ಮೊನ್ನೆ ಮೊನ್ನೆ ಕತ್ರಿನಾ ಕೈಫ್ ಎಂಬ ಬಾಲಿವುಡ್ ದಂತದ ಬೊಂಬೆ ನಾನಾ ಪಾಟೇಕರ್ ಎಂಬ ಹಿರಿಯ ನಟನಿಗೆ ಹಳೇ ಒಳಚಡ್ಡಿಯನ್ನು ಬರ್ತ್ಡೇ ಗಿಫ್ಟ್ ಆಗಿ ನೀಡಿದ್ದಾಳಂತೆ! ತಮಾಷೆಯೆನಿಸಿದರೂ, ಆಶ್ಚರ್ಯವೆನಿಸಿದರೂ ಇದು ಗಾಸಿಪ್ ಅಂತೂ ಖಂಡಿತಾ ಅಲ್ಲ. 100 ಪರ್ಸೆಂಟ್ ಸತ್ಯ. ಅಬ್ಬಾ, ಕತ್ರಿನಾ ಎದೆಗಾರಿಕೆಯೇ..! ಥೂ.. ಒಳಚಡ್ಡಿ ನೀಡುವಷ್ಟು ಜುಗ್ಗುವೇ ಕತ್ರಿನಾ? ಅಂತೆಲ್ಲಾ ಪ್ರತಿಕ್ರಿಯಿಸಬೇಡಿ. ಕತ್ರಿನಾಗೆ ಬೇಕಾದಷ್ಟು ದುಡ್ಡಿದೆ. ಅಂಥಾ ಸಂದರ್ಭ ಚಡ್ಡಿ ಕೋಡಬೇಕಾದ ಸಂದರ್ಭ ಬಂದರೆ ಕೇವಲ ಆಕೆಗಷ್ಟೇ ಅಲ್ಲ. ಓದುವವರಿಗೂ ಮುಜುಗರವಾಗಬಹುದು. ಹೌದು. ಸ್ವತಃ ಕತ್ರಿನಾಗೂ ನಾನಾಗೆ ಚಡ್ಡಿ ಕೋಟ್ಟ ಮೇಲೆ ಮುಜುಗರವಾಗಿದೆ. ಹಾಗಾದರೆ ವಿಷಯ ಏನಪ್ಪಾ ಅಂತೀರಾ...? ಎಲ್ಲಾ ಅಜಯ್ ದೇವಗನ್ ಕಿತಾಪತಿ. ಎಲ್ಲಿಯ ಅಜಯ್ ಎಲ್ಲಿಯ ಕತ್ರಿನಾ ಎನ್ನುತ್ತೀರಾ??? ಹಾಗಾದರೆ ಇಲ್ಲಿ ಕೇಳಿ!!!
ವಿಷಯ ಸಿಂಪಲ್. ಓದಿದರೆ ಬಿದ್ದು ಬಿದ್ದು ನಗಲು ಶುರುಮಾಡೋದಂತೂ ಗ್ಯಾರೆಂಟಿ. ಅಜಯ್ ದೇವಗನ್ ಎಂಬ ಬಾಲಿವುಡ್ ನಟನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಉತ್ತಮ ನಟನೆಯಿಂದ ಇಂದಿಗೂ ತನ್ನದೇ ಆದ ಸ್ಥಾನ ಹೊಂದಿರುವ ಅಜಯ್ ದೇವಗನ್ ನೋಡಲು ತುಂಬಾ ಗಂಭೀರನಂತೆ ಕಂಡರೂ ಪಕ್ಕಾ ತರಲೆಯಂತೆ. ಆತನ ತರಲೆತನಕ್ಕೊಂದು ಅದ್ಭುತ ಉದಾಹರಣೆ ಇದು.
ಕತ್ರಿನಾ ಕೈಫ್, ಅಜಯ್ ದೇವಗನ್, ನಾನಾ ಪಾಟೇಕರ್, ಅರ್ಜುನ್ ರಾಂಪಾಲ್, ಮನೋಜ್ ಭಾಜಪೇಯಿ ಮತ್ತಿತರರು ರಾಜನೀತಿ ಎಂಬ ರಾಜಕೀಯ ಕಥಾಹಂದರವುಳ್ಳ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸೀರೆಯುಟ್ಟು ಪಕ್ಕಾ ಸೋನಿಯಾ ಗಾಂಧಿಯಂತೆಯೇ ರಾಜಕಾರಣಿಯಾಗಿ ಕತ್ರಿನಾ ಕಾಣಿಸಲಿದ್ದಾರೆ ಅನ್ನೋದೇ ವಿಷಯ.
IFM
ಆ ವಿಷಯ ಒತ್ತಟ್ಟಿಗಿರಲಿ. ಮೊನ್ನೆ ಮೊನ್ನೆ ನಾನಾ ಪಾಟೇಕರ್ ಬರ್ತ್ಡೇ ನಡೆಯಿತು. ಪಾಟೇಕರ್ ತಮ್ಮ ಚಿತ್ರತಂಡಕ್ಕಾಗಿ ಒಂದು ಪುಟ್ಟ ಪಾರ್ಟಿ ಇಟ್ಟುಕೊಂಡಿದ್ದರು. ಅಜಯ್ ದೇವಗನ್ ತರಲೆ ಮಿದುಳು ಇಲ್ಲಿ ಪಕ್ಕಾ ಕೆಲಸ ಮಾಡಿದೆ. ಒಂದು ಬಳಸಿದ ಒಳಚಡ್ಡಿ, ಕೃತಕ ತುಂಡ ಮೀಸೆ ಹಾಗೂ ಒಂದು ಒಂಟಿ ಹರಿದ ಚಪ್ಪಲಿಯನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಅದಕ್ಕೆ ಚೆಂದನೆಯ ಬಣ್ಣದ ಕಾಗದಗಳಿಂದ ಅಲಂಕರಿಸಿ ಕತ್ರಿನಾ ಕೈಫ್ ಕೈಗೆ ಕೊಟ್ಟು ನೀವಿದನ್ನು ನಾನಾ ಪಾಟೇಕರ್ ಬರ್ತ್ಡೇಗೆ ಉಡುಗೊರೆಯಾಗಿ ನೀಡಿ ಎಂದು ಕತ್ರಿನಾ ಕೈಯಲ್ಲಿಟ್ಟರು.
ಪಾಪ. ಕತ್ರಿನಾಗೆ ಅದರೊಳಗೆ ಏನಿತ್ತು ಅಂತ ಗೊತ್ತಿಲ್ಲ. ಒಕೆ ಅಂದಳು. ಆಗ ಅಜಯ್, ತುಂಡುಡುಗೆಯಲ್ಲೆಲ್ಲಾ ಅವರ ಮುಂದೆ ಹೋಗಿ ನಿಂತು ಈ ಗಿಫ್ಟ್ ನೀಡಬೇಡ. ಚೆಂದನೆಯ ಚೂಡಿದಾರ್ ಹಾಕಿದ ಹುಡುಗಿಯರೆಂದರೆ ನಾನಾ ಪಾಟೇಕರ್ಗೆ ಇಷ್ಟ. ಹಾಗಾಗಿ ಚೂಡಿದಾರ್ ಹಾಕಿಕೊಂಡು ಗಿಫ್ಟ್ ನೀಡು ಎಂದರು. ಕತ್ರಿನಾ ಅದಕ್ಕೂ ಒಕೆ ಅಂದಳು.
IFM
ಏನೂ ಅರಿಯದ ಮುಗ್ಧೆ ಕತ್ರಿನಾ ಚೆಂದದ ಚೂಡಿದಾರ್ ಧರಿಸಿ ಅಜಯ್ ಕೊಟ್ಟ ಗಿಫ್ಟನ್ನು ನಾನಾ ಪಾಟೇಕರ್ ಕೈಗಿತ್ತು ಶುಭಾಷಯ ಹೇಳಿದಳಂತೆ. ನಾನಾ ಪಾಟೇಕರ್ ಕತ್ರಿನಾ ಕೊಟ್ಟ ಗಿಫ್ಟ್ ಏನಿರಬಹುದೆಂಬ ಕುತೂಹಲದಿಂದ ಅಲ್ಲೇ ಬಿಚ್ಚಿ ನೋಡಬೇಕೇ...! ಪೆಟ್ಟಿಗೆ ಬಿಚ್ಚಿದಾಗ ಸಿಕ್ಕಿದ್ದು ಬಳಸಿದ ಒಳಚಡ್ಡಿ, ತುಂಡು ಮೀಸೆ, ಚಪ್ಪಲಿ. ಪೆಟ್ಟಿಗೆಯೊಳಗೆ ಕೈ ತೂರಿಸುತ್ತಲೇ ಸಿಕ್ಕ ಚಡ್ಡಿ ನೋಡಿ ನಾನಾ ಮುಖ ಗಂಭೀರವಾಯಿತು. ಅಲ್ಲೇ ನಿಂತಿದ್ದ ಕತ್ರಿನಾಗೆ ಒಮ್ಮಿಂದೊಮ್ಮೆಲೇ ಗಾಬರಿ, ಕಸಿವಿಸಿ, ನಾಚಿಕೆಯಿಂದ ಮುಖ ಕೆಂಪುಕೆಂಪಾಯಿತು. ತಲೆತಗ್ಗಿಸಿ ನಿಂತ ಕತ್ರಿನಾಳನ್ನು ನೋಡಿ ಅತ್ತ ದೂರದಲ್ಲಿ ನಿಂತಿದ್ದ ಅಜಯ್ ದೇವಗನ್, ಮನೋಜ್ ಭಾಜಪೇಯಿ, ಅರ್ಜುನ್ ರಾಂಪಾಲ್ ಗೊಳ್ಳಂತ ನಕ್ಕಿದ್ದೇ ನಕ್ಕಿದ್ದು.
ಅವರ ನಗು ಕೇಳಿದ್ದೇ ತಡ. ಹಲವು ವರ್ಷ ಬಾಲಿವುಡ್ನಲ್ಲಿ ಏಗಿದ ನಾನಾ ಪಾಟೇಕರ್ ಎಂಬ ಜೀವಕ್ಕೆ ಅರ್ಥವಾಗದಿರದೇ ಹೇಳಿ. ಇದೆಲ್ಲವೂ ಅಜಯ್ ಎಂಬ ತರಲೆಯ ಕೆಲಸ ಎಂದು ಕ್ಷಣಾರ್ಧದಲ್ಲೇ ಅರ್ಥವಾಗಿಬಿಟ್ಟಿತು. ಕತ್ರಿನಾಳನ್ನು ಪ್ರೀತಿಯಿಂದ ಹತ್ತಿರಕ್ಕೆ ಕರೆದು, ನೋಡಮ್ಮಾ, ನೀನಿನ್ನೂ ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ಗೆ ಕಾಲಿಟ್ಟೀದೀಯ. ಈ ಘಟನೆಯಲ್ಲಿ ನಿನ್ನದೇನೂ ತಪ್ಪಿಲ್ಲ ಎಂದು ನನಗೊತ್ತು. ಆದರೆ ಇನ್ನು ಮುಂದೆ ಅಜಯ್ ದೇವಗ್ ಜತೆಗೆ ಹುಷಾರಾಗಿರು. ಅವನಿಂಥ ತರಲೆ ಕೆಲಸ ಮಾಡ್ತಾನೇ ಇರ್ತಾನೆ ಎಂದರಂತೆ. ಹೀಗೆ ಸಮಾಧಾನದ ಸಾಂತ್ವನ ಸಿಕ್ಕಾಗಲೇ ಕತ್ರಿನಾಳ ಬಾಡಿದ ಮುಖ ಚಿಗಿತುಕೊಂಡಿದ್ದು.
ಹಾಂ... ಅಂದ ಹಾಗೆ ಆ ಹಳೆಯ ಒಳಚಡ್ಡಿ ಯಾರದ್ದು ಎಂದೆಲ್ಲ ತರಲೆ ಪ್ರಶ್ನೆ ಕೇಳಬೇಡಿ ಮತ್ತೆ!!!