ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶಿಲ್ಪಾ ಶೆಟ್ಟಿಗಿನ್ನು ಶೀಘ್ರದಲ್ಲೇ ತಾಯಿಯಾಗೋ ಆಸೆ! (Raj Kundra | Shilpa Shetty | Akshay Kumar | Shamita Shetty)
ಸುದ್ದಿ/ಗಾಸಿಪ್
Bookmark and Share Feedback Print
 
Raj Kundra,| Shilpa Shetty Wedding Reception
IFM
ಮೊನ್ನೆ ಮೊನ್ನೆಯಷ್ಟೆ ಶಿಲ್ಪಾ ಶೆಟ್ಟಿ ತನ್ನ ಗೆಳೆಯ ರಾಜ್ ಕುಂದ್ರಾ ಜೊತೆ ಮುಂಬೈನಲ್ಲಿ ಗಡದ್ದಾಗಿ ಅದ್ದೂರಿಯಾಗಿ ಮದುವೆ ಮಾಡಿಕೊಂಡದ್ದು ಜಗತ್ತಿಗೇ ಗೊತ್ತಿದೆ. ಮದುವೆಯಾಗಿದ್ದೇ ತಡ ಶಿಲ್ಪಾಗೆ ಈಗ ತಾಯಿಯಾಗುವ ಬಯಕೆ ಬಂದೇ ಬಿಟ್ಟಿದೆ!

ಹೌದು. 30ರ ನಂತರವಷ್ಟೇ ಮದುವೆಯಾಗಿ ಮತ್ತೆ, ಎರಡು ಮೂರು ವರ್ಷ ಕಳೆದ ಮೇಲಷ್ಟೇ ತಾಯ್ತನದ ಬಗ್ಗೆ ಯೋಚನೆ ಮಾಡುವ ಬಾಲಿವುಡ್ ನಟೀಮಣಿಯರ ಪೈಕಿ ಶಿಲ್ಪಾಗೆ ಯಾಕಪ್ಪಾ ಇಷ್ಟು ಬೇಗ ತಾಯಿಯಾಗೋ ಬಯಕೆ ಎಂದು ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಇದಕ್ಕೆ ಆಕೆ ಹೇಳುವ ಸ್ಪಷ್ಟನೆಯೇ ಬೇರೆ. ಮದುವೆಯಾಗಲು ಇಷ್ಟು ವರ್ಷ ಕಾದಿದ್ದಾಯಿತು. ಅಂತೂ ಮದುವೆಯಾಯಿತು. ನಮ್ಮದೊಂದು ಪುಟ್ಟ ಫ್ಯಾಮಿಲಿ ಮಾಡಬೇಕೆಂದು ಆಸೆಪಟ್ಟಿದ್ದೇನೆ. ಈ ಆಸೆಗಾಗಿ ತುಂಬ ದಿನ ಕಾಯುವ ತಾಳ್ಮೆ ನನ್ನಲ್ಲಿಲ್ಲ. ಹಾಗಾಗಿ ಶೀಘ್ರದಲ್ಲೇ ತಾಯಿಯಾಗುತ್ತೇನೆ ಅಂತ ಹೇಳಿದ್ದಾಳೆ ಶಿಲ್ಪಾ.

ಜೀವನದಲ್ಲಿ ಮದುವೆಯಾದರೆ ಒಂದೇ ಎಂದು ಅಂದುಕೊಂಡಿದ್ದೆ. ಮದುವೆಯಾದರೆ ಹೀಗೇ ಆಗಬೇಕು ಎಂದು ನನ್ನದೇ ಕನಸು ಕಂಡಿದ್ದೆ. ಅಕ್ಷರಶಃ ನಾನು ಕನಸು ಕಂಡಂತೆಯೇ ಮದುವೆ ನಡೆದಿದೆ. ಮದುವೆಯಾಗಿದ್ದು ನನಗೆ ಅತ್ಯಂತ ಖುಷಿ ತಂದಿದೆ. ಜಗತ್ತಿ ತುತ್ತ ತುದಿಯಲ್ಲಿ ನಾನಿದ್ದಂತೆ ಭಾಸವಾಯಿತು. ತಂಗಿ ಶಮಿತಾಗಂತೂ ನನ್ನ ಮದುವೆ ಸಿನಿಮೀಯ ಮಾದರಿಯಲ್ಲಿ ಮದುವೆ ನಡೆದಂತೆ ಅನಿಸಿತ್ತಂತೆ. ಒಟ್ಟಾರೆ ಎಲ್ಲ ಕಾರ್ಯವೂ ಅಚ್ಚುಕಟ್ಟಾಗಿ ಅದ್ಭುತವಾಗಿ ನಡೆಯಿತು. ಆದರೆ, ರಿಸೆಪ್ಶನ್‌ನಲ್ಲಿ ಎಲ್ಲರ ಜೊತೆಗೆ ನಗುಮೊಗ ತೋರಿ ನನ್ನ ಬಾಯಿಯೇ ನೋಯುತ್ತಿದೆ. ಅಷ್ಟು ದೊಡ್ಡ ಪಾರ್ಟಿಯಲ್ಲಿ ಎಲ್ಲರನ್ನೂ ನಗುತ್ತಾ ಸ್ವಾಗತಿಸೋದು ತುಂಬ ಕಷ್ಟದ ಕೆಲಸವಪ್ಪಾ ಎನ್ನುತ್ತಾರೆ.

Shamita Shetty
IFM
ಸದ್ಯ ಶಿಲ್ಪಾ ದಂಪತಿಗಳು ತಿರುಪತಿಗೆ ತಮ್ಮ ಅಪ್ಪ, ಅಮ್ಮ ತಂಗಿ ಜೊತೆಗೆ ಹೋಗಿ ದೇವರ ಆಶಿರ್ವಾದ ತೆಗೆದುಕೊಂಡು ಬಂದಿದ್ದಾರೆ. ನಂತರ ಹನಿಮೂನ್‌ಗಾಗಿ ಬಹಾಮಾ ಬೀಚ್‌ಗಳಲ್ಲಿ ಸುತ್ತಾಡಲಿದ್ದಾರೆ. ರಾಜ್ ಈಗಾಗಲೇ ಅಲ್ಲಿ ರೆಸಾರ್ಟ್‌ವೊಂದರಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಒಳಾಂಗಣ ಶೃಂಗಾರವನ್ನೂ ಹೀಗೆಯೇ ಇರಬೇಕು ಎಂದು ಎಲ್ಲ ಅರೇಂಜ್ ಮಾಡಿಸಿ ಆಗಿದೆ. ಬಹಾಮಾಗೆ ಹಾರಿ ಬಂದ ನಂತರ ರಾಜ್ ಶಿಲ್ಪಾ ಜೊತೆ ಆಕೆಯ ತಂದೆ, ತಾಯಿ, ತಂಗಿಯರನ್ನೂ ಮೆಡಿಟರೇನಿಯನ್‌ಗೆ ಕರೆದುಕೊಂಡು ಹೋಗಲಿದ್ದಾರಂತೆ.

ರಾಜ್ ಕುಂದ್ರಾರನ್ನು ಮದುವೆಯಾಗಿ ಲಂಡನ್‌ನಲ್ಲಿರುತ್ತೀರೋ ಅಥವಾ ಮುಂಬೈನಲ್ಲೋ ಎಂದರೆ, ಲಂಡನ್‌ನಲ್ಲೂ ಮನೆಯಿದೆ ಮುಂಬೈನಲ್ಲೂ ಇದೆ. ಎರಡು ಮನೆ ಇರೋ ಕಾರಣ ಸ್ವಲ್ಪ ಸಮಯ ಅಲ್ಲಿ, ಸ್ವಲ್ಪ ಸಮಯ ಇಲ್ಲಿ ಇರುತ್ತೇವೆ ನಾವಿಬ್ಬರೂ ಎನ್ನುತ್ತಾರೆ ಶಿಲ್ಪಾ.

ಶಿಲ್ಪಾ ಮದುವೆಯಲ್ಲಿ ಅಕ್ಷಯ್ ಕುಮಾರ್, ಸಿಟ್ಟಾದ ಶಿಲ್ಪಾ!

ಇತ್ತೀಚೆಗೆ ಶಿಲ್ಪಾಳ ರಿಸೆಪ್ಶನ್ ಮುಂಬೈನಲ್ಲಿ ನಡೆಯಿತು. ಬಾಲಿವುಡ್‌ನ ಬಹುತೇಕ ಎಲ್ಲ ದಿಗ್ಗಜರೂ ಮದುವೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ಬಿಗ್ ಬಿ ಅಮಿತಾಬ್ ಬಚ್ಚ್, ಐಶ್ವರ್ಯಾ ರೈ, ಸುನಿಲ್ ಶೆಟ್ಟಿ, ಅಮಿಷಾ ಪಟೇಲ್, ಶಾರುಖ್ ಖಾನ್, ಜಯಪ್ರದಾ, ರಾಣಿ ಮುಖರ್ಜಿ, ಗೋವಿಂದ, ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ಎಲ್ಲರೂ ಬಂದಿದ್ದರು. ಆದರೆ ಮದುವೆಯಲ್ಲಿ ಅಕ್ಷಯ್ ಕುಮಾರ್ ಕಾಣಲಿಲ್ಲ. ಶಿಲ್ಪಾ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ ಅಕ್ಷಯ್ ಯಾಕೆ ಬರಲಿಲ್ಲ ಅನ್ನೋ ಸಂಶಯ ಯಾರಲ್ಲೂ ಇರಲಿಲ್ಲ!
Shilpa Shetty
IFM


ನಿಜಕ್ಕೂ ರಿಸೆಪ್ಶನ್ ಆರಂಭಕ್ಕೂ ಮೊದಲು ಅಕ್ಷಯ್ ಕುಮಾರ್ ಬಂದಿದ್ದರಂತೆ! ಹೇಳಿ ಕೇಳಿ ಶಿಲ್ಪಾಳ ಮಾಜಿ ಪ್ರೇಮಿ ಅಕ್ಷಯ್ ಕುಮಾರ್. ಅಕ್ಷಯ್ ಶಿಲ್ಪಾ ಜೊತೆಗೆ ಚೆನ್ನಾಗಿ ಮರಸುತ್ತಿ ಕೈ ಕೊಟ್ಟು ಟ್ವಿಂಕಲ್ ಖನ್ನಾಳ ಕೈಹಿಡಿದದ್ದು ಎಲ್ಲರಿಗೂ ಗೊತ್ತು. ಹೀಗಿದ್ದಾಗ ಶಿಲ್ಪಾ ಯಾಕೆ ಅಕ್ಷಯ್‌ಗೆ ಆಹ್ವಾನ ಕೊಟ್ಟಾಳು ಹೇಳಿ? ಎಲ್ಲರ ಊಹೆಯಂತೆಯೇ ಶಿಲ್ಪಾ ತನ್ನ ಮದುವೆಗೆ ಅಕ್ಷಯ್-ಟ್ವಿಂಕಲ್ ಖನ್ನಾಗೆ ಆಮಂತ್ರಣ ನೀಡಿರಲಿಲ್ಲ. ಆದರೂ ಅಕ್ಷಯ್ ಮದುವೆಗೆ ಬಂದರಂತೆ! ಹೇಗಂತೀರಾ?

ಶಿಲ್ಪಾಳ ರಿಸೆಪ್ಶನ್ ಆರಂಭವಾಗುವ ಹೊತ್ತಿಗೆ ಮ್ಯೂಸಿಕ್ ಬ್ಯಾಂಡ್‌ನವರು ಹಲವು ಹಾಡುಗಳನ್ನು ವೇದಿಕೆಯಲ್ಲಿ ಹಾಡುತ್ತಿದ್ದರು. ಹಾಗೆ ಹಾಡುತ್ತಾ ಶಿಲ್ಪಾ ಅಕ್ಷಯ್ ಅಭಿನಯದ ಹಿಟ್ ಚಿತ್ರ ಧಡ್ಕನ್‌ನ ರೊಮ್ಯಾಂಟಿಕ್ ಹಾಡೊಂದನ್ನು ಹಾಡಿದರಂತೆ. ಹಾಡು ಆರಂಭವಾದುದೇ ತಡ ಶಿಲ್ಪಾಳ ಮೂಡ್ ಆಫ್. ಶಿಲ್ಪಾಳ ಮನೆಯವರು ಇನ್ಮುಂದೆ ಶಿಲ್ಪಾ-ಅಕ್ಷಯ್ ಅಭಿನಯದ ಯಾವುದೇ ಹಾಡನ್ನೂ ಹಾಡಬೇಡಿ ಎಂದು ತಾಕೀತು ಮಾಡಿದ್ರಂತೆ. ಬ್ಯಾಂಡ್ ಗಪ್‌ಚುಪ್ ಆಗಿಬಿಡ್ತು. ಈಗ ಗೊತ್ತಾಯ್ತಲ್ಲಾ, ಶಿಲ್ಪಾಳ ಮದುವೆಗೆ ಅಕ್ಷಯ್ ಹೇಗೆ ಬಂದ ಅಂತ!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಶಮಿತಾ, ಅಕ್ಷಯ್ ಕುಮಾರ್, ಶಿಲ್ಪಾ ಮದುವೆ