ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಪ್ಪ ಆಸ್ಪತ್ರೆಗೆ ದಾಖಲು: ಶಿಲ್ಪಾ ಶೆಟ್ಟಿಗೆ ಮದುವೆ ದಿನವೂ ಅಳುಮುಖ! (Shilpa Shetty | Raj Kundra | Surendra Shetty | Shamita Shetty)
ಸುದ್ದಿ/ಗಾಸಿಪ್
Feedback Print Bookmark and Share
 
Shilpa Shetty, Raj Kundra
IFM
ಯಾಕೋ ಮಂಗಳೂರು ಮತ್ಸಕನ್ಯೆ ಶಿಲ್ಪಾಶೆಟ್ಟಿಗೆ ಆಕೆಯ ಮದುವೆ ಸಂತಸದ ದಿನಗಳನ್ನು ತರುತ್ತಿಲ್ಲ. ತರಾತುರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಕಾರಣ ತಂಗಿ ಶಮಿತಾ ಶೆಟ್ಟಿಗೆ ಅಕ್ಕನ ನಿಶ್ಚಿತಾರ್ಥಕ್ಕೆ ಬರಲಾಗಲೇ ಇಲ್ಲ. ತಂಗಿ ಬರಲಿಲ್ಲವೆಂದು ಅಕ್ಕ ಶಿಲ್ಪಾ ಹಪಹಪಿಸಿದಳು. ನಂತರ ತಂಗಿಯೇನೋ ಬಿಗ್ ಬಾಸ್‌ ಕಾರ್ಯಕ್ರಮವನ್ನು ಕಾಡಿ ಬೇಡಿ ಹೊರಬಂದಿದ್ದಾಗಿದೆ. ಆದರೀಗ ಶಿಲ್ಪಾಳ ಅಪ್ಪನ ಸರದಿ. ಇತ್ತ ಮದುವೆಗೆ ಕ್ಷಣಗಣನೆ ಆರಂಭವಾಗಿದ್ದರೆ ಅತ್ತ ಶಿಲ್ಪಾಳ ಅಪ್ಪ ಮಲೇರಿಯಾ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲೀಗ ಅಪ್ಪ ಸುರೇಂದ್ರ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ.

ತನ್ನ ಗೆಳೆಯ ಕಿರಣ್ ಬಾವಾ ಅವರ ಖಂಡಾಲಾದ ಬಂಗಲೆಯಲ್ಲಿ ಶಿಲ್ಪಾ ತನ್ನ ಕೆಲವೇ ಕುಟುಂಬದ ಆಪ್ತರ ಉಪಸ್ಥಿತಿಯಲ್ಲಿ ಭಾನುವಾರ (ನ.22) ಸಪ್ತಬದಿ ತುಳಿಯಲಿದ್ದಾರೆ. ಶನಿವಾರ (ನ.21) ಶಿಲ್ಪಾ ಶೆಟ್ಟಿ ಅವರ ಮೆಹೆಂದಿ ಶಾಸ್ತ್ರ ನಡೆಯುತ್ತಿದ್ದು, ಈ ಸಮಾರಂಭದಲ್ಲಿ ಅಪ್ಪ ಭಾಗಿಯಾಗಿಲ್ಲ. ಅವರು ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಶ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ (ಐಸಿಯು) ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಮದುವೆಯ ದಿನ ಭಾನುವಾರ ಮಗಳ ಕನ್ಯಾದಾನಕ್ಕಾಗಿ ಹಾಜರಾಗುವ ನಿರೀಕ್ಷೆಯಿದೆ.

Shilpa Shetty
IFM
ಮೂಲಗಳ ಪ್ರಕಾರ, ಮದುವೆಯ ಕನ್ಯಾದಾನಕ್ಕಾಗಿ ಅಪ್ಪ ಸುರೇಂದ್ರ ಶೆಟ್ಟಿ ಬರಲಾಗದಿದ್ದರೆ ಖಂಡಿತವಾಗಿಯೂ ಶಿಲ್ಪಾಳ ಹೃದಯವೇ ಒಡೆದುಹೋಗುತ್ತಿತ್ತು. ಆದರೆ, ವೈದ್ಯರು ಸುರೇಂದ್ರ ಶೆಟ್ಟಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ಮೆಹೆಂದಿ ಶಾಸ್ತ್ರ ಸಮಾರಂಭಕ್ಕೆ ಬರಲಾಗದಿದ್ದರೂ, ಕನ್ಯಾದಾನಕ್ಕೆ ಬರಬಹುದಾದಷ್ಟು ಚೇತರಿಕೆ ಅವರಲ್ಲಿ ಕಂಡುಬಂದಿರುವ ಕಾರಣ ಶಿಲ್ಪಾಳಿಗೆ ಸಂತೋಷವಾಗಿದೆ. ಆದರೂ, ಶಿಲ್ಪಾ, ಶಮಿತಾ ಹಾಗೂ ತಾಯಿ ಸುಂದರಾ ಶೆಟ್ಟಿ ಅವರಿಗೆ ಎಂದಿನ ನಗುಮೊಗವಿಲ್ಲ ಎಂದು ಶಿಲ್ಪಾಳ ಆಪ್ತ ಮೂಲಗಳು ಹೇಳುತ್ತವೆ.

ಮದುವೆಯಲ್ಲಿ ಶಿಲ್ಪಾ- ರಾಜ್ ಡ್ಯಾನ್ಸ್ ಶೋ!: ಶಿಲ್ಪಾಳ ಮದುವೆ ದಿನ ಭಾನುವಾರ ಅವರ ಕುಟುಂಬಸ್ಥರು ವಿಶೇಷ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದಲೇರ್ ಮೆಹೆಂದಿ ಅವರ ಸಂಗೀತ ಹಾಗೂ ಗುಂಪು ನೃತ್ಯ ಇರಲಿದೆ. ಶಿಲ್ಪಾ ಹಾಗೂ ರಾಜ್ ದಂಪತಿಗಳು ಇದೇ ಕಾರ್ಯಕ್ರಮದಲ್ಲಿ ಸಿಂಗ್ ಈಸ್ ಕಿಂಗ್ ಚಿತ್ರದ ತೇರಿ ಓರೆ ಎಂಬ ರೊಮ್ಯಾಂಟಿಕ್ ಹಾಡಿಗೆ ಜೊತೆಯಾಗಿ ಹೆಜ್ಜೆಹಾಕಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ, ರಾಜ್ ಕುಂದ್ರಾ, ಸುರೇಂದ್ರ ಶೆಟ್ಟಿ