ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸ್ವಾತಂತ್ರ್ಯ ದಿನದಂದು 'ಲಂಡನ್ ಡ್ರೀಮ್ಸ್'
ಸುದ್ದಿ/ಗಾಸಿಪ್
Feedback Print Bookmark and Share
 
IFM
ಸ್ವಲ್ಪ ಸಮಯ ಮೊದಲು ನಿರ್ಮಾಪಕರು ಎರಡು ಪ್ರಮುಖ ಹಬ್ಬಗಳ ಸಂದರ್ಭ- ದೀಪಾವಳಿ ಮತ್ತು ಈದ್ ತಮ್ಮ ಚಿತ್ರ ಬಿಡುಗಡೆ ಮಾಡಲು ಬಯಸುತ್ತಿದ್ದರು. ನಂತರ ಇದೇ ರೀತಿ ಕ್ರಿಸ್‌ಮಸ್ ಮತ್ತು ಪ್ರೇಮಿಗಳ ದಿನಗಳು ಚಿತ್ರ ಬಿಡುಗಡೆಗೆ ಪ್ರಶಸ್ತವೆನಿಸತೊಡಗಿದವು. ತದನಂತರ ಗಣರಾಜ್ಯ ದಿ ಮತ್ತು ಈಗ ಸ್ವಾತಂತ್ರ್ಯ ದಿನದಂದು ಸಹ ತಮ್ಮ ಚಿತ್ರ ಮಾಡಲು ನಿರ್ಮಾಪಕರು ಮತ್ತು ವಿತರಕರು ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ವಿಫುಲ್ ಶಾ ತಮ್ಮ ಮಹತ್ವಾಕಾಂಕ್ಷಿ ಚಿತ್ರ ಸಿಂಗ್ ಈಸ್ ಕಿಂಗ್ ಅನ್ನು ಸ್ವಾತಂತ್ರ್ಯ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಅಗಸ್ಟ್ 8ರಂದು ಬಿಡುಗಡೆ ಮಾಡಿದ್ದರು. ಈ ವರ್ಷ, ಅವರು ಸ್ವಾತಂತ್ರ್ಯ ದಿನದಂದು ತಮ್ಮ ಇನ್ನೊಂದು ಮಹತ್ವದ ಚಿತ್ರ ಲಂಡನ್ ಡ್ರೀಮ್ಸ್ ಅನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಚಿತ್ರ ಅಗಸ್ಟ್ 14ರಂದು ಬಿಡುಗಡೆಗೊಳ್ಳುವುದಾಗಿ ದೃಡಪಡಿಸಲಾಗಿದೆ.

ಏತನ್ಮಧ್ಯೆ, ವಿಫುಲ್ ಶಾ ಅವರ ಮುಂದಿನ ಚಿತ್ರವನ್ನು ರಣ್‌ಬೀರ್ ಕಪೂರ್ ನಿರಾಕರಿಸಿದ್ದಾರೆ ಎಂದು ಮಾಧ್ಯಮದ ಒಂದು ವರ್ಗ ವರದಿ ಮಾಡಿತ್ತು. "ಮಾಧ್ಯಮದ ಒಂದು ವರ್ಗ ಕಥೆ ಕಟ್ಟುವುದನ್ನು ಬಹಳ ಇಷ್ಟಪಡುತ್ತದೆ ಮತ್ತು ಅದರಲ್ಲೂ ಕೆಟ್ಟ ವಿಷಯವೇನೆಂದರೆ ಇದು ನಿಜವೇ, ಸುಳ್ಳೆ ಎಂದು ಸ್ಪಷ್ಟಪಡಿಸಿಕೊಳ್ಳುವ ಸೌಜನ್ಯವನ್ನೂ ಅವರು ತೋರುವುದಿಲ್ಲ. ನನ್ನ ಮುಂದಿನ ಚಿತ್ರದ ಬಗ್ಗೆ ಹೇಳುವುದಾದರೆ ಅದರಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ ಮತ್ತು ರಣ್‌ಬೀರ್ ಕಪೂರ್ ಅಲ್ಲ. ಮುಖ್ಯ ಪಾತ್ರಕ್ಕಾಗಿ ನಾನು ರಣ್‌ಬೀರ್‌ರನ್ನು ಸಂಪರ್ಕಿಸಿಲ್ಲ ಮತ್ತು ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ರಣ್‌ಬೀರ್ ನಟಿಸಲು ಒಪ್ಪಿಕೊಳ್ಳಲಾರರು ಎಂಬುದು ನನಗೆ ತಿಳಿದಿದೆ" ಎಂದು ವಿಫುಲ್ ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಫುಲ್ ಶಾ, ಲಂಡನ್ ಡ್ರೀಮ್ಸ್