ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅದ್ದೂರಿಯಾಗಿ ಮುಗಿದ ಮದುವೆ: 'ಶಿಲ್ಪಾ ಶೆಟ್ಟಿ' ಇನ್ನು 'ಶಿಲ್ಪಾ ಕುಂದ್ರಾ'! (Bollywood | Shilpa Shetty | Raj Kundra | Shamita Shetty)
ಸುದ್ದಿ/ಗಾಸಿಪ್
Feedback Print Bookmark and Share
 
Shilpa Shetty, Raj Kundra
WD
ಬಾಲಿವುಡ್ಡಿನ ಮತ್ತೊಬ್ಬ ಕನ್ಯಾಮಣಿ ಮದುವೆಯಾಗೋ ಮೂಲಕ ಶ್ರೀಮತಿಯಾಗಿದ್ದಾರೆ. ಮಂಗಳೂರಿನ ಮತ್ಸಕನ್ಯೆ ಶಿಲ್ಪಾ ಶೆಟ್ಟಿ ಲಂಡನ್‌ನ ಉದ್ಯಮಿ ರಾಜ್ ಕುಂದ್ರಾ ಜೊತೆಗೆ ಹಸೆಮಣೆಯೇರಿ ಸಪ್ತಪದಿ ತುಳಿಯುವ ಮೂಲಕ ಹಿಂದೂ ದಕ್ಷಿಣ ಭಾರತೀಯ ಸಂಪ್ರದಾಯದ ಮೂಲಕ ಭಾನುವಾರ ವಿವಾಹವಾದರು. ಕೆಂಪು ಜರತಾರಿ ಸೀರೆಯಲ್ಲಿ ಚಿನ್ನದ ಕಸೂತಿಯಿರುವ ಸೀರೆಯುಟ್ಟ ಶಿಲ್ಪಾ ಆಕರ್ಷಕವಾಗಿ ಕಾಣುತ್ತಿದ್ದರು.

34ರ ಹರೆಯದ ಶಿಲ್ಪಾ ತನ್ನ ಗೆಳತಿ ಕಿರಣ್ ಬಾವಾ ಅವರ ಖಂಡಾಲಾದ ಬಂಗಲೆಯಲ್ಲಿ ನಡೆದ ಅದ್ದೂರಿಯಾಗಿ ಮದುವೆಯಾದರು. ಮದುವೆಯಲ್ಲಿ ಕೇವಲ ಪರಮಾಪ್ತ ಗೆಳೆಯರು ಹಾಗೂ ಬಂಧುಗಳಿಗೆ ಮಾತ್ರ ಆಹ್ವಾನಿಸಲಾಗಿತ್ತು. 1993ರಲ್ಲೇ ಬಾಲಿವುಡ್ಡಿಗೆ ಕಾಲಿಟ್ಟರೂ, ಆರಕ್ಕೇರದೆ, ಮೂರಕ್ಕಿಳಿಯದೆ ಇದ್ದ ಶಿಲ್ಪಾ 2007ರಲ್ಲಿ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಮೇಲೆ ದಿಢೀರ್ ಈಕೆ ಖ್ಯಾತಿಯ ಉತ್ತುಂಗಕ್ಕೇರಿದಳು. ಅಷ್ಟೇ ಅಲ್ಲ, ಭಾರತದ ಬಾಲಿವುಡ್ ಮುಖವಾಣಿ ಎಂಬಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಳು. ಬಿಗ್ ಬ್ರದರ್‌ನಲ್ಲಿ ಜೇಡ್ ಗುಡಿ ಕೈಯಿಂದ ಜನಾಂಗೀಯ ನಿಂದನೆಗೊಳಗಾಗಿ ವಿಶ್ವದಾದ್ಯಂತ ಅನುಕಂಪದ ಅಲೆ ಸೃಷ್ಟಿಸಿದ್ದ ಶಿಲ್ಪಾ ನಂತರ ಭಾರತದಲ್ಲಿ ಕಲರ್ಸ್ ಚಾನಲ್‌ನ ಬಿಗ್ ಬಾಸ್ ಸಾರಥ್ಯ ವಹಿಸಿದಳು. ಬಿಗ್ ಬ್ರದರ್ ಮುಗಿಸಿ ಲಂಡನ್‌ನಿಂದ ಭಾರತಕ್ಕೆ ಬಂದು ತನ್ನದೇ ಹೆಸರಿನ ಬ್ರ್ಯಾಂಡಿನ ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ವ್ಯಾವಹಾರಿಕವಾಗಿ ಪರಿಚಯವಾದುದು ರಾಜ್ ಕುಂದ್ರಾ ಅವರನ್ನು.

ರಾಜ್ ಕುಂದ್ರಾರ ಮೊದಲ ನೋಟಕ್ಕೇ ಸೋತ ಶಿಲ್ಪಾ ಎರಡು ವರ್ಷಗಳ ಕಾಲ ರಾಜ್ ಜೊತೆಗೆ ಸುತ್ತಾಡವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಲಂಡನ್‌ನಲ್ಲಿ ಏಳು ಬೆಡ್‌ರೂಂಗಳ ಮನೆ ಮಾಡುವ ಮೂಲಕ ಅಲ್ಲೇ ಸೆಟ್ಲ್ ಆಗುವ ಸೂಚನೆಯನ್ನೂ ನೀಡಿದ್ದ ಶಿಲ್ಪಾ ಕೊನೆಗೂ ರಾಜ್ ಮದುವೆಯಾಗಿ ಮುಂಬೈಯಲ್ಲೇ ನೆಲೆಸುವ ನಿರ್ಧಾರ ಮಾಡಿದ್ದಾರೆ. ಅಮಿತಾಬ್ ಬಚ್ಚನ್ ಮನೆಯ ಪಕ್ಕದಲ್ಲೇ ಜುಹುವಿನಲ್ಲಿ ಶಿಲ್ಪಾ ಹೊಸ ಮನೆಯನ್ನೂ ಮಾಡಿಕೊಂಡಿದ್ದಾರೆ.
Shamita Shetty, Sundara Shetty
IFM


ಮೆಹೆಂದಿ ಸಮಾರಂಭ: ಮದುವೆಯ ಮುನ್ನಾ ದಿನ ಮೆಹೆಂದಿ ಹಾಗೂ ಸಂಗೀತ ಸಮಾರಂಭವೂ ಅದ್ದೂರಿಯಾಗಿಯೇ ನಡೆಯಿತು. ತಮ್ಮ ಕೈಯಲ್ಲಿ ಆರ್ ಬರೆಯುವ ಮೂಲಕ ಶಿಲ್ಪಾ ಭಾವುಕವಾಗಿ ಮೆಹೆಂದಿ ಹಾಕಿಸಿಕೊಂಡರು. ಶಿಲ್ಪಾಳ ಹಲವು ಬಾಲಿವುಡ್ ಹಿಟ್ ಹಾಡುಗಳಿಗೆ ಶಿಲ್ಪಾ ತಂಗಿ ಶಮಿತಾ ಹೆಜ್ಜೆ ಹಾಕಿದರು. ಸ್ಕಿಟ್ ಒಂದರಲ್ಲೂ ಶಮಿತಾ ಶೆಟ್ಟಿ ಅಭಿನಯಿಸಿದರು.

ಸ್ವತಃ ಮದುಮಗ ರಾಜ್ ಕುಂದ್ರಾ ಮೈಕಲ್ ಜಾಕ್ಸನ್ ಅವರ ಪ್ರಸಿದ್ಧ ಮೂನ್ ವಾಕ್ ನೃತ್ಯ ಹಾಗೂ ಲವ್ ಆಜ್ ಕಲ್ ಚಿತ್ರದ ಆಹೂಂ ಆಹೂಂ ಆಹೂಂ ಹಾಡಿಗೆ ಹೆಜ್ಜೆಹಾಕಿದರು. ನಂತರ ಓಂ ಶಾಂತಿ ಓಂ ಹಾಡಿಗೆ ಶಿಲ್ಪಾ ಹಾಗೂ ರಾಜ್ ಹೆಜ್ಜೆ ಹಾಕಿದರು. ಮಂಗಳವಾರ ನ.24ರಂದು ಮುಂಬೈನಲ್ಲೇ ಶಿಲ್ಪಾ ಹಾಗೂ ರಾಜ್ ಅವರ ಸಂತೋಷ ಕೂಟ ಸಮಾರಂಭ ನಡೆಯಲಿದ್ದು, ಬಾಲಿವುಡ್ಡಿನ ದೊಡ್ಡ ಬಳಗವೇ ಹಾಜರಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಮದುವೆ, ಶಮಿತಾ ಶೆಟ್ಟಿ, ಬಾಲಿವುಡ್