ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕತ್ರಿನಾಳನ್ನು ಭೇಟಿಯಾಗಲು ಆಗಲಿಲ್ಲವೆಂದು ಅಭಿಮಾನಿ ಆತ್ಮಹತ್ಯೆ! (Katrina Kaif | Bhopal | Ranbir Kapoor | Rajneeti)
ಸುದ್ದಿ/ಗಾಸಿಪ್
Feedback Print Bookmark and Share
 
Katrina Kaif
IFM
ಇದನ್ನು ದಡ್ಡತನವೆನ್ನೋಣವೇ... ಮುಗ್ಧತೆಯ ಪರಮಾವಧಿಯೆನ್ನೋಣವೇ... ಅತಿರೇಕದ ಅಭಿಮಾನವೆನ್ನೋಣವೇ... ಅಥವಾ ಶತಮೂರ್ಖನೆನ್ನೋಣವೇ... ಗೊತ್ತಿಲ್ಲ. ಆದರೆ ಉತ್ತರ ಹುಡುಕುವ ಮೊದಲು ಒಬ್ಬ ಪ್ರಾಣ ಕಳೆದಿಕೊಂಡಿದ್ದಂತೂ ನಿಜ. ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಭೇಟಿಯಾಗಲು ಅವಕಾಶ ಸಿಗಲಿಲ್ಲವೆಂಬ ಕಾರಣಕ್ಕೆ ಯುವಕನೊಬ್ಬ ಕೆರೆಗೆ ಹಾರಿ ಪ್ರಾಣ ತ್ಯಾಗವನ್ನೇ ಮಾಡಿದ್ದಾನೆ!

ಹೌದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಭೋಪಾಲ್ ಬಳಿ ಕತ್ರಿನಾ ಕೈಫ್ ಹಾಗೂ ರಣಬೀರ್ ಕಪೂರ್ ಅವರ ಅಭಿನಯದ ರಾಜನೀತಿ ಸಿನಿಮಾದ ಚಿತ್ರೀಕರಣ ಸಂದರ್ಭ ಈ ಘಟನೆ ನಡೆದಿದೆ. ರಾಜನೀತಿ ಶೂಟಿಂಗ್ ನೋಡಲು ಸುತ್ತಮುತ್ತ ಸಾವಿರಾರು ಮಂದಿ ಸೇರಿದ್ದರು. ಇವರಲ್ಲಿ ಮೋತಿಲಾಲ್ ಕೂಡಾ ಒಬ್ಬ. ಅಷ್ಟೂ ಮಂದಿಯ ನಡುವೆ ಈತನೂ ಕತ್ರಿನಾಳನ್ನು ನೋಡಲು ಹವಣಿಸಿದ್ದ. ಅಷ್ಟೇ ಅಲ್ಲ, ಆಕೆಯ ಜತೆಗೆ ಮಾತನಾಡಬೇಕೆಂದೂ ಇಷ್ಟಪಟ್ಟಿದ್ದ. ಆದರೆ ಮಾತನಾಡಲು ಸಾಧ್ಯವಾಗಲೇ ಇಲ್ಲವೆಂದು ಬೇಸರದಿಂದ ಸೀದಾ ಸ್ವಲ್ಪ ದೂರದ್ಲಲಿದ್ದ ಕೆರೆಗೆ ಹಾರಿ ಪ್ರಾಣ ತ್ಯಾಗ ಮಾಡಿದ್ದಾನೆ.

ಮೃತನ ಪರೀಕ್ಷೆ ನಡೆಸಿದ ಪೊಲೀಸರು ಆತನ ಪ್ಯಾಂಟು ಜೇಬಿನಲ್ಲಿದ್ದ ಆತನ ಐಡೆಂಟಿಟಿ ಕಾರ್ಡ್ ಮೂಲಕ ಆತನ ಹೆಸರು ಮೋತಿಲಾಲ್ ಎಂದು ಪತ್ತೆ ಹಚ್ಚಿದ್ದಾರೆ. ಮೃತನಿಗೆ ಸುಮಾರು 24-25ರ ವರ್ಷವಿರಬಹುದು ಎಂದು ಅಂದಾಜಿಸಲಾಗಿದ್ದು, ಆತನ ಮನೆಯ ವಿಳಾಸವನ್ನು ಪತ್ತೆ ಹಚ್ಚಲಾಗಿಲ್ಲ.

ಮೃತ ಯುವಕ ಯಾವುದೇ ಆತ್ಮಹತ್ಯಾ ಪತ್ರ ಬರೆದಿಟ್ಟಿಲ್ಲ. ಹಾಗಾಗಿ ಆತನದ್ದು ನಿಜಕ್ಕೂ ಅಭಿಮಾನದ ಅತಿರೇಕದ ಅತ್ಮಹತ್ಯೆಯೋ ಎಂಬ ಬಗ್ಗೆ ಪೋಲೀಸರಿಗೆ ಸಂಶಯ ಮೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕತ್ರಿನಾ ಕೈಫ್, ರಾಜನೀತಿ, ಭೋಪಾಲ್, ರಣಬೀರ್ ಕಪೂರ್