ಮುಖ್ಯ ಪುಟಮನರಂಜನೆ » ಬಾಲಿವುಡ್ » ಸುದ್ದಿ/ಗಾಸಿಪ್ » ದುರ್ಗಾಪೂಜೆಯಲ್ಲಿ ಬಿಪಾಶಾಳ ಮೇಲೆ ಲೈಂಗಿಕ ದೌರ್ಜನ್ಯ ಯತ್ನ! (Durga Puja | Bipasha Basu | John Abraham | Sexual Abuse | Sexy Queen)
ದುರ್ಗಾಪೂಜೆಯಲ್ಲಿ ಬಿಪಾಶಾಳ ಮೇಲೆ ಲೈಂಗಿಕ ದೌರ್ಜನ್ಯ ಯತ್ನ!
ಗುರುವಾರ, 1 ಅಕ್ಟೋಬರ್ 2009( 13:12 IST )
IFM
ಬಿಪಾಶಾ ಬಸು ಎಂಬ ಸೆಕ್ಸೀ ಕ್ವೀನ್‌ಗೆ ಈ ಬಾರಿಯ ಸಂಭ್ರಮದ ದುರ್ಗಾ ಪೂಜೆ ನಿಜಕ್ಕೂ ಆಘಾತ ತಂದಿದೆ. ದಸರಾ ಹಬ್ಬದ ದುರ್ಗಾಪೂಜೆಯೆಂದರೆ ಬಂಗಾಳದಲ್ಲಿ ಸಡಗರ ಹೆಚ್ಚೇ. ಬಂಗಾಳಿ ಕೃಷ್ಣ ಸುಂದರಿ ಬಿಪಾಶಾ, ಪ್ರತಿ ವರ್ಷವೂ ಮುಂಬೈನಲ್ಲೇ ದುರ್ಗಾ ಪೂಜೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾಳೆ. ಈ ಬಾರಿಯೂ ಬಿಪಾಶಾ ಮುಂಬೈಯ ಸಂತಾಕ್ರೂಜ್‌ನ ಪೆಂಡಾಲ್‌ನ ದುರ್ಗಾಪೂಜೆಯಲ್ಲಿ ಭಾಗವಹಿಸಲು ತನ್ನ ಪ್ರೇಮಿ ಜಾನ್ ಅಬ್ರಹಾಂ ಜತೆಗೆ ಹೋಗಿದ್ದಳು.
ದುರ್ಗೆಯ ದರ್ಶನ ಪಡೆದು ಇಬ್ಬರೂ ಪೆಂಡಾಲ್ ಬಳಿ ನಡೆದು ಹೋಗುತ್ತಿದ್ದಂತೆ ಜನಜಂಗುಳಿಯ ಮಧ್ಯದಿಂದ ಯಾರೋ ಒಬ್ಬ ಯುವಕ ಬಿಪಾಶಾಳನ್ನು ಎಳೆದು ಆಕೆಯ ಖಾಸಗಿ ಅಂಗಾಂಗಗಳ ಮೇಲೆ ಅಶ್ಲೀಲವಾಗಿ ಸ್ಪರ್ಶಿಸಿದನಂತೆ. ಇದರಿಂದ ರೋಷಾವಿಷ್ಟಳಾದ ಬಿಪಾಶಾ ತಕ್ಷಣ ಆತನಿಂದ ಕೊಸರಿಕೊಂಡು ಬಿಡಿಸಿಕೊಳ್ಳುವಷ್ಟರಲ್ಲಿ ಆತ ಅಲ್ಲಿಂದ ಕಾಲ್ಕಿತ್ತಾಗಿತ್ತು. ದಿಢೀರ್ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಬಿಪಾಶಾಳನ್ನು ನೆರೆದಿದ್ದ ಜನರು ಹಾಗೂ ಜಾನ್ ಅಬ್ರಹಾಂ ಕೂಲ್ ಮಾಡಲು ಪ್ರಯತ್ನಿಸಿದರೂ ಎಷ್ಟೋ ಹೊತ್ತಿನವರೆಗೂ ಆಕೆಯಲ್ಲಿ ಕೋಪ ಆರಲೇ ಇಲ್ಲ.
ಆತನನ್ನು ಸಿಗಿದು ಹಾಕುವಷ್ಟು ಕೋಪಾವಿಷ್ಟಳಾದ ಬಿಪಾಶಾ ಏದುಸಿರು ಬಿಡುತ್ತಾ, ಆತ ಕೈಗೆ ಸಿಕ್ಕಿರುತ್ತಿದ್ದರೆ... ಎಂದು ಬಡಬಡಿಸುತ್ತಳೇ ಇದ್ದಳಂತೆ. ಕೇವಲ ಕೆಲವೇ ಕ್ಷಣಗಳಲ್ಲಿ ದಿಢೀರ್ ಆಗಿ ಸಂಭವಿಸಿದ ಈ ಘಟನೆಗೆ ನೆರೆದಿದ್ದ ಜನಸ್ತೋಮ ಸ್ಪಂದಿಸುವಷ್ಟರಲ್ಲಿ, ಆ ಯುವಕ ಯಾರ ಕೈಗೂ ಸಿಗದೆ ಮಿಂಚಿನ ವೇಗದಲ್ಲಿ ಅಲ್ಲಿಂದ ಓಡಿಹೋಗಿ ಆಗಿತ್ತು.
ಬಿಪಾಶಾ ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಿಸುವ ಯೋಚನೆ ಮಾಡಿದಳಾದರೂ, ಆ ಮನುಷ್ಯ ಯಾರೆಂದೂ ಗುರುತಿಸುವ ಮೊದಲೇ ಆತ ಕಾಲ್ಕಿತ್ತಿದ್ದಾನೆ. ಹಾಗಾಗಿ ಪೊಲೀಸ್ ದೂರು ದಾಖಲಾಗಿಲ್ಲ.
IFM
ಬಿಪಾಶಾಗೆ ಇಂತಹ ಅನುಭವ ಹೊಸತಲ್ಲ. 2006ರಲ್ಲಿ ಬಿಪಾಶಾ ನ್ಯೂಜೆರ್ಸಿಯಲ್ಲಿ ನಡೆದ ಇಂಡಿಯಾ ಡೇ ಪೆರೇಡ್‌ನಲ್ಲಿ ವೇದಿಕೆಯಲ್ಲಿ ಮುಖ್ಯಪಾತ್ರವಾಗಿ ಕಾಣಿಸಿಕೊಳ್ಳಲಿದ್ದರು. ಆದರೆ ಕಾರ್ಯಕ್ರಮ ಆರಂಭವಾಗುವ ಮೊದಲು ತಾನು ಇದರಲ್ಲಿ ಪಾಲ್ಗೊಳ್ಳಬೇಕೆಂದಿದ್ದೆ. ಆದರೆ ಈಗ ಭಾಗವಹಿಸಲಾರೆ ಎಂದು ಹೇಳಿ ಎಲ್ಲರಿಗೆ ದಿಗ್ಭ್ರಮೆ ಮೂಡಿಸಿದ್ದರು. ಜತೆಗೆ, ಅದಕ್ಕೆ ಕಾರಣವನ್ನೂ ಬಿಪಾಶಾ ಹೇಳಿದ್ದರು. ಕಾರ್ಯಕ್ರಮಕ್ಕೆ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಬರುವಾಗ ಇಬ್ಬರು ವ್ಯಕ್ತಿಗಳನ್ನು ನನ್ನ ಜತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿ ವಿವಾದಕ್ಕೆ ಸಿಲುಕಿದ್ದರು.
ನಟಿಯರಿಗೆ ಸಾಕಷ್ಟು ಭದ್ರತಾ ಸೌಲಭ್ಯವಿದ್ದರೂ, ತುಂಬಿದ ಜನಸ್ತೋಮದಲ್ಲಿ ಹೀಗೆ ದೈಹಿಕ, ಲೈಂಗಿಕ ದೌರ್ಜನ್ಯದಂತಹ ಸಾಕಷ್ಟು ಪ್ರಕರಣಗಳು ಹಿಂದೆಯೇ ನಡೆದಿವೆ. ಇತ್ತೀಚೆಗೆ ಮೊನ್ನೆ ಮೊನ್ನೆಯಷ್ಟೆ ಮಾಡೆಲ್, ನಟಿ ಮೌಶಮಿ ಉದೇಶಿ ದಹಲಿಯಿಂದ ಮುಂಬೈ ವಿಮಾನಕ್ಕೆ ಹತ್ತಿದಾಗ, ಆಕೆಯ ಹಿಂದಿನ ಸೀಟ್‌ನಲ್ಲಿ ಕುಳಿತ ಯುವಕ ಆಕೆಯ ಭುಜಕ್ಕೆ ತಾಗುವಂತೆ ಕೈಯಿಟ್ಟು ಅಶ್ಲೀಲವೆನಿಸುವ ಶಬ್ದ ಮಾಡುತ್ತಿದ್ದ. ಆಕೆ ಸೀಟ್ ಬದಲಾಯಿಸಲು ಹೊರಟಾಗ ನೇರವಾಗಿ ಭುಜಕ್ಕೆ ಕೈಯೋತ್ತಿ ಆಕೆಯನ್ನು ಅಲ್ಲಿಂದ ಕದಲದಂತೆ ಮಾಡಿಬಿಟ್ಟ. ತಕ್ಷಣ ತಿರುಗಿದ ಆಕೆ ಆತ ಕಪಾಳಕ್ಕೆರಡು ಬಾರಿಸಿದಾಗಲೇ ಗೊತ್ತಾಗಿದ್ದು, ಇದೇ ಮನುಷ್ಯ ಬೋರ್ಡಿಂಗ್ ಸಮಯದಲ್ಲೂ ಆಕೆಯ ಮೇಲೆ ಬಿದ್ದಂತೆ ಎರಡು ಬಾರಿ ತಳ್ಳಿದ್ದ ಎಂದು.
ಸಾಮಾನ್ಯ ನಾಗರಿಕರ ಮೇಲೆ ಇಂತಹ ದೌರ್ಜನ್ಯಗಳು ಬಸ್ ಹಾಗೂ ರೈಲಿನಲ್ಲಿ ಸಾಮಾನ್ಯ ಎಂದುಕೊಂಡಿದ್ದೆ. ಆದರೆ, ವಿಮಾನದಲ್ಲೂ ಇಂತಹ ಘಟನೆಗಳು ನಡೆಯುತ್ತದೆ ಅಂತ ನಾನು ಊಹಿಸಿರಲೇ ಇಲ್ಲ ಎನ್ನುತ್ತಾಳೆ ಮೌಶಮಿ.
ಬಿಪಾಶಾ ಪ್ರಕರಣವೂ ಇಂಥದ್ದೇ. ಆದರೆ ಈ ಬಾರಿಯ ದುರ್ಗಾ ಪೂಜೆಯ ಶಾಕ್‌ನಿಂದ ಇನ್ನೂ ಬಿಪಾಶಾ ಚೇತರಿಸಿಕೊಂಡಿಲ್ಲವಂತೆ!!!