ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ನಾನು ನೋಡಿದ ಅತಿಕೆಟ್ಟ ಸಿನೆಮಾ ಸ್ಲಂಡಾಗ್..! :ಕಾರ್ನಾಡ್ (Girish Karnad | Slumdog Millionaire | Oscar)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಪದ್ಮಭೂಷಣ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ ಗಿರೀಶ್ ಕಾರ್ನಾಡ್, ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ಸ್ಲಂ ಡಾಗ್ ಮಿಲಿಯನೇರ್ ಚಿತ್ರವನ್ನು ಅತ್ಯಂತ ಕೆಟ್ಟ ಚಿತ್ರ ಎಂದು ಬಣ್ಣಿಸಿದ್ದಾರೆ.

ಇಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ಕಾರ್ನಾಡ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ತಾನು ಈವರೆಗೆ ನೋಡಿದ ಅತಿ ಕೆಟ್ಟ ಚಿತ್ರ ಎಂದರೆ ಅದು ಸ್ಲಂ ಡಾಗ್ ಮಿಲಿಯನೇರ್. ಇದಕ್ಕಿಂತ ಕೆಟ್ಟ ಚಿತ್ರವನ್ನು ನಾನು ಜೀವನದಲ್ಲಿ ನೋಡಿಯೇ ಇಲ್ಲ ಎಂದು ಹೇಳಿದರು.

ಸ್ಲಂಡಾಗ್ ಚಿತ್ರ ಭಾರತದಲ್ಲಿ ಹೀನಾಯ ಸೋಲು ಅನುಭವಿಸಿದೆ ಎಂದು ಹೇಳಿದ ಕಾರ್ನಾಡ್, ಭಾರತದ ಮಂದಿಯ ಆಸ್ಕರ್ ಹಸಿವು ಹಾಗೂ ನಮ್ಮವರ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ (ಕೀಳರಿಮೆ ಸ್ವಭಾವ) ಇದರಿಂದ ವ್ಯಕ್ತವಾಗುತ್ತದೆ ಎಂದು ಕಾರ್ನಾಡ್ ಹೇಳಿದರು.

ನಾವ್ಯಾಕೆ ಆಸ್ಕರ್, ಗ್ರಾಮೀ ಪ್ರಶಸ್ತಿಗಳ ಬೆನ್ನುಬೀಳುತ್ತಿದ್ದೇವೆಯೋ ನನಗರ್ಥವಾಗುತ್ತಿಲ್ಲ ಎಂದ ಕಾರ್ನಾಡ್, ನಮ್ಮ ಸಿನಿಮಾ ರಂಗ ಆರೋಗ್ಯಕರವಾಗಿದ್ದು ಅತ್ಯುತ್ತಮವಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

2008ರಲ್ಲಿ ಬಿಡುಗಡೆ ಕಂಡಿದ್ದ ಸ್ಲಂ ಡಾಗ್ ಮಿಲಿಯನೇರ್ ಚಿತ್ರ ಭಾರತೀಯ ನಟನಟಿಯರು ಹಾಗೂ ತಾಂತ್ರಿಕ ವರ್ಗವನ್ನು ಹೊಂಡಿದ್ದರೂ, ಹೊರದೇಶೀಯರಿಂದ ನಿರ್ಮಾಣಗೊಂಡಿತ್ತು. ಈ ಚಿತ್ರ ಎಂಟು ಆಸ್ಕರ್‌ಗಳನ್ನು ಬಾಚಿಕೊಂಡಿತ್ತು. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಗುಲ್ಜಾರ್ ಹಾಗೂ ರಿಸಲ್ ಪೂಕುಟ್ಟಿ ಆಸ್ಕರ್ ಪಡೆದಿದ್ದರು. ಆದರೆ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯದೊಂದಿಗೇ, ಭಾರತದ ಕೆಟ್ಟ ಮುಖವನ್ನು ಮಾತ್ರ ಚಿತ್ರದಲ್ಲಿ ತೋರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ಕೆಟ್ಟ ಸಂದೇಶ ಸಾರಲಾಗಿದೆ ಎಂದು ಹಲವರು ಟಕೆ ಮಾಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಂ ಡಾಗ್ ಮಿಲಿಯನೇರ್, ಗಿರೀಶ್ ಕಾರ್ನಾಡ್, ರೆಹಮಾನ್, ಆಸ್ಕರ್