ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಾರುಖ್ ಜೊತೆ ನಟಿಸಲು ತೊಂದರೆಯೇನಿಲ್ಲ: ಅಮೀರ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಯಾವುದೇ ಬೇರೆ ನಟನಾಗಿದ್ದರೆ, ಬಾಕ್ಸ್ ಅಫೀಸಿನಲ್ಲಿನ ತಮ್ಮ ಯಶಸ್ಸಿನ ಬಗ್ಗೆ ವಿಶ್ವಕ್ಕೆ ಟಾಮ್ ಟಾಮ್‌ ಮಾಡುವುದರಲ್ಲಿ ನಿರತರಾಗಿರುತ್ತಿದ್ದರು, ಆದರೆ ಗಜನಿ ಸ್ಟಾರ್ ಅಮೀರ್ ಖಾನ್ ಕಾಲು ನೆಲದಲ್ಲಿ ಭದ್ರವಾಗಿ ತಳವೂರಿದೆ. "ಗಜನಿಗೆ ಉತ್ತಮ ಆರಂಭ ದೊರೆಯುವುದು ಎಂಬುದು ನನಗೆ ತಿಳಿದಿತ್ತು ಆದರೆ ಇಷ್ಟೊಂದು ಬೃಹತ್ ಆರಂಭವನ್ನು ನಾನು ನಿರೀಕ್ಷಿಸಿರಲಿಲ್ಲ. ನನಗೆ ಆಶ್ಚರ್ಯವಾಗಿದೆ" ಎಂದು ಅಮೀರ್ ಹೇಳಿದ್ದಾರೆ.

ಗಜನಿ ಈಗಾಗಲೇ ಬಿಡುಗಡೆಯಾಗಿದೆ, ಅಮೀರ್ ಇನ್ನು ರಾಜ್ ಕುಮಾರ್ ಹಿರಾನಿ ಅವರ ನಿರ್ದೇಶಿಸುತ್ತಿರುವ 3 ಇಡಿಯಟ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೂ ತಮ್ಮ ದೇಹಧಾರ್ಡ್ಯವನ್ನು ಉಳಿಸಿಕೊಳ್ಳಲಿದ್ದೀರಾ ಎಂದು ಪ್ರಶ್ನಿಸಿದರೆ, "ಇಲ್ಲ, ಇಲ್ಲ.. ಈ ಚಿತ್ರದಲ್ಲಿ ನಾನು ತೆಳುವಾಗಿ ಕಾಣಿಸಬೇಕೆಂದು ರಾಜು ಬಯಸುತ್ತಿದ್ದಾರೆ, ಆದ್ದರಿಂದ ಕಳೆದ ಕೆಲವು ತಿಂಗಳಿಂದ ನಾನು ವರ್ಕ್ ಔಟ್ ಮಾಡುವುದನ್ನು ನಿಲ್ಲಿಸಿದ್ದೇನೆ. ಈ ಚಿತ್ರದಲ್ಲಿ ನಾನು ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬೇಕು" ಎಂದು ಅಮೀರ್ ಹೇಳುತ್ತಾರೆ.

ಅಮೀರ್ ಮತ್ತು ಶಾರುಖ್ ಖಾನ್ ಜೊತೆಯಲ್ಲಿ ನಟಿಸುತ್ತಾರೆಯೇ ಎಂಬ ಪ್ರಶ್ನೆಗೆ, "ಖಂಡಿತ, ಇದು ಸಾಧ್ಯ! ನಾನು ಶಾರುಖ್‌ರೊಂದಿಗೆ ನಟಿಸಲು ಸಿದ್ಧನಾಗಿದ್ದೇನೆ. ನನಗಾವ ಸಮಸ್ಯೆಯೂ ಇಲ್ಲ. ಒಂದು ವಿಷಯವೇನೆಂದರೆ, ಸ್ಕ್ರಿಪ್ಟ್ ಇಬ್ಬರು ನಟರಿಗೂ ನ್ಯಾಯ ಒದಗಿಸುವಂತಿರಬೇಕು. ನಮ್ಮ ಜೋಡಿಯನ್ನು ಪ್ರಸ್ತುತ ಪಡಿಸಲು ಬಯಸುವ ಬಹಳಷ್ಟು ಸಮರ್ಥ ನಿರ್ದೇಶಕರಿದ್ದಾರೆ" ಎನ್ನುತ್ತಾರೆ ಅಮೀರ್.

ಯಾವುದಾದರೂ ನಿರ್ದೇಶಕರು ಈ ಅಭೂತಪೂರ್ವ, ಅದ್ಭುತ ಜೋಡಿಯನ್ನು ಒಂದಾಗಿಸಬಲ್ಲರೆ?, "ಖಂಡಿತಾ, ಅಸಿತೋಶ್ ಗೊವರಿಕರ್, ಫರಾನ್ ಅಖ್ತರ್, ಮನಿರತ್ನಂ.. ಬಹಳಷ್ಟು ಪ್ರತಿಭಾನ್ವಿತರಿದ್ದಾರೆ. ಉತ್ತಮ ಸ್ಕ್ರಿಪ್ಟ್ ಇರುವುದಾದರೆ ಹೊಸ ನಿರ್ದೇಶಕನೊಂದಿಗೆ ದುಡಿಯಲೂ ನಾನು ಸಿದ್ಧನಿದ್ದೇನೆ" ಎಂದು ಅಮೀರ್ ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೀರ್ ಖಾನ್, ಗಜನಿ, ಶಾರುಖ್ ಖಾನ್