ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ನಟಿಸಲು ಅವಕಾಶ ಸಿಗುವುದಾದರೆ ಮುಕ್ತವಾಗಿಯೂ ಅವರೊಂದಿಗೆ ದುಡಿಯಲು ನಟರು ತುದಿಗಾಲಿನಲ್ಲಿ ನಿಂತಿರುತ್ತಿದ್ದ ಸಮಯವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಅವರ ಸಾವರಿಯಾ ಚಿತ್ರ ಸೋತಿದೆ.
ಈಗ ಬನ್ಸಾಲಿ ನಿರ್ಮಾಪಕರಾಗುವ ಮನಸ್ಸು ಮಾಡಿದ್ದಾರೆ. ಈ ಚಿತ್ರದ ನಿರ್ದೇಶನದ ಹೊಣೆಯನ್ನು ಅವರು ರಿತುಪರ್ಣ ಘೋಷ್‌ರಿಗೆ ವಹಿಸಿದ್ದಾರೆ. ಈ ಚಿತ್ರದಲ್ಲಿ ನಟಿಸುವಂತೆ ಕೋರಲು ಬನ್ಸಾಲಿ, ಕರೀನಾ ಕಪೂರ್‌ರನ್ನು ಸಂಪರ್ಕಿಸಿದರು, ಆದರೆ ಕರೀನಾ ಇಲ್ಲವೆನ್ನಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಮೂಲಗಳ ಪ್ರಕಾರ ಬನ್ಸಾಲಿ ಅವರೇ ನಿರ್ದೇಶಿಸುತ್ತಿದ್ದರೆ ಕರೀನಾ ಚಿತ್ರ ಒಪ್ಪಿಕೊಂಡು ಬಿಡುತ್ತಿದ್ದರು ಆದರೆ ರಿತುಪರ್ಣಲ ನಿರ್ದೇಶಿಸುತ್ತಿದ್ದಾರೆ ಎಂದು ತಿಳಿದಾಗ ಅವರು ಬೇಡವೆಂದು ಬಿಟ್ಟರು.
ಇನ್ನೊಂದು ಕಡೆ, ಬನ್ಸಾಲಿ ಅವರು ತಮ್ಮದೆ ನಿರ್ದೇಶನದಲ್ಲಿ ಇಂಗ್ಲೀಷ್ ಚಿತ್ರವೊಂದನ್ನು ಮಾಡಹೊರಟಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಮತ್ತು ಐಶ್ವರ್ಯ ರೈ ನಟಿಸುತ್ತಿದ್ದಾರೆ.