ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶೀಘ್ರದಲ್ಲೇ ಸಲ್ಮಾನ್ ಖಾನ್‌ಗೆ ಮದುವೆಯಂತೆ! (Salman Khan | Katrina Kaif | Bollywood)
ಸುದ್ದಿ/ಗಾಸಿಪ್
Bookmark and Share Feedback Print
 
Salman Khan
IFM
ಬಾಲಿವುಡ್ಡಿನ ಬ್ಯಾಡ್ ಬಾಯ್ ಖ್ಯಾತಿಯ, ವರ್ಷವಿನ್ನೂ 44 ಆದರೂ ದಿ ಮೋಸ್ಟ್ ಹ್ಯಾಂಡ್‌ಸಂ ಬ್ಯಾಚುಲರ್ ಆಗಿ ಯುವತಿಯರ ನಿದ್ದೆಗೆಡಿಸುತ್ತಿರುವ ಸಲ್ಮಾನ್ ಖಾನ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ!!!

ಹೌದು. ಏಕಾಂಗಿ ಜೀವನದಿಂದ ಬೇಸತ್ತ ಸಲ್ಮಾನ್ ಹಲವು ಬಾರಿ ಮದುವೆ ಎಂಬ ವಿಷಯ ಬಂದಾಗಲೆಲ್ಲ, ನಾನೇ ತಿಳಿಸುತ್ತೇನೆ ಎಂಬೆಲ್ಲಾ ಹಾರಿಕೆಯ ಉತ್ತರ ನೀಡುತ್ತಿದ್ದರೂ, ಈ ಬಾರಿ ಮಾತ್ರ ನಸು ನಾಚಿ ಮುಖ ಕೆಂಪಗೆ ಮಾಡಿ, ಅತಿ ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಹೇಳಿದ್ದು ಕುತೂಹಲ ಕೆರಳುವಂತೆ ಮಾಡಿದೆ.

ತಮ್ಮಂದಿರು ಮದುವೆಯಾಗಿದ್ದಾಗಿದೆ. ಆದರೆ ಹಿರಿಯಣ್ಣ ಸಲ್ಮಾನ್ ಖಾನ್ ಮಾತ್ರ ದಿನಕ್ಕೊಂದು ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಳ್ಳುತ್ತಾ ಇನ್ನೂ ಹುಡುಗಿಯರ ಜೊತೆ ಮರಸುತ್ತುತ್ತಿರುವುದು ಸುಳ್ಳಲ್ಲ. ಐಶ್ ಜೊತೆಗಿನ ಪ್ರೀತಿ ಮುರಿದಾಗ ಸಲ್ಮಾನ್ ಪ್ರೇಮ ಸೌಧ ಕಳಚಿದ್ದು ದೊಡ್ಡ ಸುದ್ದಿಯಾದರೂ, ನಂತರ ಸಲ್ಮಾನ್ ಕತ್ರಿನಾ ತೆಕ್ಕೆಯಲ್ಲಿ ನಿರಾಳವಾಗಿ ಉಸಿರೆಳಿದಿದ್ದರು. ಆದರೂ, ಆಗಾಗ ಹಲವು ಮಾಡೆಲ್‌ಗಳ, ಬಾಲಿವುಡ್ ಬೆಡಗಿಯರ, ವಿದೇಶೀ ಚೆಲುವೆಯರ ಜೊತೆಗೆ ಸಲ್ಮಾನ್ ಹೆಸರು ರಾರಾಜಿಸೋದು ತಿಳಿದೇ ಇದೆ.

Katrina Kaif
IFM
ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಇಂದೋರ್‌ನ ಪಂಕಜ್ ಸಾಂಗ್ವಿ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಹೋಗಿದ್ದ ಸಲ್ಮಾನ್ ಖಾನ್ ಅವರನ್ನು ಕಂಡ ಕೂಡಲೇ ಪತ್ರಕರ್ತರು ತಮ್ಮ ಎಂದಿನ ಚಾಳಿ ಬಿಡಲಿಲ್ಲ. 'ಮದುವೆ ಯಾವಾಗ?' ಎಂದರು. ಅದಕ್ಕುತ್ತರವಾಗಿ ಸಲ್ಮಾನ್, ಸದ್ಯದಲ್ಲೇ ಆಗುತ್ತಿದ್ದೇನೆ, ಕಾದು ನೋಡಿ ಎಂದಷ್ಟೇ ಹೇಳಿ ಮುಗುಳ್ನಗು ಚೆಲ್ಲಿ ತುಸು ನಾಚಿದರು.

ಕತ್ರಿನಾ ಜೊತೆಗೆ ಸಲ್ಮಾನ್ ಖಾನ್ ಸಂಬಂಧ ಬಾಲಿವುಡ್ಡಿನ ಹಳೇ ಗಾಸಿಪ್ಪಾದರೂ, ಸಲ್ಮಾನ್ ಯಾರನ್ನು ಮದುವೆಯಗುತ್ತಿದ್ದಾರೆ ಎಂಬುದೀಗ ಕುತೂಹಲ ಕೆರಳಿಸಿದೆ. ಕತ್ರಿನಾಗೆ ಸದ್ಯ ಸಾಕಷ್ಟು ಅವಕಾಶಗಳಿದ್ದು, ಆಕೆ ತನ್ನ ವೃತ್ತಿ ಜೀವನದ ಅತ್ಯಂತ ಎತ್ತರದ ಸ್ಥಾನದಲ್ಲಿದ್ದಾಳೆ. ಅವಕಾಶಗಳು ಸುರಿಯುತ್ತಲೂ ಇವೆ. ಇಂಥ ಸಂದರ್ಭದಲ್ಲಿ ತನಗೆ ಮದುವೆ ಬೇಡ ಎನ್ನುತ್ತಿರುವುದು ನಟಿಯಾದವಳ ಸಹಜ ಗುಣಧರ್ಮ. ಈ ಮನೋಭಾವನೆ ಕತ್ರಿನಾಗೂ ಹೊರತಲ್ಲ. ಆದರೆ ಅತ್ತ ಸಲ್ಮಾನ್ ವಯಸ್ಸು ಮೀರುತ್ತಿದೆ. ಇನ್ನೂ 25ರ ವಯಸ್ಸಿಗೂ ತಲುಪದ ಕತ್ರಿನಾ ತನ್ನ ದುಪ್ಪಟ್ಟು ವಯಸ್ಸಿನ ಸಲ್ಮಾನ್ ಖಾನ್‌ರನ್ನು ಮದುವೆಯಾಗುತ್ತಾರೋ ಎಂದು ಕಾಲವೇ ಉತ್ತರ ಹೇಳಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲ್ಮಾನ್ ಖಾನ್, ಬಾಲಿವುಡ್, ಕತ್ರಿನಾ ಕೈಫ್, ಐಶ್ವರ್ಯಾ ರೈ