ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಜಾನೇ ತೂ.. ಹುಡುಗ ಇಮ್ರಾನ್ ಖಾನ್ ನಿಶ್ಚಿತಾರ್ಥ! (Avantika Malik | Imran Khan | Jaane Tu Ya Jaane Na)
ಸುದ್ದಿ/ಗಾಸಿಪ್
Feedback Print Bookmark and Share
 
Imran Khan
IFM
'ಜಾನೇ ತೂ ಯಾ ಜಾನೇ ನಾ' ಸಿನಿಮಾ ಗೊತ್ತಿಲ್ಲದವರೇ ಇಲ್ಲ. ಅಲ್ಲೊಬ್ಬಳು ಜೆನಿಲಿಯಾ ಎಂಬ ದಕ್ಷಿಣದ ಚಿನಗುರುಳಿ ಚೆಲುವೆ ಮಿಂಚಿದರೆ ಆಕೆಯೊಂದಿಗೆ ಮಿಂಚಿದ್ದು ಇನ್ನೊಬ್ಬ ಚಾಕೋಲೇಟ್ ಬಾಯ್ ಇಮೇಜ್ ಹೊತ್ತ ಇಮ್ರಾನ್ ಖಾನ್. ಬಾಲಿವುಡ್ ಖಾನ್‌ತ್ರಯರಲ್ಲಿ ಒಬ್ಬರಾದ ಅಮೀರ್ ಖಾನ್ ಅವರ ಖಾಸಾ ಅಳಿಯ ಎಂಬ ಹಣೆಪಟ್ಟಿಯೊಂದಿಗೇ ಬಾಲಿವುಡ್ಡಿಗೆ ಜಾನೇ ತೂ... ಅಂತ ಕಾಲಿಟ್ಟ ಹುಡುಗ ಅಭಿಮಾನಿ ಹುಡುಗಿಯರ ಹೃದಯ ಕದ್ದ ಚೋರ. ಆದರೆ, ಮೊದಲ ಸಿನಿಮಾ ಬಿಡುಗಡೆಯಾಗಿ ಹುಡುಗಿಯರು ಆತನ ಫೋಟೋವನ್ನು ಎದೆಗಪ್ಪಿಕೊಳ್ಳುವಷ್ಟರಲ್ಲೇ ಇಮ್ರಾನ್ ಖಾನ್ ತನ್ನ ಪ್ರೇಯಸಿ ಅವಂತಿಕಾ ಜೊತೆಗೆ ಬಾಲಿವುಡ್ಡಿನ ಪಾರ್ಟಿಗಳಲ್ಲಿ ಮೀಯುತ್ತಿದ್ದುದು ಕಂಡು ಅದೆಷ್ಟೋ ಅಭಿಮಾನಿಗಳು ಕೈಕೈ ಹಿಸುಕತೊಡಗಿದರು. ಈಗ ಇಂಥ ಅಭಿಮಾನಿ ಹುಡುಗಿಯರಿಗೊಂದು ಶಾಕ್ ಟ್ರೀಟ್‌ಮೆಂಟ್ ಇಲ್ಲಿದೆ. ಅವಂತಿಕಾ ಜೊತೆಗೆ ಮುಂದಿನ ಜನವರಿಯಲ್ಲಿ ಇಮ್ರಾನ್ ಖಾನ್ ಮದುವೆ ನಿಶ್ಚಿತಾರ್ಥ ನಡೆಯಲಿದೆ.

ಹೌದು. ಇಮ್ರಾನ್ ಖಾನ್ ಮದುವೆಯಾಗುತ್ತಿದ್ದಾನೆ. ಅದು ತನ್ನ ಜೀವದ ಬಾಲ್ಯದ ಗೆಳತಿ ಅವಂತಿಕಾ ಜೊತೆಗೆ. ಸಿನಿಮಾ ರಂಗಕ್ಕೆ ಕಾಲಿಡುವ ಮೊದಲೇ ಅವಂತಿಕಾ ಮಲಿಕ್ ಎಂಬ ಹುಡುಗಿಯ ಜೊತೆಗೆ ಮುಂಬೈಯಲ್ಲಿ ಎಲ್ಲೆಡೆ ಸುತ್ತಾಡುತ್ತಿದ್ದ. ಈ ಅಮರ ಪ್ರೇಮ ಸಿನಿಮಾ ರಂಗಕ್ಕೆ ಬಂದ ಮೇಲೂ ಮುಂದುವರಿದು ಮದುವೆಯಾಗುವವರೆಗೆ ತಲುಪಿದೆ.
Avantika Malik, Imran Khan
IFM


ಮೂಲಗಳ ಪ್ರಕಾರ, ಅವಂತಿಕಾ ಹಾಗೂ ಇಮ್ರಾನ್ ಖಾನ್ ಇಬ್ಬರೂ ಈ ಹಿಂದೆಯೇ ಉಂಗುರ ಬದಲಾಯಿಸಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಖಾಸಗಿಯಾಗಿ ಕೇವಲ ಬೆರಳೆಣಿಕೆಯ ಬಂಧುಗಳ ಉಪಸ್ಥಿತಿಯಲ್ಲಿ ಇದು ಸರಳವಾಗಿ ನಡೆದಿತ್ತು. ಆದರೆ, ಆಗ ಇಮ್ರಾನ್‌ರ ಅಪ್ಪ ಇರಲಿಲ್ಲ. ಅದಕ್ಕಾಗಿ ಮತ್ತೆ ನಿಶ್ಚಿತಾರ್ಥ ಮತ್ತೆ ನಡೆಯಲಿದೆ. ಯಾಕೆಂದರೆ ಇಮ್ರಾನ್ ಅವರ ಅಪ್ಪ ಕ್ಯಾಲಿಫೋರ್ನಿಯಾದಿಂದ ಮುಂಬೈಗೆ ಬರಲಿದ್ದಾರೆ.

ಅಪ್ಪ ಬರುವ ಸಂಭ್ರಮದ್ಲಲಿ ಇಮ್ರಾನ್ ಥ್ರಿಲ್ಲಾಗಿ ಹೋಗಿದ್ದಾನೆ. ಇಮ್ರಾನ್ ಕ್ಯಾಲಿಫೋರ್ನಿಯಾದಲ್ಲೇ ಅಪ್ಪನ ಜೊತೆಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿ ಮುಂಬೈಗೆ ಬಂದಿದ್ದರು. ಈವರೆಗೆ ಯಾವೊಂದು ಕುಟುಂಬ ಸಮಾರಂಭಗಳಲ್ಲೂ ಅಪ್ಪನ ಉಪಸ್ಥಿತಿಯಿರಲಿಲ್ಲ. ಈಗ ಮೊದಲ ಬಾರಿ ಸಂತೋಷದ ಸಮಾರಂಭವೊಂದರಲ್ಲಿ ಅಪ್ಪ ಪಾಲ್ಗೊಳ್ಳುತ್ತಿರುವುದರಿಂದ ಸಹಜವಾಗಿಯೇ ಇಮ್ರಾನ್ ಖುಷಿಯಾಗಿದ್ದಾನೆ. ಅಂದಹಾಗೆ, ಮದುವೆ ಯಾವಾಗ ಎಂಬ ವಿಚಾರ ಇನ್ನೂ ಹೊರಬಿದ್ದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಇಮ್ರಾನ್ ಖಾನ್, ಜಾನೇ ತೂ ಯಾ ಜಾನೇ ನಾ, ಅವಂತಿಕಾ ಮಲ್ಲಿಕ್