ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪ್ರಿಯಾಂಕ-ಶಾಹಿದ್‌ಗೆ ಅತಿಥ್ಯ ನೀಡಿದ ಶಾರುಖ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ನವೆಂಬರ್ 26ರ ಮುಂಬಯಿ ಮೇಲಿನ ಉಗ್ರರ ದಾಳಿ ನಡೆದ ಸಂದರ್ಭದ ಹಲವಾರು ವಿಷಯಗಳು ಈಗ ಹೊರಬರುತ್ತಿವೆ. ಹೊಸ ಸುದ್ದಿ ಶಾಹಿದ್ ಕಪೂರ್, ಪ್ರಿಯಾಂಕ ಚೋಪ್ರಾ ಮತ್ತು ಶಾರುಖ್ ಖಾನ್‌ರಿಗೆ ಸಂಬಂಧಿಸಿದ್ದಾಗಿದೆ.

ಮೂಲಗಳ ಪ್ರಕಾರ ತಾಜ್ ಮತ್ತು ಓಬೆರಾಯ್ ಹೋಟೆಲ್‌ಗಳ ಮೇಲೆ ದಾಳಿ ನಡೆದಾಗ ಮುಂಬಯಿಯಲ್ಲೇ ಶಾಹಿದ್ ಮತ್ತು ಪ್ರಿಯಾಂಕ ನಟಿಸುತ್ತಿರುವ ಕಮಿನೆ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರವನ್ನು ವಿಶಾಲ್ ಭಾರದ್ವಾಜ್ ನಿರ್ದೇಶಿಸುತ್ತಿದ್ದಾರೆ.

ಈ ವಿಷಯ ವಿಶಾಲ್‌ರನ್ನು ತಲುಪಿದ ಕೂಡಲೇ ಅವರು ಚಿತ್ರೀಕರಣ ಸ್ಥಗಿತಗೊಳಿಸಿದರು. ಶಾಹಿದ್ ಮತ್ತು ಪ್ರಿಯಾಂಕ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಆಗಲೇ ಮುಂಬಯಿ ಇನ್ನೂ ಕೆಲವು ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರಿಗೆ ಸುದ್ದಿ ಸಿಕ್ಕಿತು. ಆದರೆ ಅವು ಕೇವಲ ವದಂತಿಗಳಾಗಿದ್ದವು.

ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡ ಶಾಹಿದ್ ಮತ್ತು ಪ್ರಿಯಾಂಕಗೆ ಅವರು ಹೋಗುತ್ತಿದ್ದ ದಾರಿಯಲ್ಲೇ ಶಾರುಖ್ ಮನೆ ಇದ್ದುದು ನೆನಪಿಗೆ ಬಂತು. ಶಾಹಿದ್ ಶಾರುಖ್‌ರಿಗೆ ಪೋನಾಯಿಸಿ ಮಾತನಾಡಿದರು ಮತ್ತು ಶಾರುಖ್ ಅವರನ್ನು ಮನೆಗೆ ಆಹ್ವಾನಿಸಿದರು.

ಶಾಹಿದ್ ಮತ್ತು ಪ್ರಿಯಾಂಕರನ್ನು ಶಾರುಖ್ ತಮ್ಮ ಮನೆಗೆ ಸ್ವಾಗತಿಸಿದರು ಮತ್ತು ಪರಿಸ್ಥಿತಿ ಸರಿಹೋಗುವವರೆಗೆ ಅಲ್ಲೇ ಉಳಿದುಕೊಳ್ಳುವಂತೆ ಹೇಳಿದರು. ಆ ದಿನ ರಾತ್ರಿ ಶಾಹಿದ್ ಮತ್ತು ಪ್ರಿಯಾಂಕ ಶಾರುಖ್ ಮನೆಯಲ್ಲೆ ಉಳಿದುಕೊಂಡರು ಮತ್ತು ಮರುದಿನ ಬೆಳಗ್ಗೆ ತಮ್ಮ ಮನೆಗೆ ತೆರಳಿದರು.

ಮೂಲಗಳು ಹೇಳುವಂತೆ ಶಾರುಖ್‌ಗೆ ಈ ವಿಷಯ ಬೇರೆಯವರಿಗೆ ತಿಳಿಯುವುದು ಇಷ್ಟವಿರಲಿಲ್ಲ. ಆದರೆ ವಿಷಯ ಹೊರಗೆ ಬಂತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಹಿದ್ ಕಪೂರ್, ಪ್ರಿಯಾಂಕ ಚೋಪ್ರಾ, ಶಾರುಖ್ ಖಾನ್