ಬಾಲಿವುಡ್ ಬೆಡಗಿ ಗೀತಾ ಬಾಸ್ರಾ ಜೊತೆ ಹರ್ಭಜನ್ ಸರಸ ವೃತ್ತಾಂತ!
IFM
ಕ್ರಿಕೆಟಿಗರಿಗೂ ಬಾಲಿವುಡ್ಡಿಗೂ ಸಂಬಂಧದ ಇತಿಹಾಸ ಬಹಳ ಪುರಾತನವಾದುದು. ಪಾರ್ಟಿಗಳಲ್ಲಿ ತಿಂದುಂಡು ಮಿಂದು ತೇಗುವ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಹೆಚ್ಚು ಮಿಂಚುತ್ತಿರುವುದು ಕ್ರಿಕೆಟಿಗರೇ. ಇಂತಿಪ್ಪ ಸಮಯದಲ್ಲಿ ಹರ್‌ಭಜನ್ ಸಿಂಗ್ ಎಂಬ ಭಜ್ಜಿ ಕೂಡಾ ಭರ್ಜರಿಯಾಗಿ ಬಾಲಿವುಡ್ ಬೆಡಗಿ ಗೀತಾ ಬಾಸ್ರಾ ಜೊತೆಗೆ ಬಳುಕುತ್ತಿರುವುದೂ ಕೂಡಾ ಇಂದು ನಿನ್ನೆಯದಲ್ಲ.
ಗೀತಾ ಬಾಸ್ರಾ ನಟಿಸಿದ್ದು ಕೇವಲ ಎರಡು ಚಿತ್ರಗಳಲ್ಲಾದರೂ, ತನ್ನ ನಟೆಗಿಂತ ಹೆಚ್ಚಾಗಿ ಸುದ್ದಿಯಾದುದು ಭಜ್ಜಿಯ ಸ್ನೇಹದಿಂದ. ಈ ಹಳೆಯ ವಿಚಾರವನ್ನು ಮತ್ತೆ ನೆನಪಿಸುವ ಸಂದರ್ಭ ಯಾಕೆ ಬಂತೆಂದರೆ, ಮೊನ್ನೆ ಮೊನ್ನೆ ಭಜ್ಜಿ ಹೊಸ ಫ್ಲ್ಯಾಟ್ ಖರೀದಿಸಿದ್ದಾರೆ. 14,160 ಚದರ ಅಡಿಯ ಈ ಹೊಸ ಭಾರೀ ಫ್ಲ್ಯಾಟ್ ಮುಂಬೈನ ಪ್ರತಿಷ್ಠಿತ ಟ್ರೇಡ್ ವರ್ಲ್ಡ್ ಬಿಲ್ಡಿಂಗ್‌ನ ಎಂಟನೇ ಮಹಡಿಯಲ್ಲಿದೆ. ಹೀಗಿರುವ ಈ ಹೊಸ ಫ್ಲ್ಯಾಟ್ ಖರೀದಿಸುವ ಸಂದರ್ಭ ಭಜ್ಜಿ ಯಾರ ಜೊತೆಗೆ ಅಲ್ಲಿಗೆ ಹೋಗಿರಬಹುದು ಹೇಳಿ! ತಮ್ಮ ಹೆತ್ತವರೊಂದಿಗಿರಬಹುದು ಎಂದರೆ ಖಂಡಿತಾ ತಪ್ಪು. ಅದೇ ತನ್ನ ಖಾಸಾ ಗೆಳತಿ ಗೀತಾ ಬಾಸ್ರಾ ಜೊತೆಗೆ. ಭಜ್ಜಿ ಹೀಗೆ ಗೀತಾ ಬಾಸ್ರಾಳ ಸೊಂಟವನ್ನು ಬಳಸಿ ಹಿಡಿದು ಹೊಸ ಫ್ಲ್ಯಾಟ್‌ಗೆ ಹೋಗಿದ್ದನ್ನು ಮತ್ತೆ ಮತ್ತೆ ಕನಸೋ ನನಸೋ ಎಂಬಂತೆ ತಮ್ಮ ಕಣ್ಣುಜ್ಜಿಗೊಂಡು, ಮೈಚಿವುಟಿ ನೋಡಿಕೊಂಡವರಿದ್ದಾರಂತೆ. ಅಷ್ಟೇಕೆ, ಕ್ಲಬ್ಬು, ಬಾರು, ರೆಸ್ಟೋರೆಂಟ್, ಪಾರ್ಟಿ ಹೀಗೆ ಎಲ್ಲೆಡೆಯೂ ಈ ಜೋಡಿಯನ್ನು ನೋಡಿದವರಿದ್ದಾರೆ. ಮುಂಬೈನ ಖ್ಯಾತ ಹೊಟೇಲೊಂದರಲ್ಲಿ ಭಜ್ಜಿ ಉಳಿದಿದ್ದ ರೂಮಿಗೆ ರಾತ್ರಿ ಈಕೆ ಒಳಹೊಕ್ಕದ್ದನ್ನೂ ನೋಡಿ ಕೆಲವರು ಗೋಡೆ ಸಂದಿಯಲ್ಲಿ ಪಿಸಪಿಸ ಮಾತಾಡಲೂ ಶುರು ಮಾಡಿದ್ದಾರೆ.
IFM
ಅದೆಲ್ಲಾ ಹಾಗಿರಲಿ, ಆದರೂ ಯಾಕೋ ಇತ್ತೀಚೆಗೆ ಹರ್ಭಜನ್ ಹಾಗೂ ಗೀತಾರ ನಡುವಿನ ಸಂಬಂಧ ಗಟ್ಟಿಕೊಳ್ಳುತ್ತಲೇ ಇದೆ ಎಂದು ಹಲವರು ಲೆಕ್ಕಾಚಾರ ಹಾಕುತ್ತಿದ್ದಾರೆ. ತನ್ನ ಜೀವನದ ಪ್ರತಿಯೊಂದು ಪ್ರಮುಖ ನಿರ್ಧಾರಗಳಲ್ಲೂ ಹರ್ಭಜನ್ ಫೋನ್ ಕಾಲ್ ನೇರವಾಗಿ ಹೋಗೋದು ಗೀತಾಳಿಗೆ. ಆಕೆಯಿಂದ ಹೂಂಕಾರ ಬಂದ ನಂತರವಷ್ಟೇ ಭಜ್ಜಿಯ ಮುಂದಿನ ಹೆಜ್ಜೆಯಂತೆ. ಭಜ್ಜಿ ಜೊತೆಗೆ ಗೀತಾ ಭುಜ, ಕೈಹಿಡಿದು ನಡೆವಾಗಲೆಲ್ಲ ಗೀತಾಳ ಮುಖ, ನಗು, ಕಣ್ಣು ನೋಡಿದವರೇ ಸ್ಪಷ್ಟವಾಗಿ ಉಸುರಿದ್ದಾರಂತೆ, ಖಂಡಿತ ಇಲ್ಲಿ ಗೆಳೆತನದ ಮೇರೆ ಮೀರಿದ್ದು ಇನ್ನೇನೋ ಇದೆ ಎಂದು.
ಅದೇನೇ ಇರಲಿ, ಅದನ್ನೇ ನೇರವಾಗಿ ಗೀತಾ ಬಳಿ ಕೇಳಿದರೆ, ನಾವಿಬ್ಬರೂ ಜಸ್ಟ್ ಫ್ರೆಂಡ್ಸ್. ಧೋನಿ, ಭಜ್ಜಿ ಸೇರಿದಂತೆ ನಮ್ಮದೊಂದು ಗೆಳೆಯರ ಬಳಗ ಇದೆ. ನಾವೆಲ್ಲರೂ ಜೊತೆಯಾಗಿ ಫ್ರೀ ಇರುವಾಗಲೆಲ್ಲ ಸಿಗುತ್ತೇವೆ. ಮಸ್ತಾಗಿ ಕಾಲ ಕಳೆಯುತ್ತೇವೆ. ಧೋನಿ ಹಾಗೂ ಭಜ್ಜಿ ಮನೆಯ ಬಳಿಯಲ್ಲೇ ನನ್ನ ಮನೆಯೂ ಇದೆ ಅಂತಾಳೆ ಈ ಬೆಡಗಿ.
ಆದರೂ, ಧೋನಿಗಿಂತ ಚೆನ್ನಾಗಿಯೇ ಭಜ್ಜಿ ಜೊತೆ ಫ್ರೆಂಡ್‌ಶಿಪ್ ನಡೀತಿದೆಯಲ್ಲಾ ಎಂದರೆ, ಹೌದು ಎಂದು ಪ್ರಾಮಾಣಿಕವಾಗಿ ಉತ್ತರಿಸುತ್ತಾಳೆ ಗೀತಾ. ಭಜ್ಜಿ ಒಬ್ಬ ಅದ್ಭುತ ಕ್ರಿಕೆಟರ್. ಅಷ್ಟೇ ಅಲ್ಲ ಒಬ್ಬ ಉತ್ತಮ ಗೆಳೆಯ. ಆತನೆಂದರೆ ನನಗೆ ತುಂಬಾ ಇಷ್ಟ ಎಂದು ರಾಗವನ್ನೂ ಎಳೆಯುತ್ತಾಳೆ ಈಕೆ.
ನಿಮ್ಮ ಹಾಗೂ ಭಜ್ಜಿ ನಡುವಿನ ಸಂಬಂಧವನ್ನು ಪ್ರಾಮಾಣಿಕವಾಗಿ ಹೇಳಿ ಎಂದರೆ ಈಕೆ, ಇದನ್ನೆಲ್ಲ ನಿಮಗೆ ನೇರವಾಗಿ ಭಜ್ಜಿಯನ್ನೇ ಕೇಳಬಹುದಲ್ಲಾ? ನಮ್ಮ ನಡುವೆ ಒಂದು ಉತ್ತಮ ಗೆಳೆತನವಿದೆ. ನಾನೊಬ್ಬ ನಂಬಿಕಸ್ಥ ಹುಡುಗಿ. ನನಗೆ ಭಜ್ಜಿ ಸೇರಿ ಕೆಲವೇ ಕೆಲವು ಗೆಳೆಯರಿದ್ದಾರೆ. ನನ್ನ ಹಾಗೂ ಭಜ್ಜಿ ನಡುವೆ ಏನಾದರೂ ಹೊಸ ಸಂಬಂಧ ಇರುವುದಾದರೆ ಅದಕ್ಕೂ ಮುಂದೊಂದು ದಿನ ಕಾಲ ಕೂಡಿ ಬರಬಹುದು ಎಂದು ಭವಿಷ್ಯ ಹೇಳುತ್ತಾಳೆ!