್ಕೆ ತಮಗೆ ತಾವೇ ಉಡುಗೊರೆ ಕೊಟ್ಟುಕೊಳ್ಳಲಿದ್ದಾರೆ. ಜನವರಿ 7ಕ್ಕೆ ಬಿಪಾಶ ಹುಟ್ಟುಹಬ್ಬ. ಈ ದಿನ ಬಿಪಾಶ ತಮಗೆ ಹೊಸ ಮನೆಯೊಂದನ್ನು ಉಡುಗೊರೆಯಾಗಿ ನೀಡಲಿದ್ದಾರೆ (ಪಡೆಯಲಿದ್ದಾರೆ!).
ಬಿಪಾಶ ಹೇಳುವಂತೆ ಈ ಉಡುಗೊರೆಯ ಬಗ್ಗೆ ಬಹಳ ಹಿಂದೆಯೇ ಯೋಚಿಸಿದ್ದರು ಆದರೆ ಅದು ಈಗ ಪೂರ್ಣಗೊಳ್ಳುತ್ತಿದೆ. ಮನೆಯ ಅಲಂಕಾರದ ಬಗ್ಗೆ ಬಿಪಾಶ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ಎಲ್ಲವನ್ನೂ ಅವರಿಷ್ಟದಂತೆಯೇ ಮಾಡಲಾಗುತ್ತಿದೆ.
ಜಾನ್ ಅಬ್ರಹಾಂ ಮತ್ತು ತಾವು ಇದೀಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಮತ್ತು ತಾವಿಬ್ಬರು ವಿವಾಹವಾಗಲಿದ್ದೇವೆ ಎಂಬುದಾಗಿ ಹರಡಿರುವ ಸುದ್ದಿಗಳನ್ನು ಬಿಪಾಶ ಖಂಡಿಸಿದ್ದಾರೆ. ತಾವು ಜಾನ್‌ರನ್ನು ಖಂಡಿತ ವರಿಸುವುದಾಗಿ ಹೇಳಿದ ಬಿಪಾಶ, ಆದರೆ ಅದು ಸದ್ಯಕ್ಕಿಲ್ಲ. ತಾವೀಗ ಚಿತ್ರಗಳಲ್ಲಿ ನಿರತವಾಗಿರುವುದಾಗಿ ಹೇಳಿದರು. ಯಾರಿಂದಲೂ ಕದ್ದುಮುಚ್ಚಿ ನಿಶ್ಚಿತಾರ್ಥ ಅಥವಾ ವಿವಾಹ ಮಾಡಿಕೊಳ್ಳುವುದಿಲ್ಲ ಬದಲಾಗಿ ಎಲ್ಲರೆದುರೇ ಜಾನ್‌ರನ್ನು ತಮ್ಮವರನ್ನಾಗಿಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.