ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ತಪ್ಪು ಉತ್ತರ: 'ಸ್ಲಮ್‌ಡಾಗ್' ಮೇಲೆ 5 ಕೋಟಿ ರೂ. ಕೇಸು (Slumdog Millionaire | A Nakul Singh Nepali | Surdas | Gopal Singh)
ಸುದ್ದಿ/ಗಾಸಿಪ್
Feedback Print Bookmark and Share
 
ಸ್ಲಮ್‌ಡಾಗ್ ಮಿಲಿಯನೇರ್- ಸಾಕಷ್ಟು ಹಣ, ಹೆಸರಿನೊಂದಿಗೆ ವಿವಾದಗಳನ್ನೂ ಮೆತ್ತಿಕೊಂಡ ವಿದೇಶಿ ನಿರ್ಮಾಪಕರ ಆಸ್ಕರ್ ವಿಜೇತ ಭಾರತೀಯ ಚಿತ್ರ. ಈ ಸಿನಿಮಾದಲ್ಲಿ ಬಳಸಲಾಗಿರುವ 'ಕೌನ್ ಬನೇಗಾ ಕರೋಡ್‌ಪತಿ' ಮಾದರಿಯಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ಕೋರ್ಟ್‌ನಲ್ಲಿ ಮಾನಹಾನಿಕರ ಪ್ರಕರಣ ದಾಖಲಿಸಿರುವ ವ್ಯಕ್ತಿಯೊಬ್ಬರು 5 ಕೋಟಿ ರೂಪಾಯಿಗಳ ಪರಿಹಾರ ಕೇಳಿದ್ದು, ವಿವಾದಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.
Anil Kapoor
IFM


ಎ. ನಕುಲ್ ಸಿಂಗ್ ನೇಪಾಳಿ ಎಂಬುವವರು ಹೈಕೋರ್ಟ್‌ನಲ್ಲಿ ಮಾನಹಾನಿಕರ ಪ್ರಕರಣ ದಾಖಲಿಸಿದವರು. ತನ್ನ ತಂದೆ ಗೋಪಾಲ್ ಸಿಂಗ್‌ರವರು 'ನರ್ಸಿ ಭಗತ್' ಎಂಬ ಸಿನಿಮಾಕ್ಕಾಗಿ 'ದರ್ಶನ್ ದೋ ಘನಶ್ಯಾಮ್' ಎಂಬ ಗೀತೆಯನ್ನು ಬರೆದಿದ್ದು, ಸ್ಲಮ್‌ಡಾಗ್ ಮಿಲಿಯನೇರ್‌ನಲ್ಲಿ ಅಂಧ ಕವಿ ಸುರ್ದಾಸ್‌ ಎಂದು ಹೇಳಲಾಗಿದೆ. ಇದು ತನ್ನ ತಂದೆಯ ಕೀರ್ತಿಗೆ ಅಗೌರವ ತೋರಿಸಿದಂತಾಗಿದೆ ಮತ್ತು ಲೇಖಕನ ನೈತಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನೇಪಾಳಿ ದೂರಿದ್ದಾರೆ.

ಕೆಲಡರ್ ಫಿಲ್ಮ್ಸ್ ಸಂಸ್ಥೆ, ಅದರ ಅಧ್ಯಕ್ಷ ಪೌಲ್ ಸ್ಮಿತ್, ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿಯನ್ ಕಾಲ್ಸನ್, ಚಿತ್ರದ ನಿರ್ದೇಶಕ ಡಾನ್ನಿ ಬೋಯ್ಲೆ, ಚಿತ್ರಕಥೆ ಬರೆದ ಸೈಮನ್ ಬ್ಯೂಫಾಯ್, 'ಡೀಪ್ ಇಮೋಷನ್ಸ್ ಪಬ್ಲಿಷಿಂಗ್' ವ್ಯವಸ್ಥಾಪಕ ನಿರ್ದೇಶಕ ಅಚಿಲ್ ಫೋರ್ಲರ್ ಮತ್ತು ಯುನಿವರ್ಸಲ್ ಮ್ಯೂಸಿಕ್ ಪಬ್ಲಿಷಿಂಗ್ ಗ್ರೂಪ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.
Dev Patel
IFM


ಈ ಸಂಬಂಧ ಆಗಿರುವ ಹಾನಿಗಾಗಿ ಐದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು. ಅಲ್ಲದೆ ತಾನು ಪ್ರಕರಣ ದಾಖಲಿಸಿದ ದಿನದಿಂದ ಪ್ರಕರಣ ಮುಕ್ತಾಯವಾಗುವವರೆಗೆ ಶೇ.21ರಂತೆ ವಾರ್ಷಿಕ ಬಡ್ಡಿ ನೀಡಬೇಕು ಎಂದು ನೇಪಾಳಿ ವಾದಿಸಿದ್ದಾರೆ.

'ದರ್ಶನ್ ದೋ ಘನಶ್ಯಾಮ್ ಎಂಬ ಗೀತೆಯನ್ನು ರಚಿಸಿದವರು ಸುರ್ದಾಸ್' ಎಂಬ ಭಾಗವನ್ನು ಆ ಚಿತ್ರದಿಂದ ಕಿತ್ತು ಹಾಕಬೇಕು ಅಥವಾ ಹೊಸ ಚಿತ್ರೀಕರಣ ನಡೆಸಬೇಕು. ಅಲ್ಲದೆ ಆ ಭಾಗವನ್ನು ಇನ್ನು ಮುಂದೆ ಇಂಟರ್ನೆಟ್ ಸೇರಿದಂತೆ ಎಲ್ಲೂ ಪ್ರಸಾರ ಮಾಡಬಾರದು, ಅದರ ಆಡಿಯೋ ಅಥವಾ ವಿಡಿಯೋವನ್ನು ವಿತರಣೆ ಮಾಡಬಾರದು ಎಂದು ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದ್ದಾರೆ.

ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ನ್ಯಾಯಾಲಯವು ಈ ಸಿನಿಮಾಕ್ಕೆ ಸಂಬಂಧಪಟ್ಟ ಒಂಬತ್ತು ಮಂದಿಗೆ ನೊಟೀಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 9ಕ್ಕೆ ವಿಚಾರಣೆ ಮುಂದೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ಡಾಗ್ ಮಿಲಿಯನೇರ್, ಭಾರತ, ಸಿನಿಮಾ, ಕೌನ್ ಬನೇಗಾ ಕರೋಡ್ಪತಿ, ದರ್ಶನ್ ದೋ ಘನಶ್ಯಾಮ್, ಗೋಪಾಲ್ ಸಿಂಗ್, ನಕುಲ್ ಸಿಂಗ್ ನೇಪಾಳಿ