ಸೆಕ್ಸೀ ತಾರೆ ಎಂದೇ ನಾಮಾಂಕಿತ ಕೃಷ್ಣವರ್ಣದ ಸುಂದರಿ ಬಿಪಾಶಾ ಬಸು ಈಗ ಜಾನ್ ಅಬ್ರಹಾಂ ತೆಕ್ಕೆಯಿಂದ ಮೆಲ್ಲನೆ ತನ್ನ ಹಳೆಯ ಬಾಯ್‌ಫ್ರೆಂಡ್ ದಿನೋ ಮೊರಿಯಾ ತೆಕ್ಕೆಗೆ ಮಗ್ಗುಲು ಬದಲಯಿಸಿದ್ದಾಳೆ ಎಂಬ ಗುಲ್ಲು ಈಗ ಬಾಲಿವುಡ್ ತುಂಬೆಲ್ಲ ಹಬ್ಬಿದೆ.
ಜಾನ್ ಅತ್ತ ಲಂಡನ್ನಲ್ಲಿ ತನ್ನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೆ ಇತ್ತ ಬಿಪಾಶಾ ತನ್ನ ಹಳೆಯ ಬಾಯ್‌ಫ್ರೆಂಡ್ ದಿನೋ ಮೊರಿಯಾ ಜತೆಗೆ ಪಾರ್ಟಿಯಲ್ಲಿ ಮಜಾ ಮಾಡುತ್ತಿದ್ದಾಳೆ ಎಂದು ಸುದ್ದಿಯೊಂದು ತೇಲಿ ಬಂದಿದೆ. ಪಾರ್ಟಿಯಲ್ಲಿ ಬಿಪಾಶಾ ಹಾಗೂ ದಿನೋ ಭಾರೀ ಪಟ್ಟಾಂಗ ಹೊಡೆಯುತ್ತಿದ್ದರು. ನಗುತ್ತಾ ತುಂಬ ಹೊತ್ತು ಮಾತನಾಡುತ್ತಿದ್ದುದ್ನು ಹಲವರು ಕಣ್ಣಾರೆ ಕಂಡು ಪರಾಂಬರಿಸಿ ನೋಡಿ ಬಾಲಿವುಡ್ಡಿಗೆಲ್ಲಾ ಟಾಂ ಟಾಂ ಮಾಡಿದ್ದಾರೆ.
ಆದರೆ ಇದನ್ನು ದಿನೋ ಮೊರಿಯಾರ ಆತ್ಮೀಯರು ಮಾತ್ರ ಅಲ್ಲಗಳೆಯುತ್ತಾರೆ. ದಿನೋ ಹಾಗೂ ಬಿಪಾಶಾ ಪಾರ್ಟಿಯಲ್ಲಿ ಪರಸ್ಪರ ಭೇಟಿಯಾದುದೇನೋ ನಿಜ. ಮಾತನಾಡಿದ್ದೂ ನಿಜ. ಆದರೆ ಕೇವಲ ಮಾತನಾಡಿದ ತಕ್ಷಣ ಸಂಬಂಧ ಕಟ್ಟೋದು ಎಂಥಾ ನ್ಯಾಯ ಹೇಳಿ ಎಂದು ಬಿಪಾಶಾ, ದಿನೋ ಪರವಾಗಿ ಮಾತನಾಡಿದ್ದಾರೆ. ದಿನೋ ಕೂಡಾ ಇದನ್ನೇ ಹೇಳುತ್ತಾರೆ. ನಾನು ಬಿಪಾಶಾ ಜತೆಗೆ ಬ್ರೇಕ್ ಅಪ್ ಆದ ನಂತರವೂ ಚೆನ್ನಾಗೇ ಮಾತಾಡುತ್ತೇನೆ. ನಮ್ಮ ನಡುವೆ ಕೋಪ-ತಾಪ ಏನೂ ಇರಲೇ ಇಲ್ಲ. ನಾನು ಬಿಪಾಶಾ ಇಬ್ಬರೂ ಫ್ರೆಂಡ್ಸ್ ಬಿಟ್ಟರೆ ಬೇರೇನೂ ಇಲ್ಲ. ಫ್ರೆಂಡ್ಸ್ ಆಗಿಯೇ ಮುಂದುವರಿಯುತ್ತೇವೆ. ಬಿಪಾಶಾ ಹಾಗೂ ಜಾನ್ ಅಬ್ರಹಾಂ ಇಬ್ಬರೂ ಒಬ್ಬರನ್ನೊಬ್ಬರು ಅಗಾಧವಾಗಿ ಪ್ರೀತಿಸುತ್ತಾರೆ. ಸದ್ಯ ನನ್ನ ಬದುಕಿನಲ್ಲಿ ಯಾರೂ ಇಲ್ಲ. ಹೀಗಿರುವಾಗ ಅವರಿಬ್ಬರ ನಡುವೆ ನನ್ನನ್ಯಾಕೆ ತರುತ್ತೀರಿ. ಇದೆಲ್ಲಾ ಯಾರೋ ಆಗದವರ ಹುಟ್ಟಿಸಿರುವ ಗಾಸಿಪ್. ಕೇವಲ ಸಿಲ್ಲಿ ವಿಚಾರ ಅಷ್ಟೇ ಎಂದು ದಿನೋ ಮಾತು ಹಾರಿಸುತ್ತಾರೆ.
IFM
ಹಾಗಾದರೆ ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ ಒಂದರಲ್ಲಿ ನೀವೇ ಪೋಸ್ಟ್ ಮಾಡಿದ ಬರಹದಲ್ಲಿ, ಬಿಪಾಶಾ ಜತೆಗೆ ನಟಿಸಿದ ರಾಝ್ ಚಿತ್ರವನ್ನು ಪದೇ ಪದೇ ನೋಡಿ ಭಾವುಕರಾಗುತ್ತೀರಂತೆ? ಇದು ಪ್ರೀತಿ ಅಲ್ವಾ? ಎಂದರೆ, ದಿನೋ ಬೇರೆಯೇ ಉತ್ತರ ಹೇಳುತ್ತಾರೆ. ರಾಝ್ ಚಿತ್ರ ನಾನು ಅತಿಯಾಗಿ ಮೆಚ್ಚುವ ನನ್ನ ಚಿತ್ರ. ರಾಝ್ ನನ್ನ ಎರಡನೇ ಚಿತ್ರವೂ ಹೌದು. ಅದು ಸೂಪರ್ ಹಿಟ್ ಚಿತ್ರ. ಹಾಗಾಗಿ ಅದನ್ನು ನಾನು ಪದೇ ಪದೇ ನೋಡುವುದು ಹೌದು. ಜತೆಗೆ ಚಿತ್ರ ನೋಡಿದಾಗಲೆಲ್ಲ ಭಾವುಕನಾಗುತ್ತೇನೆ. ವಿಷಯ ಇಷ್ಟೆ. ಇದಕ್ಕಿಂತ ಹೆಚ್ಚು ಏನೂ ಇಲ್ಲ. ಆದರೆ ಬಿಪಾಶಾಗೂ ಚಿತ್ರಕ್ಕೂ ಸಂಬಂಧ ಕಲ್ಪಿಸಬೇಡಿ ಎನ್ನುತ್ತಾರೆ ದಿನೋ.
ರಾಝ್ ಚಿತ್ರಕ್ಕೂ ಮೊದಲೇ ಅಜ್‌ನಬಿಯಲ್ಲಿ ಬೆಳಕಿಗೆ ಬಂದ ಮಾಡೆಲ್ ಬಿಪಾಶಾ ಬಸು ಬಾಲಿವುಡ್ ತಾರೆಯಾದರೂ, ರಾಝ್ ಬಿಪಾಶಾ ಜೀವನದ ಮೈಲಿಗಲ್ಲು. ಚಿತ್ರದಲ್ಲಿ ದಿನೋ ಮೊರಿಯಾ ನಾಯಕರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗುವ ಜತೆಗೇ ಚಿತ್ರದ ಶೂಟಿಂಗ್ ವೇಳೆ ಬಿಪಾಶಾ ಹಾಗೂ ದಿನೋ ಪ್ರೇಮದಲ್ಲಿ ಬಂಧಿಯಾಗಿದ್ದರು. ಆದರೆ ಮುಂದಿನ ವರ್ಷ ಜಿಸ್ಮ್ ಚಿತ್ರದ ಶೂಟಿಂಗ್ ವೇಳೆ ಜಾನ್ ಅಬ್ರಹಾಂ ಪ್ರೇಮಪಾಶದಲ್ಲಿ ಸಿಲುಕಿದ ಬಿಪಾಶಾ ದಿನೋಗೆ ಕೈಕೊಟ್ಟಿದ್ದಳು.