ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಮುಂಬೈಗೆ 'ಟೋಟಲ್' ತಿರುಗಿಬಿದ್ದ ವರ್ಮಾ
ಸುದ್ದಿ/ಗಾಸಿಪ್
Feedback Print Bookmark and Share
 
ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು ಸಿನಿಮಾ ರಂಗದಲ್ಲಿರುತ್ತಾರೆಯೇ? ಹಾಗಿದ್ದರೆ ಅವರನ್ನು ಸಿನಿಮಾ ಮಂದಿ ಎಂದು ಕರೆಯಲು ಸಾಧ್ಯವಾಗುತ್ತಿರಲಿಲ್ಲವೇನೋ.. ಈಗ ಈ ಮಾತು ಬಾಲಿವುಡ್ ಅಂಗಳದ ಅಂಪೈರ್‌ಗಳಲ್ಲೊಬ್ಬರಾದ ರಾಮ ಗೋಪಾಲ್ ವರ್ಮಾ ಬಗ್ಗೆ.

ಇತ್ತೀಚೆಗಷ್ಟೇ ನಡೆದ ಮುಂಬೈ ಭಯೋತ್ಪಾದಕರ ಅಟ್ಟಹಾಸಕ್ಕೆ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು. ಅದು ತಣ್ಣಗಾಗುವ ಮೊದಲೇ ವರ್ಮಾನೆಂಬ ಆಗಂತುಕ ವಶೀಲಿಬಾಜಿ ಮಾಡಿ ಮಹಾರಾಷ್ಟ್ರ ಸೀಎಂ ಜತೆ ಹೊಟೇಲ್ ತಾಜ್‌ಗೆ ಭೇಟಿ ನೀಡಿದ್ದು ಸುದ್ದಿಯಾಗಿತ್ತು. ವಿವಾದಗಳು ಅಟ್ಟಕ್ಕೇರಿದ ನಂತರ ಸ್ಪಷ್ಟನೆ ಕೊಟ್ಟಿದ್ದ ವರ್ಮಾ, "ನಾನು ಮುಂಬೈ ದಾಳಿಯ ಬಗ್ಗೆ ಸಿನಿಮಾ ಮಾಡುತ್ತಿಲ್ಲ" ಎಂದಿದ್ದರು.
PTI

ಎಲ್ಲರೂ ತೆಪ್ಪಗಾದರು ಎಂದು ತಿಳಿದುಕೊಂಡ ರಾಮ್‌ಗೋಪಾಲ್ ವರ್ಮಾ ತನ್ನ ಮ‌ೂಸೆಯಿಂದ ಅದೇ ಕ್ರೈಮ್ ಸಲಾಕೆಯನ್ನು ಹೊರ ತೆಗೆದು ಸೆನ್ಸಾರ್ ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿಸಿಯ‌ೂ ಬಿಟ್ಟಿದ್ದಾರೆ. ಚಿತ್ರದ ಹೆಸರು 'ಟೋಟಲ್ ಟೆನ್'. ಬದುಕುಳಿದ ಅಜ್ಮಲ್ ಕಸಬ್‌ನನ್ನು ಹೋಲುವ ಚಿತ್ರಗಳು ಸಿನಿಮಾದ ಪೋಸ್ಟರ್‌ನಲ್ಲಿ ಕಂಡು ಬಂದಿದೆ. ಆದರೆ ಎಲ್ಲಿಯೂ ವರ್ಮಾ ಹೆಸರಿಲ್ಲ.. ಪ್ರಕಟಣೆಯಿಲ್ಲ... ಎಲ್ಲವೂ ಲಾಜಿಕ್ ಮತ್ತು ಮ್ಯಾಜಿಕ್.

ಆವತ್ತು ವರ್ಮಾ ಸ್ಪಷ್ಟನೆ ಕೊಟ್ಟಾಗಲೇ ಎಲ್ಲರ ಮನಸ್ಸಿನ ಮ‌ೂಲೆಯಲ್ಲಿ ಸಂಶಯ ಉಳಿದೇ ಇತ್ತು. ಈ ಮನುಷ್ಯ ಸುಮ್ಮನೆ ಕೂರುವ ಜಾಯಮಾನದವರಲ್ಲ. ಎಲ್ಲೋ ಒಂದು ಚಿಕ್ಕ ಕ್ರೈಮ್ ನಡೆದರೆ ಸಾಕು. ಅದನ್ನು ಉದ್ದುದ್ದ ಕೊರೆದು ಕೆಂಬಣ್ಣ ಹಚ್ಚಿ, ಫಿಸ್ತೂಲು ಕೊಟ್ಟು ಲೆಫ್ಟ್ ರೈಟ್ ತೆಗೆಯುವ ಮನುಷ್ಯ ಇಷ್ಟೊಂದು ದೊಡ್ಡ ಘಟನೆ ನಡೆಯುವಾಗ ಸುಮ್ಮನಿದ್ದರೆ... ಪ್ರೇತ, ನಾಮ, ಫಿಸ್ತೂಲು, ಕತ್ತಿ, ರೇಪ್, ಸಸ್ಪೆನ್ಸ್, ಸೆಕ್ಸ್‌ ಹಿಂದೆ ಬಿದ್ದಿರುವ ವರ್ಮಾ ಮುಂಬೈಯಲ್ಲಿ ಗ್ಯಾಲನುಗಟ್ಟಲೆ ರಕ್ತ ಚೆಲ್ಲಿದಾಗ ಮಗುಮ್ಮಾದರೆ... ಅದು ವರ್ಮಾನಿಗೆ ವರ್ಮಾ ಮಾಡಿದ ಅನ್ಯಾಯವಲ್ಲವೇ?

ವರ್ಮಾ ವಿಚಾರ ಬಿಡಿ. ಈ ಬಗ್ಗೆ ಅವರೇನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಅವರ ಹೆಸರಿನಲ್ಲಿ ಚಿತ್ರದ ಹೆಸರು ನೋಂದಾವಣೆಯಾಗಿರುವುದು ಮತ್ತು ಮುಂಬೈಗೆ ದಾಳಿ ಮಾಡಿದ ಉಗ್ರರ ಸಂಖ್ಯೆ ತಾಳೆಯಾಗುತ್ತಿರುವುದು ಈ ಎಲ್ಲಾ ಸಂಶಯಗಳಿಗೆ ಕಾರಣ. ಅದರಲ್ಲೂ ಇಂಟರ್‌ನೆಟ್‌ನಲ್ಲಿ ಟೋಟಲ್ ಟೆನ್ ಚಿತ್ರದ ಪ್ರೊಮೋಗಳು ಕೂಡ ಸಿಗುತ್ತಿವೆ. ಹಾಗಾಗಿ ಸಂಶಯ ಖಾತ್ರಿಯಾಗುತ್ತಿದೆ. ವರ್ಮಾ ತುಟಿ ಬಿಚ್ಚುತ್ತಿಲ್ಲ.

ಇವರಂತೆ ಮುಂಬೈಯ ಹಲವು ಬಿಸಿನೆಸ್‌ವಾಲಾಗಳು ಹೆಸರು ನೋಂದಣಿ ಮಾಡಿಸಿದ್ದಾರೆ. ಶೂಟೌಟ್ ಎಟ್ ತಾಜ್, ಶೂಟೌಟ್ ಎಟ್ ಒಬೇರಾಯ್, ಶೂಟೌಟ್ ಎಟ್ ಸಿಎಸ್‌ಟಿ, ಅಪರೇಷನ್ ಬ್ಲ್ಯಾಕ್ ಟೊರ್ನಾಡೋ, ಅಪರೇಷನ್ ಸೈಕ್ಲೋನ್, ಅಲ್ಟಿಮೇಟ್ ಹೀರೋ, ದಿ ರಿಯಲ್ ಹೀರೋ, ವಾಹ್ 60 ಗಂಟೆ, 26/11, ತಾಜ್ ಟು ಒಬೆರಾಯ್... ಇವೆಲ್ಲ ನೋಂದಣಿಯಾಗಿರುವ ಹೆಸರುಗಳು.

ಮೊದಲು ಯಾರು ಚಿತ್ರದ ಘೋಷಣೆ ಮಾಡುತ್ತಾರೆ ಎಂದು ರಾಮ್‌ಗೋಪಾಲ್ ವರ್ಮಾ ಕಾಯುತ್ತಿದ್ದಾರಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಮ್ಗೋಪಾಲ್ ವರ್ಮಾ, ಟೋಟಲ್ ಟೆನ್, ಮುಂಬೈ, ಚಿತ್ರ