ಸಿನಿಮಾ ತಾರೆಯರು ತಮ್ಮ ಸೌಂದರ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳುವ ಭರದಲ್ಲಿ ಕೆಲವೊಮ್ಮೆ ಎಂಥಾ ದೊಡ್ಡ ತಪ್ಪುಗಳು ಆಗಿಹೋಗುತ್ತವೆ ನೋಡಿ. ಇದಕ್ಕಿರುವ ಸಾಕ್ಷಿ ಈಗ ಕಂಗನಾ ರಾಣಾವತ್ ಎಂಬ ಮಾದಕ ಸುರುಳು ಕೂದಲ ಚೆಲುವೆ.
ತನ್ನ ತೆಳುವಾಗಿರುವ ಮೇಲ್ತುಟಿಯನ್ನು ಕೊಂಚ ದಪ್ಪ ಮಾಡುವ ಕಾರಣದಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಿಂದ, ಈಗ ತುಟಿ ತನ್ನ ರೂಪವನ್ನೇ ಕಳೆದುಕೊಂಡಿದೆ ಎಂದ ಕೆಲವು ಗಾಸಿಪ್ಪಿಗರು ಕಥೆ ಹೇಳಿದ್ದಾರೆ. ಚೆಂದಕ್ಕಿದ್ದ ತುಟಿಯನ್ನು ಇನ್ನೂ ತಿದ್ದಿ ತೀಡಿ ಒಪ್ಪ ಓರಣ ಮಾಡುವ ಉದ್ದೇಶದಿಂದ ತುಟಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳಂತೆ ಈ ಕಂಗನಾ. ಆದರೆ ಶಸ್ತ್ರಚಿಕಿತ್ಸೆಯೇನೋ ಮುಗಿದಿದೆ. ಆದರೆ ತುಟಿ ದಪ್ಪಕ್ಕೆ ಇನ್ನೂ ನೀರು ತುಂಬಿಕೊಂಡಂತೆ ಉಬ್ಬಿಹೋಗಿದೆ. ಆದರೆ ಇನ್ನೂ ಕೆಲವರು, ಆಕೆಗೆ ಇಟಾಲಿಯನ್ ಸಿನಿಮಾದಿಂದ ಆಫರ್ ಬಂದಿದೆ. ಹಾಗಾಗಿ ಆಕೆ ಇಟಲಿಗೆ ಹೋಗಿ ಅಲ್ಲಿಂದ ಮರಳುವಾಗ ಹವಾಮಾನ ವೈಪರೀತ್ಯದಿಂದ ಹೆಚ್ಚು ಕಡಿಮೆಯಾಗಿದೆಯಷ್ಟೆ ಎನ್ನುತ್ತಿದ್ದಾರೆ.
IFM
ಇತ್ತೀಚೆಗೆ ಮುಂಬೈಯ ಖ್ಯಾತ ಶಾಂಪಿಗ್ ಮಾಲ್ ಒಂದರಲ್ಲಿ ಕಂಗನಾ ಶಾಪಿಂಗ್ ಮಾಡುತ್ತಿದ್ದಾಗ ಪತ್ರಕರ್ತರು ಸಿಕ್ಕಿದರು. ಫೋಟೋ ತೆಗೆಯಲೆಂದು ಪೋಸ್ ಕೊಡಲು ಕೇಳಿದಾಗ ಆಕಯ ತುಟಿಯನ್ನು ನೋಡಿ ಪತ್ರಕರ್ತರೇ ಹೌಹಾರಿದರಂತೆ. ಅರೆ ಚೆಂದಕ್ಕೆ ಕಿಲಕಿಲನೆ ನಗುತ್ತಿದ್ದ ಕಂಗನಾ ತುಟಿ ಹೇಗಾಗಿ ಹೋಯಿತಲ್ಲಾ ಎಂದು ಮಮ್ಮಲ ಮರುಗಿದರಂತೆ.
ಹೀಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಬಾಲಿವುಡ್ ಮಂದಿಗೇನೂ ಹೊಸತಲ್ಲ. ಈ ಹಿಂದೆ ಕೊಯಿನಾ ಮಿತ್ರ ಇದೇ ರೀತಿ ಮೇಲ್ದುಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಇದ್ದ ಸೌಂದರ್ಯವ್ನನೂ ಹಾಳುಮಾಡಿಕೊಂಡಿದ್ದಳು. ಶಿಲ್ಪಾ ಶೆಟ್ಟಿ ತನ್ನ ಮೂಗಿನ ಶಸ್ತ್ರಚಿಕಿತ್ಸೆ ಮಾಡಿ ತಿದ್ದಿ ತೀಡಿದ್ದಳು. ಇನ್ನೂ ಅನೇಕ ನಟನಟಿಯರು ತಮಗೆ ಬೇಕಾದ ಆಕಾರ ಗಾತ್ರಕ್ಕೆ ತಮ್ಮ ಅಂಗಾಂಗಗಳನ್ನು ತಿದ್ದಿ ತೀಡಿಸಿಕೊಳ್ಳುವುದು ಗೊತ್ತೇ ಇದೆ. ಕೆಲದಿನಗಳ ಹಿಂದೆ ಕತ್ರಿನಾ ತುಟಿಯೂ ಹೀಗೆ ಊದಿಕೊಂಡಿದ್ದಾಗ ಆಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆಂದು ಗುಲ್ಲೆಬ್ಬಿತ್ತು. ಆದರೆ ಕತ್ರಿನಾ ಹಾಗೇನೂ ಇಲ್ಲ, ಬೇರೆ ಔಷಧಿಯಿಂದ ಅಲರ್ಜಿ ಆಗಿ ತುಟಿ ಊದಿದೆ ಅಷ್ಟೆ ಎಂದಿದ್ದಳು. ಈಗ ಕಂಗನಾಳದ್ದು ಏನು ಕಥೆಯೋ ಗೊತ್ತಿಲ್ಲ. ಆದರೆ ಕಂಗನಾಳ ಪಾಲಿಗೆ ಹೀಗಾಗಬಾರದಿತ್ತು. ಪಾಪ... ಎನ್ನೋಣವೇ?