ಮುಖ್ಯ ಪುಟಮನರಂಜನೆ » ಬಾಲಿವುಡ್ » ಸುದ್ದಿ/ಗಾಸಿಪ್ » ಮರಾಠಿ ಚಿತ್ರ 'ಹರಿಶ್ಚಂದ್ರಾಚಿ ಫ್ಯಾಕ್ಟರಿ' ಆಸ್ಕರ್‌ಗೆ ನಾಮನಿರ್ದೇಶನ (Harishchandrachi Factory | Oscar | Paresh Mokashi)
ಮರಾಠಿ ಚಿತ್ರ 'ಹರಿಶ್ಚಂದ್ರಾಚಿ ಫ್ಯಾಕ್ಟರಿ' ಆಸ್ಕರ್‌ಗೆ ನಾಮನಿರ್ದೇಶನ
PR
ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸುವ ಭಾರತದ ಚಿತ್ರವಾಗಿ ಮರಾಠಿ ಚಿತ್ರ 'ಹರಿಶ್ಚಂದ್ರಾಚಿ ಫ್ಯಾಕ್ಟರಿ' ಆಯ್ಕೆಯಾಗಿದೆ. ಖ್ಯಾತ ರಂಗಭೂಮಿ ಕಲಾವಿದ ಪರೇಶ್ ಮೊಕಾಶಿ ನಿರ್ದೇಶಿಸಿರುವ ಈ ಚಿತ್ರ ನ್ಯೂಯಾರ್ಕ್, ದಿಲ್ಲಿ 6ನಂತಹ 15 ಚಿತ್ರಗಳನ್ನು ಹಿಂದಿಕ್ಕಿ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಗಾಗಿ ಭಾರತವನ್ನು ಪ್ರತಿನಿಧಿಸುವ ಚಿತ್ರವಾಗಿ ಹೊರಹೊಮ್ಮಿದೆ.
ಈ ಚಿತ್ರ ೆರಡು ಗಂಟೆ ಅವಧಿಯದ್ದಾಗಿದೆ. ಸತ್ಯಕಥೆಯನ್ನು ಆಧರಿಸಿರುವ ಇದು, ಭಾರತದ ಚಲನಚಿತ್ರ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ 1913ರಲ್ಲಿ ದೇಶದ ಮೊದಲ ಚಲನಚಿತ್ರ 'ರಾಜಾ ಹರಿಶ್ಚಂದ್ರ' ನಿರ್ಮಿಸಲು ನಡೆಸಿದ ಹೋರಾಟದ ಕಥೆಯನ್ನು ಚಿತ್ರಕಥೆಯನ್ನಾಗಿ ಹೊಂದಿದೆ.
ತಮ್ಮ ಚಿತ್ರವು ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದನ್ನು ಕೇಳಿ ಪರೇಶ್ ಮೊಕಾಶಿ ಸಂಪೂರ್ಣ ಖುಷಿಯಾಗಿದ್ದಾರೆ. ಅಕ್ಟೋಬರ್ 1ರೊಳಗೆ ಆಸ್ಕರ್ ಅಕಾಡೆಮಿಗೆ ಚಿತ್ರದ ಪ್ರಿಂಟ್‌ಗಳನ್ನು ಕಳುಹಿಸಿಕೊಡುತ್ತೇನೆ. ಕಳೆದ ವರ್ಷ ಡಿಸೆಂಬರ್‌ನಲ್ಲೇ ಈ ಚಿತ್ರ ಪೂರ್ಣಗೊಂಡಿತ್ತು. ಈ ವರ್ಷದ ಅಂತ್ಯದ ಒಳಗೆ ಮಹಾರಾಷ್ಟ್ರ ಮತ್ತು ದೇಶದ ಇತರ ಭಾಗಗಳಲ್ಲಿ ಮರಾಠಿ ಮತ್ತು ಹಿಂದಿ ಚಿತ್ರಗಳನ್ನು ಅದ್ದೂರಿಯಾಗಿ ಬಿಡುಗಡೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ನಿರ್ಮಾಣಗೊಂಡ ಪ್ರಥಮ ಚಲನಚಿತ್ರದ ಹಿಂದಿರುವ ರೋಚಕ ಕಥೆ, ಪರಿಶ್ರಮವನ್ನು ಬೆಳ್ಳಿತೆರೆಗೆ ತರುವ ಪ್ರಯತ್ನ ಇದು ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಹರಿಶ್ಚಂದ್ರಾಚಿ ಫ್ಯಾಕ್ಟರಿ ಆಸ್ಕರ್ ನಾಮನಿರ್ದೇಶನಗೊಂಡ ಎರಡನೇ ಮರಾಠಿ ಚಿತ್ರ. 2004ರಲ್ಲಿ 'ಶ್ವಾಸ್' ಮೊದಲ ಮರಾಠಿ ಚಿತ್ರದ ನೆಲೆಯಲ್ಲಿ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿತ್ತು.