ಮುಖ್ಯ ಪುಟಮನರಂಜನೆ » ಬಾಲಿವುಡ್ » ಸುದ್ದಿ/ಗಾಸಿಪ್ » ಎ.ಆರ್.ರೆಹಮಾನ್‌ಗೆ ಪ್ರತಿಷ್ಠಿತ 2 ಗ್ರಾಮೀ ಪ್ರಶಸ್ತಿಯ ಗರಿ! (A R Rahman | Oscar | Slumdog Millionaire | Jai Ho | Bollywood)
ಎ.ಆರ್.ರೆಹಮಾನ್‌ಗೆ ಪ್ರತಿಷ್ಠಿತ 2 ಗ್ರಾಮೀ ಪ್ರಶಸ್ತಿಯ ಗರಿ!
ಲಾಸ್ ಏಂಜಲೀಸ್, ಸೋಮವಾರ, 1 ಫೆಬ್ರವರಿ 2010( 11:01 IST )
IFM
ಆಸ್ಕರ್ ವಿಜೇತ ಖ್ಯಾತ ಭಾರತೀಯ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ಗೆ ಪ್ರತಿಷ್ಠಿತ ಗ್ರಾಮೀ ಪ್ರಶಸ್ತಿ ದೊರೆತಿದ್ದು, ಮತ್ತೆ ಭಾರತೀಯರು ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.
52ನೇ ಗ್ರಾಮೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎ.ಆರ್.ರೆಹಮಾನ್ ಎರಡು ಗ್ರಾಮೀ ಪ್ರಶಸ್ತಿ ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ. ಹಲವು ಆಸ್ಕರ್ ಪ್ರಶಸ್ತಿಗಳನ್ನು ಮುಡಿಗೇರಿಸಿದ್ದ ಸ್ಲಂ ಡಾಗ್ ಮಿಲಿಯನೇರ್ ಚಿತ್ರ ಹಾಡೀಗ ರೆಹಮಾನ್‌ಗೆ ಮತ್ತೆ ಗ್ರಾಮೀ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ಕರುಣಿಸಿದೆ. ಇದು ರೆಹಮಾನ್ ಅವರ ಚೊಚ್ಚಲ ಗ್ರಾಮೀ ಪ್ರಶಸ್ತಿ.
ಗ್ರಾಮೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲು ರೆಹಮಾನ್ ಮೋಷನ್ ಪಿಕ್ಚರ್ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ಸಂಕಲನಕಾರ ಪ್ರಶಸ್ತಿ ಟ್ರೋಫಿಯನ್ನು ಪಡೆದುಕೊಂಡರು. ಅದಾದ ನಂತರ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ಜೈ ಹೋ ಹಾಡಿಗೆ ಅತ್ಯುತ್ತಮ ಮೋಷನ್ ಪಿಕ್ಚರ್ ಹಾಡು ಪ್ರಶಸ್ತಿಯನ್ನು ಬುಟ್ಟಿಗೆ ಹಾಕಿಕೊಂಡರು. ಹೀಗೆಗ್ರಾಮೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡು ಪ್ರಶಸ್ತಿಗಳನ್ನು ಬುಟ್ಟಿಗೆ ಹಾಕಿಕೊಂಡು ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೆಹಮಾನ್ ಇದು ನಿಜಕ್ಕೂ ಆಶ್ಚರ್ಯ ತಂದಿದೆ. ದೇವರು ದೊಡ್ಡವನು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ರೆಹೆಮಾನ್ ಅವರ ಜೊತೆ ಸೌಂಡ್ ಟ್ರಾಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಖ್ಯಾತನಾಮರಾದ ಸ್ಟೀವ್ ಜೋರ್ಡನ್, ಕ್ವಿನ್‌ಟಿನ್ ಟರಾಂಟಿನೋ ಕೂಡಾ ಇದ್ದರು. ಅಲ್ಲದೆ, ಅತ್ಯುತ್ತಮ ಹಾಡಿನ ವಿಭಾಗದಲ್ಲಿ ರೆಹೆಮಾನ್ ಅವರು ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರ ದಿ ರೆಸ್ಟ್ಲರ್ ಅನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡರು. ದಿ ರೆಸ್ಟ್ಲರ್ ಕಳೆದ ಬಾರಿ ಶಾಕರ್ ಪ್ರಶಸ್ತಿಗೂ ನಾಮ ನಿರ್ದೇಶನಗೊಂಡಿತ್ತು.
ಎರಡು ಆಸ್ಕರ್‌ಗಳನ್ನು ಗೆದ್ದುಕೊಂಡ ರೆಹಮಾನ್ ಇದೀಗ ಗ್ರಾಮೀ ಪ್ರಶಸ್ತಿಯನ್ನೂ ಎರಡು ಟ್ರೋಫಿ ಗೆದ್ದುಗೊಂಡಿರುವುದು ವಿಶೇಷ.