ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಟ್ವಿಂಕಲ್‌ಗಾಗಿ ಅಡುಗೆ ಮಾಡಿದ ಅಕ್ಷಯ್
ಸುದ್ದಿ/ಗಾಸಿಪ್
Feedback Print Bookmark and Share
 
IFM
ಅಕ್ಷಯ್ ಕುಮಾರ್ ಫರ್‌ಫೆಕ್ಟ್ ಪತಿ, ಪತ್ನಿ ಟ್ವಿಂಕಲ್‌ರನ್ನು ಹೇಗೆ ಖಷಿಪಡಿಸಬೇಕೆಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ಅಕ್ಷಯ್ ಟ್ವಿಂಕಲ್ ಹುಟ್ಟುಹಬ್ಬದ ಸಲುವಾಗಿ ದುಬಾರಿ ವೆಚ್ಚದ 3 ಕೋಟಿ ಬೆಲೆಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪತಿಯಿಂದ ಇಷ್ಟೊಂದು ದುಬಾರಿ ವೆಚ್ಚದ ಉಡುಗೊರೆ ಪಡೆದಾಗ ಟ್ವಿಂಕಲ್ ಸಂತಸಕ್ಕೆ ಪಾರವೇ ಇರಲಿಲ್ಲ. ಪತ್ನಿಯ ಹುಟ್ಟುಹಬ್ಬವನ್ನು ಇನ್ನಷ್ಟು ಸ್ಮರಣಾರ್ಹಗೊಳಿಸಲು ಅಕ್ಕಿ, ಟ್ವಿಂಕಲ್‌ರೊಂದಿಗೆ ಅವರ 35ನೇ ಹುಟ್ಟುಹಬ್ಬ ಆಚರಿಸಲು ಗೋವಾಗೆ ತೆರಳಿದರು. ಅಲ್ಲಿ ಪತ್ನಿಗಾಗಿ ಅಡುಗೆ ಭಟ್ಟನಾದ ಅಕ್ಷಯ್ ಸ್ವಾದಿಷ್ಟ ಗುಜರಾತಿ ಅಡುಗೆಯನ್ನು ತಯಾರಿಸಿದರು.

ಅಕ್ಷಯ್ ತಮ್ಮ ಮುಂದಿನ ಚಿತ್ರ 'ಚಾಂದಿನಿ ಚೌಕ್ ಟು ಚೀನಾ'ದಲ್ಲಿನ ಬಾಣಸಿಗ ಪಾತ್ರದಿಂದ ಬಹಳ ಪ್ರಭಾವಿತರಾಗಿದ್ದಾರಂತೆ. ಟ್ವಿಂಕಲ್‌ರ ತಾಯಿ ಡಿಂಪಲ್ ಮತ್ತು ಅಕ್ಷಯ್‌ರ ತಾಯಿ ಅರುಣಾ ಸಹ ದಂಪತಿಗಳ ಜೊತೆ ತೆರಳಿದ್ದರು. ಎಲ್ಲರೂ ಈ ಸಂದರ್ಭವನ್ನು ಬಹಳ ಆನಂದಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಕ್ಷಯ್ ಕುಮಾರ್, ಟ್ವಿಂಕಲ್