ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಐಶ್ವರ್ಯಾಳನ್ನು ಹಿಂಬಾಲಿಸುತ್ತಿರುವ ಭಗ್ನಪ್ರೇಮಿ ವಿವೇಕ್ ಒಬೆರಾಯ್! (Vivek Oberoi | Rann | Aishwarya Rai | Abhishek Bachchan)
ಸುದ್ದಿ/ಗಾಸಿಪ್
Bookmark and Share Feedback Print
 
IFM
ವಿವೇಕ್ ಒಬೆರಾಯ್ ಹಾಗೂ ನಮ್ಮ ತುಳುನಾಡ ಸುಂದರಿ ಐಶ್ವರ್ಯಾ ರೈ ಅವರಿಬ್ಬರ ಪ್ರಣಯ ಗಾನ ಗೊತ್ತಿಲ್ಲದವರಿಲ್ಲ. ಸಲ್ಮಾನ್ ಉಪಟಳ ಮಿತಿಮೀರಿದಾಗ ಆತನೆ ತೆಕ್ಕೆಯಿಂದ ಹೇಗೋ ಬಿಡಿಸಿಕೊಂಡು ಬಂದ ಐಶ್ವರ್ಯಾ ರೈ ಬಿದ್ದದ್ದು ವಿವೇಕ್ ತೆಕ್ಕೆಗೆ. ಇನ್ನೇನು ಮದುವೆಯೇ ಆಗಿ ಬಿಟ್ಟರು ಎನ್ನುವಷ್ಟರಲ್ಲಿ ಐಶ್ವರ್ಯಾ ವಿವೇಕ್‌ಗೆ ಟಾಟಾ ಹೇಳಿ ತನ್ನ ಪಾಡಿಗೆ ಕೆಲಸದಲ್ಲಿ ಮಗ್ನವಾದಳು. ನಂತರ ನಡೆದಿದ್ದು ಗೊತ್ತೇ ಇದೆ. ಬಚ್ಚನ್ ಸೊಸೆಯಾಗಿ ಅಭಿಷೇಕ್‌ಗೆ ಪ್ರೇಮಾಭಿಷೇಕ ಮಾಡಿದಳು ಈ ಐಶ್ವರ್ಯಾ.

ಅದೇನೇ ಇರಲಿ. ಮದುವೆಯಾದ ನಂತರ ತನ್ನ ವೃತ್ತಿ ಬದುಕಿನ ಜೊತೆಜೊತೆಗೆ ಖಾಸಗಿ ಬದುಕನ್ನು ಮುಚ್ಚಟೆಯಿಂದ ಸಂಭಾಳಿಸುತ್ತಾ ಬರುತ್ತಿರುವುದಕ್ಕಾದರೂ ಈಕೆಯನ್ನು ಮೆಚ್ಚಲೇಬೇಕು. ಮದುವೆಯಾದ ಮೇಲೂ ತನ್ನ ಬೇಡಿಕೆಯನ್ನು ಈಗಲೂ ಉಳಿಸಿಕೊಂಡಿರುವ ಪ್ರತಿಭಾವಂತೆ ಈಕೆ. ಆದರೆ ಅದೇನೋ ಏಕೋ, ವಿವೇಕ್ ಒಬೆರಾಯ್ ಎಂಬ ಭಗ್ನ ಪ್ರೇಮಿ ಮಾತ್ರ ಇನ್ನೂ ಐಶ್ವರ್ಯಾ ರೈ ಎಂಬ ಸುಂದರಾಂಗಿಯ ನೆನಪಿನಾಳದಿಂದ ಹೊರಬರಲಾಗುತ್ತಿಲ್ಲ. ಮೊನ್ನೆ ಮೊನ್ನೆಯಷ್ಟೆ ಟಿವಿ ಚಾನಲ್ಲೊಂದರಲ್ಲಿ ತನ್ನ ಐಶ್ ನಡುವಿನ ಪ್ರೇಮ ಪ್ರಸಂಗವೆಲ್ಲವನ್ನೂ ಬಡಬಡಿಸಿದ್ದ ವಿವೇಕ್, ಐಶ್ ಕಣ್ಣಲ್ಲಿ ನೀರು ತರಿಸಿದ್ದ.
IFM


ಈಗೊಂದು ಹೊಸ ಸುದ್ದಿ ಹೊರ ಬಂದಿದೆ. ಐಶ್ವರ್ಯಾ ರೈ ಹೋದಲ್ಲೆಲ್ಲಾ ವಿವೇಕ್ ಒಬೆರಾಯ್ ಹಿಂಬಾಲಿಸುತ್ತಿದ್ದಾರೆ ಎಂಬುದೇ ಆ ಕುತೂಹಲಕರ ಸುದ್ದಿ. ಕೆಲವು ದಿನಗಳ ಹಿಂದೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ವಿವೇಕ್ ಒಬೆರಾಯ್ ಮುಗುಳುನಗುತ್ತಾ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಜೊತೆಗೆ ಮಾತನಾಡುತ್ತಿದ್ದ ಫೋಟೋವನ್ನು ಮಾಧ್ಯಮದ ಮಂದಿ ಕ್ಲಿಕ್ಕಿಸಿದ್ದರು. ಆಗ ಅಭಿಷೇಕ್ ಹಾಗೂ ಐಶ್ವರ್ಯಾ ಬೇರೆಡೆಗೆ ಎದ್ದು ಹೋಗಿ ಬಾಲಿವುಡ್ಡಿನ ಚಿರಯವ್ವನೆ ರೇಖಾ ಜೊತೆಗೆ ಮಾತನಾಡಿದ್ದು ಸುದ್ದಿಯಾಗಿತ್ತು. ಈ ಘಟನೆಯಿಂದ ಎಲ್ಲರ ಹುಬ್ಬೂ ಮೇಲೇರಿತ್ತು. ಅದಾದ ಮೇಲೆ ಇದೀಗ ಅಮಿತಾಬ್ ಬಚ್ಚನ್ ಅವರ ನಟನೆಯ ರಣ್ ಚಿತ್ರದ ಸಮಾರಂಭವೊಂದಕ್ಕೂ ವಿವೇಕ್ ಬಂದಿದ್ದಾನೆ. ಈ ಸಮಾರಂಭ ನವದೆಹಲಿಯಲ್ಲಿ ನಡೆದಿತ್ತು. ಅಮಿತಾಬ್ ನಟನೆಯ ಚಿತ್ರವಾದ್ದರಿಂದ ಅಲ್ಲಿ ಮಗ ಅಭಿಷೇಕ್ ಹಾಗೂ ಸೊಸೆ ಐಶ್ವರ್ಯಾ ಕೂತಿದ್ದರು. ಇದ್ದಕ್ಕಿದ್ದಂತೆ ವಿವೇಕ್ ಒಬೆರಾಯ್ ಈ ಸಮಾರಂಭಕ್ಕೆ ಬಂದರು. ಮೂಲಗಳ ಪ್ರಕಾರ, ಈ ಚಿತ್ರದ ಸಮಾರಂಭಕ್ಕೆ ವಿವೇಕ್ ಅವರಿಗೆ ಆಹ್ವಾನ ಇರಲಿಲ್ಲ. ನವದೆಹಲಿಗೆ ಇನ್ನಾವುದೋ ಸಮಾರಂಭಕ್ಕೆ ಬಂದಾತ ಇಲ್ಲಿಗೆ ಬಂದನೋ, ಇದಕ್ಕಾಗಿಯೇ ಇಲ್ಲಿಗೆ ಬಂದಿದ್ದಾರೋ ಎಂಬುದು ಮಾತ್ರ ಗೊತ್ತಿಲ್ಲ ಎನ್ನುತ್ತವೆ ಮೂಲಗಳು.

ಅದಿರಲಿ. ಇತ್ತೀಚೆಗೆ ಮುಂಬೈಯ ಶಾರುಖ್ ಮನೆ ಮನ್ನತ್‌ನಲ್ಲಿ ಇತ್ತೀಚೆಗೆ ಹೃತಿಕ್ ರೋಷನ್ ಅವರ ಹುಟ್ಟುಹಬ್ಬದ ಪಾರ್ಟಿ ನಡೆದಿತ್ತು. ಈ ಪಾರ್ಟಿಗೂ ವಿವೇಕ್‌ಗೆ ಆಹ್ವಾನವಿರಲಿಲ್ಲ. ಬಚ್ಚನ್ ಕುಟುಂಬಕ್ಕೆ ಆಹ್ವಾನವಿತ್ತು. ಐಶ್ವರ್ಯಾ ರೈ ಹಾಗೂ ಅಭಿಷೇಕ್ ಪಾರ್ಟಿಗೆ ಬಂದಿದ್ದರು. ಅಷ್ಟರಲ್ಲಿ, ಆಹ್ವಾನವೇ ಇಲ್ಲದ ಅತಿಥಿಯಾಗಿ ವಿವೇಕ್ ಕೂಡ ಪಾರ್ಟಿಗೆ ಹಾಜರಾಗಿದ್ದರು ಎನ್ನಲಾಗಿದೆ.

ಏನೋಪ್ಪಾ... ಒಟ್ಟಾರೆ ಐಸ್ವರ್ಯಾರ ಸುಖ ದಾಂಪತ್ಯ ವಿವೇಕ್‌ಗೆ ಹಳೆಯ ನೆನಪುಗಳನ್ನು ತರಿಸಿತೋ ಏನೋ!!!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಶ್ವರ್ಯಾ ರೈ, ವಿವೇಕ್ ಒಬೆರಾಯ್, ಅಭಿಷೇಕ್ ಬಚ್ಚನ್, ರಣ್