ಕಳೆದ ವರ್ಷ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭ ಹೆಚ್ಚಿನ ಎಲ್ಲಾ ತಂಡಗಳು ಸಿನಿಮಾ ತಾರೆಗಳನ್ನು ತಮ್ಮ ತಂಡದ ಬ್ರಾಂಡ್ ಅಂಬಾಸೆಡರ್ ಆಗಿ ಆರಿಸಿಕೊಂಡಿದ್ದವು. ಶಾರುಖ್ ಖಾನ್, ಪ್ರೀತಿ ಜಿಂಟಾ ಮತ್ತು ಹೃತಿಕ್ ರೋಶನ್ ಸೇರಿದಂತೆ ಹಲವಾರು ಚಿತ್ರನಟರು ಐಪಿಎಲ್ ತಂಡಗಳೊಂದಿಗೆ ತಳುಕು ಹಾಕಿಕೊಂಡಿದ್ದರು. ದೆಹಲಿ ಡೇರ್ ಡೆವಿಲ್ಸ್ ತಂಡ ಖಿಲಾಡಿ ಇಮೇಜ್ ಹೊಂದಿರುವ ಅಕ್ಷಯ್ ಕುಮಾರ್ರನ್ನು ಆರಿಸಿತ್ತು.
ಈ ಸೀಸನ್ನಲ್ಲಿ ಅಕ್ಷಯ್ ಡೇರ್ ಡೇವಿಲ್ಸ್ ಜೊತೆ ಬಿಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ 2009ರ ವರ್ಷದಲ್ಲಿ ಅತ್ಯಂತ ವ್ಯಸ್ತರಾಗಿದ್ದಾರೆ ಮತ್ತು ಡೇರ್ ಡೇವಿಲ್ಸ್ಗೆ ಪೂರ್ಣ ಜೊತೆ ನೀಡುವುದು ಸಾಧ್ಯವಾಗುವುದಿಲ್ಲ ಆದ್ದರಿಂದ ಬೇರೆಯಾಗುವುದೇ ಒಳಿತೆಂಬ ನಿರ್ಧಾರವನ್ನು ಅಕ್ಕಿ ತೆಗೆದುಕೊಂಡಿದ್ದಾರೆ.
ಡೇರ್ ಡೇವಿಲ್ಸ್ಗೆ ಅಕ್ಷಯ್ ಜೊತೆ ನೀಡದಿದ್ದರೂ ಅವರನ್ನೇ ಬೆಂಬಲಿಸುತ್ತಾರೆ ಮತ್ತು ಅವರು ಸ್ಪರ್ಧೆಯಲ್ಲಿ ವಿಜೇತರಾಗಲಿ ಎಂದು ಬಯಸುತ್ತಾರೆ.