ಖ್ಯಾತ ನಟ ಅಮೀರ್ ಖಾನ್ ತನ್ನ ತ್ರಿ ಈಡಿಯಟ್ಸ್ ಚಿತ್ರಕ್ಕಾಗಿ ಎಲ್ಲೆಡೆ ಕರತಾಡನ ಗಿಟ್ಟಿಸುತ್ತಿರುವುದು ಗೊತ್ತೇ ಇದೆ. ಇಂತಿಪ್ಪ ಅಮೀರ್ ಖಾನ್ ತನ್ನ ಹೆಂಡತಿ ಕಿರಣ್ ರಾವ್ ಜೊತೆಗೆ ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ತಿಳಿದಿದೆ. ಹಾಗಾದರೆ ಯಶಸ್ಸಿನ ಬೆನ್ನಲ್ಲಿ ಅಮೀರ್ ಖಾನ್ ತಿರುಗುತ್ತಿರುವುವಾಗ ಅಮೀರ್ ಖಾನ್ರ ಮೊದಲ ಪತ್ನಿ ರೀನಾ ದತ್ತ ಏನು ಮಾಡುತ್ತಿರಬಹುದು ಎಂಬ ಕುತೂಹಲ ಸಹಜವೇ!
ಹೌದು. ಅಮೀರ್ ಖಾನ್ರ ಮಾಜಿ ಪತ್ನಿ ರೀನಾ ದತ್ತ ಇತ್ತೀಚೆಗೆ ತ್ರಿ ಈಡಿಯಟ್ಸ್ ಚಿತ್ರದ ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡರಂತೆ. ಎಲ್ಲರೂ ಅಮೀರ್ ಖಾನ್ರತ್ತ ಕ್ಯಾಮರಾ ತಿರುಗಿಸಿ ಫೋಟೋ ಕ್ಲಿಕ್ ಮಾಡುವ ಭರದಲ್ಲಿ ಅತ್ತ ರೀನಾ ದತ್ತ ಯಾರ ಕಣ್ಣಿಗೂ ಬೀಳಲೇ ಇಲ್ಲ. ಅಂತಿಮವಾಗಿ ರೀನಾ ತನ್ನ ಮಗ ಜುನೈದ್ ಖಾನ್ ಜೊತೆಗೆ ಅಮೀರ್ ಬಳಿ ಬಂದು ಚಿತ್ರದ ಬಗ್ಗೆ ಉತ್ತಮ ನುಡಿಗಳ್ನಾಡಿ ಕೈಕುಲುಕಿದಾಗ ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ.
ಅಪ್ಪ ಅಮೀರ್ ಖಾನ್ರ ಚಿತ್ರ ನೋಡಲು ಅಮ್ಮನ ಜೊತೆಗಿರುವ ಜುನೈದ್ ಕಡಾ ಬಂದಿದ್ದ. ಅಪ್ಪನನ್ನು ನೋಡಿ ಖುಷಿ ಪಟ್ಟ. ಅಪ್ಪನ ಜೊತೆ ಮಾತನ್ನೂ ಆಡಿದ. ವಿಶೇಷವೆಂದರೆ, ಜುನೈದ್ ಅಪ್ಪನೊಂದಿಗಿರುವ ಹೊಸ ಅಮ್ಮ ಕಿರಣ್ ರಾವ್ ಜೊತೆಗೂ ತುಂಬ ಚೆನ್ನಾಗಿಯೇ ಮಾತನಾಡುತ್ತಾನಂತೆ. ಆಕೆಯೂ ಜುನೈದ್ನನ್ನು ಮಗನಂತೆಯೇ ಮು್ದು ಮಾಡುತ್ತಾಳಂತೆ.
ಅಮೀರ್ ಖಾನ್ ಆಪ್ತರ ಪ್ರಕಾರ, ಅಮೀರ್ ತನ್ನ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡರೂ, ಆಕೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ರೀನಾ ಅಮೀರ್ ಖಾನ್ರ ಬಹುತೇಕ ಎಲ್ಲ ಚಿತ್ರಗಳಿಗೂ ಬರುತ್ತಾಳೆ. ಚಿತ್ರ ನೋಡಿ ಅಮೀರ್ ಜೊತೆಗೆ ಮಾತಾಡಿ ಹೋಗುತ್ತಾಳೆ. ಅಮೀರ್ ತನ್ನ ಚಿತ್ರಗಳ ಪ್ರೀಮಿಯರ್ ಶೋಗಳಿಗೆ ಆಕೆಗೆ ಆಹ್ವಾನವನ್ನೂ ನೀಡುತ್ತಾನೆ. ಆದರೆ, ಮನೆಯ ಸಮಾರಂಭಗಳಿಗೆ ಮಾತ್ರ ಆಕೆ ಬರುವುದಿಲ್ಲವಂತೆ. ಆದರೂ, ಅಮೀರ್ ಖಾನ್ ಆಕೆಯ ಮಾತುಗಳಿಗೆ ಈಗಲೂ ಬೆಲೆ ಕೊಡುತ್ತಾನೆ ಹಾಗೂ ಆಕೆಯನ್ನು ಗೌರವದಿಂದಲೇ ನಡೆಸಿಕೊಳ್ಳುತ್ತಾನೆ ಎನ್ನುತ್ತಾರೆ ಅಮೀರ್ ಖಾನ್ರ ಆಪ್ತ ಮೂಲಗಳು.