ಬಾಲಿವುಡ್ಡಿನ ಹಾಟ್ ಹುಡುಗಿ ಕರೀನಾ ಕಪೂರ್‌ಗೆ ನಿನ್ನೆಗೆ ಅಂದರೆ ಸೆ.21ಕ್ಕೆ ಸರಿಯಾಗಿ 29 ವರ್ಷ ತುಂಬಿದೆ. ಕಳೆದ ವರ್ಷ ಇದೇ ದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಕರೀನಾಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಮಯವಿರಲಿಲ್ಲ. ಆದರೆ, ಈ ಬಾರಿಯೂ ಹುಟ್ಟುಹಬ್ಬ ಆಚರಣೆಗೆ ಸಮಯವಿಲ್ಲವೆಂದು ಆಕೆ ಕೊರಗುತ್ತಿರುವಾಗಲೇ ಅಮೀರ್ ಖಾನ್ ಆಕೆಗಾಗಿ ನಿರ್ಮಾಪಕರ ಬಳಿ ಹೇಳಿ ನಾಲ್ಕು ದಿನ ಶೂಟಿಂಗ್‌ನ್ನು ಮುಂದೆ ಹಾಕಿಸಿದ್ದಾನೆ.
ಸೆಪ್ಟೆಂಬರ್ 21ಕ್ಕಿರಬೇಕಾಗಿದ್ದ 3 ಈಡಿಯಟ್ಸ್ ಶೂಟಿಂಗ್ ಸೆ.25ಕ್ಕೆ ಮುಂದೂಡಿದ್ದೇ ತಡ ಹುರ್ರೇ ಎಂದು ಕುಣಿದ ಕರೀನಾಗೆ ಫಕ್ಕನೆ ನೆನಪಾಗಿದ್ದು ತನ್ನ ಇನಿಯ ಸೈಫ್ ಆಲಿ ಖಾನ್. ಕರೀನಾಳ ಶೂಟಿಂಗ್ ಮುಂದೆ ಹೋಗಿದ್ದಕ್ಕೆ ದಿಲ್ ಖುಷ್ ಆದ ಸೈಫ್ ತಕ್ಷಣವೇ ಆಕೆಯಿದ್ದ ರಾಜಸ್ತಾನದ ಉದಯಪುರಕ್ಕೆ ಒಂದೇ ಉಸಿರಿನಲ್ಲಿ ಜನ್ಮದಿನದ ಮುನ್ನಾ ದಿನವೇ ಹಾರಿ ಬಂದಿದ್ದಾನೆ. ಅಷ್ಟೇ ಅಲ್ಲ, ಕರೀನಾಗೆ ಮರೆಯಲಾಗದ ಹಲವು ರೊಮ್ಯಾಂಟಿಕ್ ಸರ್‌ಪ್ರೈಸ್‌ಗಳನ್ನೂ ಬರ್ತ್‌ಡೇಗೆ ಉಡುಗೊರೆಯಾಗಿ ನೀಡಿದ್ದಾನೆ.
ಸೈಫ್‌ನ ರೊಮ್ಯಾಂಟಿಕ್ ಸರ್‌ಪ್ರೈಸ್ ಕರೀನಾಗೆ ಹೊಸತೇನಲ್ಲ. ಕೆಲದಿನಗಳ ಹಿಂದೆ ಆಕೆಗೆ ಗೊತ್ತೇ ಇರದಂತೆ ಕೆಲವು ದಿನಗಳ ಕಾಲ ಯುರೋಪ್ ಪ್ರವಾಸಕ್ಕೆ ಬುಕ್ ಮಾಡಿ ಆಕೆಯನ್ನು ಯುರೋಪಿಗೆ ಕರೆದೊಯ್ದಿದ್ದ ಸೈಫ್. ಯುರೋಪ್‌ನಲ್ಲಿ ಇಬ್ಬರೂ ಜತೆಯಾಗಿ ಸಂತೋಷದಿಂದ ಕಾಲ ಕಳೆದ ಕರೀನಾ, ಸೈಫ್ ಕೆಲ ದಿನಗಳ ನಂತರ ಮರಳಿದ್ದರು. ಆದರೂ ಬರ್ತ್‌ಡೇಗೆ ಸೈಫ್ ಇನ್ನೂ ಸ್ಪೆಷಲ್ ಗಿಫ್ಟ್ ನೀಡಬಹುದೆಂಬ ಊಹೆ ಕರೀನಾಗೂ ಇತ್ತು. ಆದರೆ ಇಷ್ಟೊಂದು ಅದ್ಭುತ ಗಿಫ್ಟ್ ನೀಡುತ್ತಾನೆಂದು ಆಕೆ ಊಹಿಸಿಯೂ ಇರಲಿಲ್ಲವಂತೆ.
IFM
ಉದಯಪುರಕ್ಕೆ ಹಾರಿ ಬರುವ ಮೊದಲೇ ಸೈಫ್ ಉದಯಪುರದ ಐಷಾರಾಮಿ ಹೊಟೇಲ್ ಉದಯ ವಿಲಾಸ್ ಪ್ಯಾಲೇಸ್‌ನಲ್ಲಿ ರೂಂ ಬುಕ್ ಮಾಡಿದ್ದಾನೆ. ಸೈಫ್ ಉದಯ ವಿಲಾಸ್ ಹೊಟೇಲಿನಲ್ಲಿ ಬುಕ್ ಮಾಡಿದ್ದು ತಿಳಿದ ತಕ್ಷಣವೇ ಆಗಸಕ್ಕೆ ಮೂರೇ ಗೇಣು ಎಂಬಂತೆ ಥ್ರಿಲ್ಲಾಗಿ ಹೋದ ಕರೀನೆಗೆ ಸೈಫ್ ಒಂದೊಂದಾಗಿ ಹಲವು ಸರ್‌ಪ್ರೈಸ್‌ಗಳ ಸುರಿಮಳೆಯನ್ನೇ ನೀಡಿ ಆಕೆಯ ಮನಗೆದ್ದಿದ್ದಾನೆ.
ಉದಯಪುರಕ್ಕೆ ಹಾರಿ ಬಂದ ಸೈಫ್ ಮಾರನೇ ದಿನ ಬೆಳಗಾಗುವಷ್ಟರಲ್ಲಿ ಅಂದರೆ ಬರ್ತ್‌ಡೇ ದಿನ ಆಕೆ ಹಾಸಿಗೆಯಿಂದ ಏಳುವಷ್ಟರಲ್ಲಿ ಆಕೆಯ ಅತ್ಯಂತ ಆತ್ಮೀಯ ಗೆಳತಿಯರಾದ ರೀನಾ, ಆಕೆಯ ಡ್ರೆಸ್ ಡಿಸೈನರ್ ಶಬೀನಾ ಖಾನ್, ಹಾಗೂ ಕರೀನಾ ಅತಿಯಾಗಿ ಪ್ರೀತಿಸುವ ಆಕೆಯ ತಾಯಿ ಪ್ರತ್ಯಕ್ಷ. ಅವರೆಲ್ಲ ಉದಯಪುರಕ್ಕೆ ಬರುವ ವ್ಯವಸ್ಥೆ ಮಾಡಿದ್ದು ಸೈಫ್.
ಇಷ್ಟೇ ಅಲ್ಲ. ಸೈಫ್ ಇಷ್ಟೆಲ್ಲ ವ್ಯವಸ್ಥೆಯನ್ನು ಚಿಟಿಕೆಯಷ್ಟರಲ್ಲಿ ಮಾಡಿದ್ದು ನೋಡಿ ದಂಗಾಗಿ ಹೋದ ಕರೀನೆಗೆ ಬರ್ತ್‌ಡೇ ದಿನದ ರಾತ್ರಿ ಇನ್ನೂ ವಿಶೇಷ ಗಿಫ್ಟ್ ಕೊಟ್ಟಿದ್ದಾನಂತೆ!
ಕರೀನಾಳ ಆಪ್ತ ಮೂಲಗಳ ಪ್ರಕಾರ, ಹುಟ್ಟುಹಬ್ಬದ ದಿನ ರಾತ್ರಿ ಒಂದು ರೂಂ ಬುಕ್ ಮಾಡಿ ಅದರೊಳಗೆ ಆಕೆ ಇಷ್ಟಪಡುವ ಪರಿಮಳ ಭರಿತ ಕ್ಯಾಂಡಲ್‌ಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಿಸಿದ್ದನಂತೆ. ಸೈಫ್ ಮಾಡಿದ ಅರೇಂಜ್‌ಮೆಂಟ್ ನೋಡಿ ಕರೀನಾ ಸಂತೋಷದಿಂದ ಜಿಗಿದೇ ಬಿಟ್ಟಳಂತೆ. ಕ್ಯಾಂಡಲ್‌ಗಳ ಮಂದ ಬೆಳಕಿನಲ್ಲಿ ಸೈಫ್ ಹಾಗೂ ಕರೀನಾ ತುಂಬ ರೊಮ್ಯಾಂಟಿಕ್ ಆಗಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರಂತೆ!