ಮಲ್ಲಿಕಾ ಶೆರಾವತ್ಳನ್ನು ಬಟ್ಟೆ ಬಿಚ್ಚಲು ಬಿಡದ ಅಣ್ಣ ವಿಕ್ರಮ್
IFM
ತಮ್ಮ ಅಕ್ಕತಂಗಿಯರ ಬಗ್ಗೆ ಭಾರತದ ಗಂಡುಮಕ್ಕಳು ತುಸು ಹೆಚ್ಚೇ ಕಾಳಜಿ ವಹಿಸೋದು ಜಗಜ್ಜಾಹೀರು. ತಮ್ಮ ಅಕ್ಕ ತಂಗಿಯರಿಗೆ ಯಾವ ಹುಡುಗರಿಂದಲೂ ಏನಾದರೂ ಅಹಿತಕರ ಘಟನೆ ನಡೆದರೆ ಈ ಅಣ್ಣಂದಿರು ಸುಮ್ಮನಿರರು ಎಂಬುದು ಇಂಡಿಯನ್ ಸೈಕಾಲಜಿ. ಬೇರೆ ಹುಡುಗೀರು ಎಷ್ಟಾದರೂ ಮೈದೋರಲಿ, ಆದರೆ, ತಮ್ಮ ತಂಗಿ ಮಾತ್ರ ಅಪ್ಪಟ ಸಂಪ್ರದಾಯಸ್ಥಲಾಗಿರಬೇಕೆಂಬ ಬಯಕೆಯೂ ಇದರ ಬೆನ್ನಿಗೇ ಇರುತ್ತದೆ. ಅದೇನೇ ಇರಲಿ, ಇದಕ್ಕೆ ಇತ್ತೀಚೆಗಷ್ಟೆ ಜ್ವಲಂತ ಸಾಕ್ಷಿಯಾಗಿದ್ದು ಮಲ್ಲಿಕಾ ಶೆರಾವತ್ ಅವರ ಅಣ್ಣ ವಿಕ್ರಮ್ ಲಂಬಾ.
ವಿಷಯ ಏನಪ್ಪಾ ಅಂದ್ರೆ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆ ಕಾಣಲಿರುವ ಮಲ್ಲಿಕಾ ಶೆರಾವತ್ ನಾಗಕನ್ಯೆಯಾಗಿ ನಟಿಸಿರುವ ಹಿಸ್ಸ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಮಲ್ಲಿಕಾ ಶೆರಾವತ್ಗೆ ಥೇಟ್ ಮೈಬಣ್ಣದ ಬಿಕಿನಿ ಧರಿಸಬೇಕಿತ್ತು. ಮಲ್ಲಿಕಾ ಹೆಚ್ಚು ಕಡಿಮೆ ಬೆತ್ತಲೆಯಾಗಿಯೇ ಕಾಣುವಂಥ, ದೇಹದ ಬಹುಭಾಗ ತೋರುವಂಥ ಬಿಕಿನಿ ಧರಿಸಿ ರಾತ್ರಿ ದೃಶ್ಯಕ್ಕಾಗಿ ತುಸು ಕತ್ತಲ ನೀರವ ರಾತ್ರಿಯಲ್ಲಿ ಮರವೊಂದರಲ್ಲಿ ಮೈಚೆಲ್ಲಿ ಕ್ಯಾಮರಾಗೆ ಮೈವೊಡ್ಡಿ ಮಲಗಿದ್ದರು.
IFM
ಅದೆಲ್ಲಿಂದ ಓಡಿಕೊಂಡು ಬಂದರೋ ಗೊತ್ತಿಲ್ಲ, ಮಲ್ಲಿಕಾಳ ಅಣ್ಣ ವಿಕ್ರಮ್ ಜೋರಾಗಿ ಬಂದು ತಕ್ಷಣ ಎಲ್ಲರನ್ನು ಬೈದು ಶೂಟಿಂಗ್ ನಿಲ್ಲಿಸಿದರು. ವಿಕ್ರಮ್ ಲಂಬಾ ಹಿಸ್ಸ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಹಾಗಾಗಿ ಅವರ ಮಾತಿಗೆ ಬೆಲೆ ನೀಡಿ ಚಿತ್ರದ ಶೂಟಿಂಗ್ ನಿಲ್ಲಿಸಲಾಯಿತು. ನಿಲ್ಲಿಸಲು ಕಾರಣವೇನಂದರೆ, ಮಲ್ಲಿಕಾಗೆ ಮೈ ಬಣ್ಣದ ಟು ಪೀಸ್ ಧರಿಸಲು ಕೊಟ್ಟದ್ದಕ್ಕೆ ವಿಕ್ರಮ್ ಕಿರುಚಾಡಿದ್ದರು.
ಮಲ್ಲಿಕಾ ಇಂಥ ಬಟ್ಟೆ ಧರಿಸೋದು ಬೇಡ. ಆಕೆಯನ್ನು ಬಹುತೇಕ ನಗ್ನವಾಗಿಯೇ ಶೂಟಿಂಗ್ ಮಾಡುತ್ತಿದ್ದಾರೆ. ಇದು ನನಗಿಷ್ಟವಿಲ್ಲ. ನನ್ನ ತಂಗಿಯನ್ನು ಹೀಗೆ ಬೆತ್ತಲೆ ಶೂಟಿಂಗ್ ಮಾಡೋದು ನನಗಿಷ್ಟಿಲ್ಲ ಎಂದು ವಿಕ್ರಮ್ ಕಿರುಚಾಡಿದರು.
IFM
ತಕ್ಷಣ ಕತ್ತಲ ರಾತ್ರಿಯಲ್ಲಿ ಮರಕ್ಕೆ ಬಹುತೇಕ ಬೆತ್ತಲೆಯಾಗಿ ಮೈಯೊಡ್ಡಿ ಮಲಗಿದ್ದ ಮಲ್ಲಿಕಾ ತಕ್ಷಣ ಎಚ್ಚೆತ್ತು, ಇಲ್ಲ ಅಣ್ಣ. ನಾನು ಸರಿಯಾಗೇ ಇದ್ದೇನೆ. ಅವರು ಹೀಗೆ ಶೂಟಿಂಗ್ ಮಾಡಿದ್ರೆ ನನಗೇನೂ ಅಭ್ಯಂತರವಿಲ್ಲ. ನಾನಂತೂ ಈ ಡ್ರೆಸ್ಸಿನಲ್ಲಿ ಆರಾಮವಾಗಿಯೇ ಇದ್ದೇನೆ ಎಂದು ಅಣ್ಣನ ಮನವೊಪ್ಪಿಸಲು ಪ್ರಯತ್ನಿಸಿದರು.
ಆದರೆ ಅಣ್ಣನಿಗೆ ಸಮಾಧಾನವಾಗಲಿಲ್ಲ. ಕೊನೆಗೆ, ಹೊಸತೊಂದು ಮೈಬಣ್ಣದ ಸ್ವಲ್ಪ ಹೆಚ್ಚು ಮೈಮುಚ್ಚುವ ಬಿಕಿನಿ ತಂದು ಮಲ್ಲಿಕಾಗೆ ತೊಡಿಸಲಾಯಿತು. ಕೊನೆಗೂ ಒಕೆ ಅಂದರು ಅಣ್ಣ ವಿಕ್ರಮ್. ಮತ್ತೆ ಶೂಟಿಂಗ್ ಆರಂಭವಾಯಿತು!!!