ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಂತಾರಾಷ್ಟ್ರೀಯ ಚಿತ್ರದಲ್ಲಿ ಸೋನು ಸೂಡ್
ಸುದ್ದಿ/ಗಾಸಿಪ್
Feedback Print Bookmark and Share
 

IFM
ಸೋನು ಸೋಡ್‌ಗೆ 2008ರ ವರ್ಷ ಉತ್ತಮವಾಗಿತ್ತೆಂದೇ ಹೇಳಬಹುದು. ವರ್ಷದ ಎರಡು ಅತಿದೊಡ್ಡ ಬ್ಲಾಕ್ ಬಸ್ಟರ್‌ಗಳಾದ 'ಜೋಧಾ ಅಕ್ಬರ್' ಮತ್ತು 'ಸಿಂಗ್ ಈಸ್ ಕಿಂಗ್' ಚಿತ್ರದಲ್ಲಿ ಸೋನು ನಟಿಸಿದ್ದರು. 'ಏಕ್ ವಿವಾಹ್ ಐಸಾ ಭೀ' ಚಿತ್ರದಲ್ಲಿನ ಅವರ ಅಬಿನಯವೂ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಸೋನು ಮುಂದೆ ಇನ್ನೂ ಉತ್ತಮ ವರ್ಷವಿರುವುದಾಗಿ ಕಂಡುಬರುತ್ತಿದೆ. ಸೋನು ಪ್ರಥಮ ಅಂತಾರಾಷ್ಟ್ರೀಯ ಚಿತ್ರ 'ಸಿಟಿ ಅಫ್ ಲೈಫ್‌'ಗೆ ಸಹಿ ಹಾಕಿದ್ದಾರೆ. ಈ ಚಿತ್ರವನ್ನು ಅಲಿ ಮುಸ್ತಾಫ್ ಅವರು ನಿರ್ದೇಶಿಸುತ್ತಿದ್ದಾರೆ. ಇದು ಒರ್ವ ಯುರೋಪಿಯನ್, ಅರಬ್ ಮತ್ತು ಭಾರತೀಯ, ಈ ಮೂವರಿಗೆ ಕುರಿತಾದ ಚಿತ್ರ.

ಬಾಲಿವುಡ್ ಹಂಗಾಮದೊಂದಿಗೆ ಮಾತನಾಡಿದ ಸೋನು, 'ಸಿಟಿ ಅಫ್ ಲೈಫ್' ಚಿತ್ರದ ಬಗ್ಗೆ ನಾನು ಬಹಳ ಉತ್ಸುಕನಾಗಿದ್ದೇನೆ. ಈ ಚಿತ್ರವನ್ನು "ಫಿಲ್ಮ್ ವರ್ಕ್ಸ್ (ಅಮೆರಿಕಾ) ನಿರ್ಮಾಪಿಸುತ್ತಿದೆ ಮತ್ತು ಕೆಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿರುವ ಮುಸ್ತಾಫ್ ಅಲಿ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ"

ಈ ಚಿತ್ರ ಸೋನುಗೆ ಹೇಗೆ ದಕ್ಕಿತು, ಎಂದು ಪ್ರಶ್ನಿಸಿದರೆ, "ನಿರ್ಮಾಪಕರು 'ಜೋಧಾ ಅಕ್ಬರ್‌'ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿದರು ಮತ್ತು ನನ್ನನ್ನು ಸಂಪರ್ಕಿಸಿದರು. ಚಿತ್ರದಲ್ಲಿ ನಾನು ದುಬೈನಲ್ಲಿ ಟಾಕ್ಸಿ ಡ್ರೈವರ್ ಆಗಿರುವ ಭಾರತೀಯನ ಪಾತ್ರದಲ್ಲಿ ನಟಿಸಿದ್ದೇನೆ. ಆತ ನಟನಾಗುವ ಕನಸು ಕಟ್ಟಿರುತ್ತಾನೆ ಮತ್ತು ನೈಟ್ ಕ್ಲಬ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಾನೆ ಇದರಿಂದ ಯಾವುದಾದರೂ ಚಿತ್ರನಿರ್ಮಾಪಕರು ತನ್ನನ್ನು ಗುರುತಿಸಿ ಪಾತ್ರ ನೀಡುತ್ತಾರೆ ಎಂಬುದು ಅವನ ಆಶಯವಾಗಿರುತ್ತದೆ. ಅಲೆಕ್ಸಾಂಡ್ರಾ ಎಂಬವರು ನನ್ನೆದುರು ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಜನವರಿ ತಿಂಗಳ ಕೊನೆಯಲ್ಲಿ ಆರಂಭಿಸಲಾಗುತ್ತದೆ, ಹೆಚ್ಚಿನ ಭಾಗವನ್ನು ದುಬೈನಲ್ಲಿ ಚಿತ್ರೀಕರಿಸಲಾಗುತ್ತದೆ" ಎನ್ನುತ್ತಾರೆ ಸೋನು.

IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋನು ಸೋಡ್, ಸಿಟಿ ಅಫ್ ಲೈಫ್