ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಿಗ್ ಬಿ ಜೊತೆ ಕೂತು ಪಾ ಸಿನಿಮಾ ನೋಡಿದ ಯಡಿಯೂರಪ್ಪ! (Amitabh bachchan | Yadyurappa | Paa | Rann | Sudeep)
ಸುದ್ದಿ/ಗಾಸಿಪ್
Bookmark and Share Feedback Print
 
Paa
IFM
ಬಾಲಿವುಡ್ಡಿನ ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಯ 'ಪಾ' ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಕೂಡೂ ಇದೀಗ ಶೇ.50ರಷ್ಟು ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿದೆ. ಜ.15ರಿಂದ ಈ ತೆರಿಗೆ ವಿನಾಯಿತಿ ನೀಡಲಾಗಿದ್ದು, ಇದರಿಂದ ರಾಜ್ಯಕ್ಕೆ ಬರುವ ಸುಮಾರು 30 ಲಕ್ಷ ರೂಪಾಯಿಗಳಷ್ಟು ಆದಾಯ ಕೈತಪ್ಪಲಿದೆ.

ನಮ್ಮ ಕನ್ನಡದ ಸುದೀಪ್ ಅವರೂ ಕೂಡಾ ನಟಿಸಿರುವ ಬಿಗ್ ಬಿ ಮುಖ್ಯ ತಾರಾಗಣವಿರುವ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ರಣ್' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಮುಖ್ಯಮಂತ್ರಿ ಯಡಿಯೂರಪ್ಪ ಅರ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನೂ ನಡೆಸಲಿದ್ದಾರೆ. ಮಧ್ಯಾಹ್ನ ಯಡಿಯೂರಪ್ಪ ಅವರು ಅಮಿತಾಬ್ ಬಚ್ಚನ್ ಜೊತೆ ಕುಳಿತು ಪಿವಿಆರ್ ಚಿತ್ರಮಂದಿರದಲ್ಲಿ ಪಾ ಚಿತ್ರವನ್ನು ವೀಕ್ಷಿಸಿದರು. ಮುಖ್ಯಮಂತ್ರಿಗಳ ಜೊತೆಗೆ ರಾಜ್ಯ ಸಚಿವ ಸಂಪುಟವೂ ಪಾ ವೀಕ್ಷಿಸಿದೆ.

ಡಾ.ರಾಜ್ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಅವರನ್ನೂ ಪಾ ಸಿನಿಮಾ ವೀಕ್ಷಿಸಲು ಆಹ್ವಾನಿಸಲಾಗಿದೆ. ಪಿವಿಆರ್ ಚಿತ್ರಮಂದಿರದ ಇಡೀ ಸಭಾಂಗಣವೊಂದನ್ನು ಪಾ ಚಿತ್ರ ವೀಕ್ಷಣೆಗಾಗಿ ಮುಂಗಡ ಕಾಯ್ದಿರಿಸಲಾಗಿದ್ದು, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಜಯಾ ಬಚ್ಚನ್ ಕೂಡಾ ಅಮಿತಾಬ್ ಜೊತೆಯಲ್ಲಿರಲಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ. ಹಾಗಾಗಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿ ಮಾಡಲು ಇಡೀ ಕನ್ನಡ ಚಿತ್ರರಂಗ ಬಿಗ್ ಬಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾದ ಪಂಚತಾರಾ ಹೊಟೇಲಿಗೆ ದೌಡಾಯಿಸಿದ್ದಾರೆ.

ಈ ಹಿಂದೆಯೇ ಅಮಿತಾಬ್ ಬಚ್ಚನ್ ಒಡೆತನದ ಎಬಿಸಿ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನರಂಜನಾ ತೆರಿಗೆ ಕಡಿತಗೊಳಿಸಲು ಕೋರಿ ಮನವಿ ಮಾಡಿತ್ತು. ಅಪರೂಪದ ಪ್ರೊಜೇರಿಯಾ ಖಾಯಿಲೆಯ ಕುರಿತು ಬೆಳಕು ಚೆಲ್ಲುವ ಚಿತ್ರ ಇದಾಗಿದ್ದು, ಪ್ರತಿ ಹೆತ್ತವರೂ ಈ ಚಿತ್ರ ನೋಡಬೇಕು. ಹಾಗೂ ಪ್ರೊಜೇರಿಯಾ ಖಾಯಿಲೆ ಬಗ್ಗೆ ಮಾಹಿತಿ ಹಾಗೂ ಅರಿವು ಮೂಡಿಸಲು ಪಾ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಎಂದು ಎಬಿಸಿ ಮನವಿ ಮಾಡಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಪಾ ಚಿತ್ರ ಉತ್ತಮ ಚಿತ್ರವಾಗಿದ್ದು ಇದಕ್ಕೆ ತೆರಿಗೆ ವಿನಾಯಿತಿ ನೀಡಬಹುದೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮಿತಾಬ್ ಬಚ್ಚನ್, ಯಡಿಯೂರಪ್ಪ, ಮನರಂಜನಾ ತೆರಿಗೆ, ಪಾ, ರಣ್, ಸುದೀಪ್