ಪ್ರಿಯಾಂಕಾ ಛೋಪ್ರಾ ಹಾಗೂ ಶಾಹಿದ್ ಕಪೂರ್ ನಡುವೆ ಇರುವ ಸಂಬಂಧವಾದ್ರೂ ಏನು? ಇದೀಗ ಬಾಲಿವುಡ್ಡಿ ಗಾಸಿಪ್ಪಿಗರ ಮಿಲಿಯನ್ ಡಾಲರ್ ಪ್ರಶ್ನೆ. ಹೋದಲ್ಲೆಲ್ಲಾ ನಾನು ಪ್ರಿಯಾಂಕಾ ಕೇವಲ ಫ್ರೆಂಡ್ಸ್ ಎನ್ನುತ್ತಿರುವ ಶಾಹಿದ್, ಶಾಹಿದ್ ಬಗ್ಗೆ ಸೊಲ್ಲೆತ್ತಿದರೆ ಮೌನವೃತ ಆಚರಿಸುವ ಪ್ರಿಯಾಂಕಾ.. ಎಲ್ಲವೂ ಗಾಸಿಪ್ಪಿಗರಿಗೆ ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಂತೆ. ಬಾಲಿವುಡ್ಡಿನ ಹಾಟ್ ಜೋಡಿ ಎಂದೆಲ್ಲಾ ಶಹಬ್ಬಾಸ್ ಗಿರಿ ಪಡೆದರೂ, ಮೊನ್ನೆ ಮೊನ್ನೆ ಪ್ರಿಯಾಂಕಾಳ ಬರ್ತ್‌ಡೇ ಪಾರ್ಟಿಯಲ್ಲಿ ಶಾಹಿದ್ ಇಲ್ಲದಿದ್ದುದನ್ನು ಕಂಡ ಗಾಸಿಪ್ಪಿಗರು ಶಾಹಿದ್- ಪ್ರಿಯಾಂಕ ಲವ್ ಪಯಣ ಮುಗೀತು ಎಂದಿದ್ದರು. ಆದರೂ ಮತ್ತೆ ಮತ್ತೆ ಅವರಿಬ್ಬರ ಲವ್ ಸ್ಟೋರಿ ಗಾಸಿಪ್ ಕಾಲಂಗಳಿಗೆ ದಿನನಿತ್ಯದ ಸುದ್ದಿ.
IFM
ಈಗ ಅಂಥದ್ದೇ ಇನ್ನೊಂದು ಸುದ್ದಿ ಬಂದಿದೆ. ಅದೇನಪ್ಪಾ ಅಂದರೆ ಮೊನ್ನೆ ಈ ಇಬ್ಬರು ಹಾಟ್ ಜೋಡಿ ಸಾರ್ವಜನಿಕವಾಗಿ ಮುಂಬೈಯ ಥಿಯೇಟರ್ ಒಂದಕ್ಕೆ ಲವ್ ಆಜ್ ಕಲ್ ಚಿತ್ರ ವೀಕ್ಷಿಸಲು ತೆರಳಿದ್ದು ಈಗ ಭಾರೀ ಸುದ್ದಿಯಾಗಿದೆ. ಥಿಯೇಟರ್‌ಗೆ ಚಿತ್ರ ಆರಂಭಕ್ಕಿಂತ 15 ನಿಮಿಷ ಮೊದಲೇ ಥಿಯೇಟರ್‌ಗೆ ಬಂದ ಈ ಜೋಡಿ ನಾಲ್ಕು ಸೀಟುಗಳನ್ನು ಹಿಂದಿನ ಸಾಲಿನಲ್ಲಿ ಮೊದಲೇ ಬುಕ್ ಮಾಡಿದ್ದರು. ಎರಡು ಸೀಟು ತಮಗಾಗಿ, ಹಾಗೂ ಇನ್ನೆರಡು ಸೀಟು ತಮ್ಮ ಅಕ್ಕಪಕ್ಕ ಖಾಲಿಯಾಗಿ ಬಿಡಲೆಂದು ಬುಕ್ ಮಾಡಿದ್ದರು. ಅಕ್ಕಪಕ್ಕ ಕೈಕೈ ಹಿಡಿದು ತುಂಬ ಆಪ್ತವಾಗಿ ಕುಳಿತಿದ್ದ ಶಾಹಿದ್ ಪ್ರಿಯಾಂಕ ಚಿತ್ರದುದ್ದಕ್ಕೂ ನಗುತ್ತಾ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸುತ್ತಾರೆ.
ಹೇಳಿ ಕೇಳಿ ಪ್ರಿಯಾಂಕಾ ಛೋಪ್ರಾ ಪ್ರೀತಿಯನ್ನು ಹೊರಗೆ ತೋರಿಸುವ ಹುಡುಗಿಯಲ್ಲವಂತೆ. ಪ್ರೀತಿಯನ್ನು ಪ್ರದರ್ಶಿಸುವುದು ಪ್ರಿಯಾಂಕಾಗೆ ಸ್ವಲ್ಪವೂ ಇಷ್ಟವಿಲ್ಲವಂತೆ. ಅದು ಸಿನಿಮಾದಲ್ಲಾಗಿರಲಿ ಅಥವಾ ನಿಜಜೀವನದಲ್ಲಾಗಲಿ. ವಿಚಿತ್ರವೆಂದರೆ, ಕಮೀನೇ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ, ಶಾಹಿದ್ ಕಪೂರ್‌ಗೆ ತುಟಿಗೆ ತುರಿ ಸೇರಿಸಿ ಚುಂಬಿಸುವ ದೃಶ್ಯವಿದೆಯಂತೆ. ಈ ದೃಶ್ಯದ ಚಿತ್ರೀಕರಣಕ್ಕೆ ಪ್ರಿಯಾಂಕಾಳನ್ನು ಒಪ್ಪಿಸಲು ನಿರ್ದೇಶಕರು ಪಟ್ಟ ಕಷ್ಟ ಅವರಿಗೇ ಪ್ರಿಯ.
IFM
ಚಿತ್ರಕ್ಕೆ ಪ್ರಿಯಾಂಕಾಳನ್ನು ಒಪ್ಪಿಸುವಾಗ ನಿರ್ದೇಶಕ ವಿಶಾಲ್ ಭಾರದ್ವಾಜ್ ಕಿಸ್ ದೃಶ್ಯವಿದೆ ಎಂದು ಪ್ರಿಯಾಂಕಾಗೆ ಮುಂಚಿತವಾಗಿ ಹೇಳಲೇ ಇಲ್ಲ. ಹೇಳಿದರೆ ಪ್ರಿಯಾಂಕಾ ಒಪ್ಪೋದೇ ಇಲ್ಲ ಅನ್ನೋದೂ ನಿರ್ದೇಶಕರಿಗೆ ಚೆನ್ನಾಗಿ ಗೊತ್ತು. ಚಿತ್ರೀಕರಣ ಸಂದರ್ಭ ಇದು ಪ್ರಿಯಾಂಕಾಗೆ ತಿಳಿಯಿತು. ಆದರೆ ಕಿಸ್ ದೃಶ್ಯದಲ್ಲಿ ಪಾಲ್ಗೊಳ್ಳಲು ಒಪ್ಪಲಿಲ್ಲ. ಆಗಲೇ ಶಾಹಿದ್ ಹಾಗೂ ಪ್ರಿಯಾಂಕಾ ನಡುವೆ ಒಂದು ಮಟ್ಟಿನ ಪ್ರೇಮ ಅಂಕುರಿಸಿತ್ತು. ಆದರೂ ಪ್ರಿಯಾಂಕಾ ಒಲ್ಲೆ ಎಂದಳಂತೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿಯುವವರೆಗೂ ನಿರ್ದೇಶಕ ಎರಡು ತಿಂಗಳ ಕಾಲ ಪ್ರಿಯಾಂಕಾಗೆ ಒಂದೇ ಒಂದು ಕಿಸ್ಸು ಸಾಕು. ಶಾಹಿದ್ ತುಟಿಗೆ ತುಟಿ ಒತ್ತಿದರೆ ಸಾಕು, ಪ್ಲೀಸ್. ಈ ಚಿತ್ರಕ್ಕೆ ಅದು ತುಂಬಾ ಅಗತ್ಯವಿದೆ ಎಂದು ಕಾಡಿ ಬೇಡಿದರೂ ಪ್ರಿಯಾಂಕ ಊಹೂಂ. ಕೊನೆಗೆ ನಿರ್ದೇಶಕ ಚಿತ್ರೀಕರಣವೆಲ್ಲ ಮುಗಿದ ಮೇಲೆ ಶಾಹಿದ್ ಹಾಗೂ ಪ್ರಿಯಾಂಕಾರನ್ನು ಜತೆಯಾಗಿ ಕರೆದರಂತೆ. ಇಬ್ಬರೂ ಬಂದ ಮೇಲೆ ಚಿತ್ರದ ದೃಶ್ಯಗಳನ್ನು ಪ್ಲೇ ಮಾಡಿ ತೋರಿಸಿದರಂತೆ. ಆಗ ಪ್ರಿಯಾಂಕಾಗೆ ಸ್ವತಃ ಚಿತ್ರ ಏನೋ ಕಳೆದುಕೊಂತಿದೆ. ಚಿತ್ರಕ್ಕೆ ಇನ್ನೂ ಏನೋ ಬೇಕಾಗಿದೆ ಎಂದು ಅರ್ಥ ಮಾಡಿಕೊಂಡಂಳಂತೆ. ಕೊನೆಗೂ ಪ್ರಿಯಾಂಕ ಶಾಹಿದ್‌ಗೆ ತುಟಿಗೆ ತನ್ನ ಪ್ರೀತಿಯ ಮುದ್ರೆ ಒತ್ತಿದಳಂತೆ.
IFM
ಇಷ್ಟೆಲ್ಲ ಕಥೆ ನಡೆದರೂ ಮೊನ್ನೆಯ ಸಂದರ್ಶನದಲ್ಲಿ ಶಾಹಿದ್ ಹೇಳೋದು, ನಾವಿಬ್ಬರು ಕೇವಲ ಫ್ರೆಂಡ್ಸ್. ನಾನಿನ್ನೂ ಸಿಂಗಲ್. ನನ್ನ ಡ್ರೀಂಗರ್ಲ್ ಇನ್ನೂ ಬಂದಿಲ್ಲ. ಆಕೆಗಾಗಿ ಕಾಯುತ್ತಿದ್ದೇನೆ. ಆದರೂ, ಸಿಂಗಲ್ ಆಗಿರಲು ನನಗೀಗ ಸದ್ಯಕ್ಕೆ ಖುಷಿಯಿದೆ ಎಂದು!
ಅಂದಹಾಗೆ, ಇವರಿಬ್ಬರು ಜತೆಯಾಗಿ ಮೊದಲ ಬಾರಿ ನಟಿಸಿದ ಕಮೀನೇ ಈಗಷ್ಟೇ ಸೆನ್ಸಾರ್‌ಗೂ ಹೋಗಿ ಬಂದಿದೆ. ಸಿಕ್ಕಿದ್ದು ಎ ಸರ್ಟಿಫಿಕೆಟ್. ಈ ಸರ್ಟಿಫಿಕೆಟ್ ನೋಡಿ ಸ್ವತಃ ಶಾಹಿದ್‌ಗೆ ಆಶ್ಚರ್ಯವಂತೆ. ಸೆನ್ಸಾರ್ ಇದಕ್ಕೆ ಎ ಸರ್ಟಿಫಿಕೆಟ್ ನೀಡಲು ಕಾರಣ ಇದರಲ್ಲಿ ಹಿಂಸೆಯನ್ನು ವಿಜ್ರಂಭಿಸಲಾಗಿದೆ ಎಂಬ ಕಾರಣಕ್ಕಂತೆ. ಆಗಸ್ಟ್ 14ರಂದು ಬಿಡುಗಡೆಗೊಳ್ಳುವ ಕಮೀನೇ ಈಗ ಹಲವರಲ್ಲಿ ಕುತೂಹಲ ಸೃಷ್ಟಿಸಿದೆ.