ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೇವದಾಸ ಮತ್ತು ಶಾಲಾ ಬಾಲಕಿಯ ರೊಮ್ಯಾನ್ಸ್ !
ಸುದ್ದಿ/ಗಾಸಿಪ್
Feedback Print Bookmark and Share
 
IFM
ದೆಹಲಿಯ ಶಾಲೆಯೊಂದರಲ್ಲಿ ತನ್ನ ಸಹಪಾಠಿಯ ಜತೆ ಕಾಮಕ್ರೀಡೆಗಿಳಿದ ಹುಡುಗಿಯೊಬ್ಬಳ ಬೆತ್ತಲೆ ವೀಡಿಯೋ ಚಿತ್ರಗಳು ಮೊಬೈಲುಗಳಲ್ಲಿ ಹರಿದಾಡಿದ್ದನ್ನು ಯಾರೂ ಮರೆತಿರಲಿಕ್ಕಿಲ್ಲ. 2004ರ ಆ ದಿನಗಳಲ್ಲಿ ಭಾರೀ ಸುದ್ದಿ ಮಾಡಿದ್ದ ಪ್ರಕರಣವಿದು.. ಆ ಅಪ್ರಾಪ್ತ ಬಾಲೆಯ ಅಪ್ರಾಪ್ತ ಕಥೆಗೆ ಸುಣ್ಣ-ಬಣ್ಣ ಹಚ್ಚಿ ಸಿನಿಮಾ ತೆಗೆಯಲು ಹೊರಟಿದ್ದಾರೆ ಅನುರಾಗ್ ಕಶ್ಯಪ್. ಅದೂ ದೇವದಾಸ್ ಮಾದರಿಯಲ್ಲಿ.

ಚಿತ್ರದ ಹೆಸರು 'ದೇವ್. ಡಿ' ಎಂದು. ಅಂದರೆ ಆಧುನಿಕ ದೇವದಾಸ್ ಪಾತ್ರದಲ್ಲಿ ಅಭಯ್ ಡಿಯೋಲ್ ನಟಿಸುತ್ತಿದ್ದಾರೆ. ಚಂದ್ರಮುಖಿಯ ಪಾತ್ರದಲ್ಲಿ ಕಲ್ಕಿ ಕೊಯಿಚ್ಲಿನ್ ಹಾಗೂ ಪಾರುವಿನ ಪಾತ್ರದಲ್ಲಿ ಪಂಜಾಬಿ ನಟಿ ಮಾಹಿ ಗಿಲ್ ಕಾಣಿಸಲಿದ್ದಾರೆ. ಆ ಸೆಕ್ಸ್ ಹಗರಣಕ್ಕೂ ಈ ದೇವದಾಸ್‌ಗೂ ಏನು ಸಂಬಂಧ ಎಂಬುದನ್ನು ಈಗ ಕಲ್ಪಿಸಿಕೊಳ್ಳಲಾಗುತ್ತಿಲ್ಲ. ನಿರ್ದೇಶಕರು ಮಾತ್ರ ಕಥೆ, ನಿರೂಪಣೆ ಬಗ್ಗೆ ಅಪ್ಪಟ ಭರವಸೆ ಹೊಂದಿದ್ದಾರೆ.
IFM

ಸೆಕ್ಸ್ ಹಗರಣವನ್ನು ಆಧಾರವಾಗಿಟ್ಟುಕೊಂಡು ಚಿತ್ರ ಮಾಡುತ್ತಿರುವುದನ್ನು ನಿರ್ಮಾಪಕ ವಿಕಾಸ್ ಬಾಹ್ಲ್ ಖಚಿತಪಡಿಸಿದ್ದಾರೆ. "ಚಿತ್ರದ ಬಹುತೇಕ ಭಾಗ ನೈಜ ಘಟನೆಯನ್ನಾಧರಿಸಿದೆ. ನಮ್ಮ ಪಾತ್ರ ಲಿನಿ (ಕಲ್ಕಿ) ದೆಹಲಿಯ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಹೀಗೆ ಒಂದು ದಿನ ಕ್ಯಾಮರಾಕ್ಕೆ ಸಿಕ್ಕು ಎಲ್ಲವನ್ನೂ ಕಳೆದುಕೊಳ್ಳುತ್ತಾಳೆ. ನಂತರ ಆಕೆಯೇ ಚಂದ್ರಮುಖಿ ಅಂದರೆ ಹೆಚ್ಚು-ಕಡಿಮೆ ಕರೆವೆಣ್ಣಾಗುತ್ತಾಳೆ. ತಂದೆ ತಾಯಿಂದ ಬೇರಾಗುವ ಆಕೆಯ ಜೀವನದ ಮುಂದಿನ ಭಾಗಕ್ಕೆ ಒತ್ತು ಕೊಡಲಾಗಿದೆ" ಎಂದು ವಿಕಾಸ್ ಚಿತ್ರದ ಕಥೆಯನ್ನು ವಿವರಿಸಿದ್ದಾರೆ.

IFM
ಸೆಕ್ಸ್ ಸಂಬಂಧಿತ ಕಥೆ ಬಂದಾಗ ಬಾಲಿವುಡ್ ಮಂದಿ ಚಿತ್ರಗಳನ್ನು ಹೇಗೆ ತೆಗೆಯುತ್ತಾರೆಂದು ಗೊತ್ತೇ ಇದೆ. ಹಾಗಾಗಿ ಇಲ್ಲಿ ಕೂಡ ಹಸಿಬಿಸಿ ದೃಶ್ಯಗಳಿಗೆ ಕೊರತೆಯಿರದು. ಭಾವನೆಗಳತ್ತ ಹೆಚ್ಚು ಗಮನ ನೀಡಲಾಗಿದೆ ಎಂಬುದು ನಿರ್ದೇಶಕರ ಮಾತು. ನಾನು ಶಾರೂಖ್ ಖಾನ್‌ಗೆ ಹೋಲಿಸಲ್ಪಡುತ್ತಿದ್ದೇನೆ ಎಂಬುದು ಅಭಯ್ ಸಂಶಯ. ಒಟ್ಟಾರೆ ನಿರ್ಮಾಪಕರು ದೇವದಾಸ್ ಆಗದಿದ್ದರೆ ಸಾಕು. ಮುಂಬರುವ ಪೆಬ್ರವರಿ 6ರಂದು ಚಿತ್ರ ದೇಶಾದ್ಯಂತ ಬಿಡುಗಡೆಯಾಗಲಿದೆ.
ಎಂಎಂಎಸ್‌ನಲ್ಲಿದ್ದ ದೃಶ್ಯಗಳೆಲ್ಲ 'ದೇವದಾಸ್'ನಲ್ಲೂ ಇರುತ್ತದಾ? ಗೊತ್ತಿಲ್ಲ... ಉತ್ತರಕ್ಕೆ ಇನ್ನೂ ಸ್ವಲ್ಪ ದಿನ ಕಾಯಬೇಕಾಗಿದೆ.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೇವದಾಸ್, ಅಭಯ್ ಡಿಯೋಲ್, ಕಲ್ಕಿ, ದೆಹಲಿ