ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಬಾಲಿವುಡ್‌ನ ಸದ್ಯದ ಹಾಟ್, ಸೆಕ್ಸೀ ಬೊಂಬೆ ಕತ್ರಿನಾ ಕೈಫ್‌ಗೆ ಕಳೆದ ವರ್ಷವೇ ಮದುವೆಯಾಗಿದೆ! ಅದೂ ಕೂಡಾ ಶಾಸಕನೊಬ್ಬನ ಜೊತೆಗೆ!!!
ಎಸ್. ಇದು ನಿಜ. ಖಂಡಿತಾ ಸುಳ್ಳಲ್ಲ. ಹಾಗಾದರೆ, ಸಲ್ಮಾನ್ ಖಾನ್ ಗತಿಯೇನು ಅಂತೀರಾ... ವಿಷಯ ತುಂಬಾ ಸಿಂಪಲ್ಲು, ಆದ್ರೆ ಅಷ್ಟೇ ಕಾಂಪ್ಲಿಕೇಟು ಕೂಡಾ. ಕತ್ರಿನಾ ಕೈಫ್‌ಗೆ ಇಂದೋರ್‌ನ ಶಾಸಕನೊಬ್ಬನ ಜೊತೆಗೆ ಮದುವೆಯಾಗಿರುವ ದಾಖಲೆಯಿದೆ. ಆದ್ರೆ ಮದುವೆಯಾಗಿದ್ದು, ಯಾವಾಗ, ಎಲ್ಲಿ ಮತ್ತು ಹೇಗೆ ಅಂತ ಕೇಳಿದರೆ ಉತ್ತರ ಸಲ್ಮಾನ್ ಖಾನ್‌ಗೇನು... ಸ್ವತಃ ಕತ್ರಿನಾಗೂ ಗೊತ್ತಿಲ್ಲ!!!
ಹೌದು, ಇದೂ ಕೂಡಾ ನಿಜ, ನೀವು ನಂಬಲೇಬೇಕು. 2008ರ ಡಿಸೆಂಬರ್ 2ರಂದು ಇಂದೋರ್‌ನ ಶಾಸಕ ರಮೇಶ್ ಮಂಡೋರಾ ಜೊತೆಗೆ ಕತ್ರಿನಾ ಕೈಫ್ ಮದುವೆಯಾಗಿದೆ ಎಂದು ಮದುವೆಯಾಗಿರುವ ಪ್ರಮಾಣಪತ್ರಗಳು ಹೇಳುತ್ತವೆ. ಆದರೆ ಈ ಪ್ರಮಾಣ ಪತ್ರ ಮಾತ್ರ ಪಕ್ಕಾ ನಕಲಿ! ಯಾರೋ ಕಿಡಿಗೇಡಿಗಳು ಕತ್ರಿನಾ ಕೈಫ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಶಾಸಕ ರಮೇಶ್ ಜೊತೆಗೆ ಸೇರಿಸಿ ಮದುವೆಯಾಗಿದೆ ಎಂಬ ನಕಲಿ ಪ್ರಮಾಣ ಪತ್ರ ಸೃಷ್ಟಿಸಿದ್ದಾರೆ. ಆದರೆ ಇಂಥ ಪ್ರಮಾಣಪತ್ರ ನಾವು ನೀಡಿಲ್ಲ ಎಂದು ಇಂದೋರ್‌ನ ನಗರಸಭೆಯ ವಿವಾಹ ನೋಂದಣಿ ಕಚೇರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಕಿಡಿಗೇಡಿಗಳ್ಯಾರೋ ಕಂಪ್ಯೂಟರಿನಲ್ಲಿ ಇನ್ಯಾರದೋ ಮದುವೆ ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ ಅದೇ ಮಾದರಿಯಲ್ಲಿ ಕತ್ರಿನಾ ಹಾಗೂ ರಮೇಶ್ ಪತಿ-ಪತ್ನಿಯರೆಂದು ದಾಖಲೆ ಸೃಷ್ಟಿಸಿದ್ದಾರೆ ಎಂದಿದ್ದಾರೆ.
IFM
ಈ ಸುದ್ದಿ ಕೇಳಿ ಸ್ವತಃ ಕತ್ರಿನಾ ಕೈಫ್ ಹೌಹಾರಿದ್ದಾರೆ. ನಾನು ನನ್ನ ಜೀವಮಾನದಲ್ಲಿ ಈವರೆಗೆ ಯಾವ ಮದುವೆಯೂ ಆಗಿಲ್ಲ. ನನಗೆ ರಮೇಶ್ ಮಂಡೋರಾ ಅವರ ಪರಿಚಯವೂ ಇಲ್ಲ, ನೋಡಿಯೂ ಇಲ್ಲ. ಇದು ಖಂಡಿತಾ ಸುಳ್ಳು ದಾಖಲೆ. ಡಿಸೆಂಬರ್ 2ರಂದು ನಾನು ನ್ಯೂಯಾರ್ಕ್ ಚಿತ್ರದ ಚಿತ್ರೀಕರಣಕ್ಕಾಗಿ ನ್ಯೂಯಾರ್ಕ್‌ಗೆ ಹೋಗಿದ್ದೆ. ನಾನಿಲ್ಲಿ ಇರಲೇ ಇಲ್ಲ. ಹಾಗಾಗಿ ಮದುವೆಯಾಗೋದು ಹೇಗೆ ತಾನೇ ಸಾಧ್ಯ ಎಂದು ಕತ್ರಿನಾ ಪ್ರಶ್ನಿಸಿದ್ದಾರೆ.
ನನಗೆ ಜೀವನದಲ್ಲಿ ಇದೊಂದು ಉತ್ತಮ ಪಾಠ ಎಂದಿರುವ ಕತ್ರಿನಾ, ಹಲವರು ತಾವು ಅಭಿಮಾನಿಗಳೆಂದು ಹೇಳಿಕೊಂಡು ನಟಿಯರ ಜೊತೆಗೆ ಫೋಟೋ ತೆಗೆಸಿಕೊಂಡು ಆಮೇಲೆ ಆ ಫೋಟೋವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಜೂಹಿ ಚಾವ್ಲಾ ಅವರ ಆಪ್ತ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದವರೇ ಈಗ ನನ್ನ ಬಳಿ ಕೆಲಸ ಮಾಡುತ್ತಿದ್ದಾರೆ. ಅವರು ಹೇಳುವಂತೆ, ಅಂದು ಜೂಹಿ ಚಾವ್ಲಾ ಕೂಡಾ ಇಂಥದ್ದೇ ಸಂದರ್ಭ ಎದುರಿಸಿದ್ದರು. ಆಮೇಲೆ ಇಂಥ ಉಪಟಳ ತಾಳಲಾರದೆ, ಜೂಹಿ ಚಾವ್ಲಾ ಅಭಿಮಾನಿಗಳೆಂದು ಹೇಳಿಕೊಂಡು ಬರುವ ಮಂದಿಯ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳೋದನ್ನೇ ನಿಲ್ಲಿಸಿದರು. ಯಾರಿಗ್ಗೊತ್ತು, ಎಂಥೆಂಥಾ ಮನುಷ್ಯರೂ ಇರುತ್ತಾರೆ. ಫೋಟೋ ತೆಗೆಯುತ್ತೇವೆಂದು ಹೇಳಿಕೊಂಡು ಕ್ಯಾಮರಾದಿಂದ ನಟಿಯರ ದೇಹದ ಯಾವ ಭಾಗವನ್ನು ಕ್ಲಿಕ್ಕಿಸುತ್ತಾರೆಂದು ಮಗೆ ಗೊತ್ತಾಗೋದಿಲ್ಲವಲ್ಲ. ಈ ಘಟನೆಯಿಂದ ಜೀವನ ನನಗೆ ಅತ್ಯುತ್ತಮ ಪಾಠ ಕಲಿಸಿದೆ ಎಂದಿದ್ದಾರೆ ಕತ್ರಿನಾ.