ನೆಟ್ಟಗೆ ಒಂದಕ್ಷರ ಹಿಂದಿ ಮಾತಾಡಲು ಬಾರದ, ಕೇವಲ ಸಲ್ಮಾನ್ ಸಂಗಾತಿ ಎಂಬ ಕಾರಣಕ್ಕಷ್ಟೇ ಮೊದಮೊದಲು ಪರಿಚಿತಳಾದ ಕತ್ರಿನಾ ಕೈಫ್ ಎಂಬ ದಂತದ ಬೊಂಬೆ, ಈಗ ತನಗೆ ಅಭಿನಯವೂ ಬರುತ್ತೆ, ಹಿಂದಿ ಮಾತಾಡಲೂ ಬರುತ್ತೆ ಅಂತ ಬಾಲಿವುಡ್ಡಿಗರನ್ನೇ ನಿಬ್ಬೆರಗಾಗುವಂತೆ ನಂ.1 ಪಟ್ಟಕ್ಕೂ ಕಣ್ಣು ಹಾಕುವಷ್ಟರ ಮಟ್ಟಿಗೆ ಬೆಳೆದದ್ದು ಸಾಮಾನ್ಯವೇನಲ್ಲ. ಅದೇ ಇರಲಿ. ಈ ಕತ್ರಿನಾಗೊಬ್ಬ ಇಸಬೆಲ್ ಕೈಫ್ ಎಂಬ ತಂಗಿಯೂ ಇದ್ದಾಳೆ. ಮುಂಬೈಗೆ ಬಂದಿರುವ ಈಕೆ ಈಗೀಗ ಅಕ್ಕ ಕತ್ರಿನಾ ಜೊತೆ ಹಾಗೂ ಸಲ್ಮಾನ್ ಜೊತೆಗೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಲೂ ಇದ್ದಾಳೆ. ಬಾಲಿವುಡ್ ಕಡೆಗೆ ಕಣ್ಣು ನೆಟ್ಟಿದ್ದಾಳೆ. ಆದರೆ ಅಷ್ಟಾಗಲೇ ಅಕ್ಕ ಕತ್ರಿನಾಗಿಂತಲೂ ಒಂದು ಪಟ್ಟು ಪ್ರಸಿದ್ಧಿ ಹೆಚ್ಚು ಪಡೆದಿದ್ದಾಳೆ. ಆದರೆ ನಟನೆಯಿಂದಂತೂ ಖಂಡಿತಾ ಅಲ್ಲ, ಬದಲಾಗಿ ಲೈಂಗಿಕ ಹಗರಣದಿಂದಾಗಿ!!!
ಅದೇನೇ ಇರಲಿ. ಈ ಕತ್ರಿನಾಳ ತಂಗಿ ಇಸಬೆಲ್ಲಾ ಸದ್ಯ ಮುಂಬೈಯ ಬೀದಿ ಬೀದಿಗಳಲ್ಲೂ ಸಾಕಷ್ಟು ಸುದ್ದಿ ಮಾಡಿದ್ದಾಳೆ. ಹೌದು. ಇಸಬೆಲ್ ಕೈಫ್ ಅನಾಮಿಕ ಯುವಕನೊಂದಿಗೆ ಲೈಂಗಿಕ ಸಂಪರ್ಕ ನಡೆಸುವ ವೀಡಿಯೋ ಸಿಡಿಗಳು ಈಗ ಮುಂಬೈಯ ರೈಲ್ವೇ ಸ್ಟೇಷನ್ನಿನ ಪೆಟ್ಟಿಗೆ ಅಂಗಡಿಯಲ್ಲೂ ಜುಜುಬಿ ಕಾಸಿಗೆ ಸಿಗುತ್ತಿದೆ!
ಈ ಡಿವಿಡಿಗೆ ಬೋಲ್ಡ್ ಆಗಿ 'ಇಸೆಬೆಲ್ ಕೈಫ್' ಎಂಬ ಹೆಸರನ್ನೇ ಇಡಲಾಗಿದೆಯಂತೆ. ಡಿವಿಡಿಯಲ್ಲಿ 10 ನಿಮಿಷಗಳ ಕಾಲದ ಲೈಂಗಿಕ ಕ್ರಿಯೆಯ ವಿಡಿಯೋ ತುಣುಕಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್‌ಗಳಲ್ಲಿ ಭಾರೀ ಜನಪ್ರಿಯವಾಗಿರುವ ಈ ವಿಡಿಯೋವನ್ನು ಯುಟ್ಯೂಬ್ ಸೈಟ್‌ನಲ್ಲಿ ಬ್ಲಾಕ್ ಮಾಡಲಾಗಿದೆ. ಆದರೂ ವಿಡಿಯೋದ ತುಣುಕುಗಳು ಈಗಲೂ ಮೊಬೈಲ್‌ಗಳಲ್ಲಿ, ನೆಟ್‌ನಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಿದಾಡುತ್ತಿದೆ.
PR
ಆದರೆ, ವಿಡಿಯೋದಲ್ಲಿ ನೋಡಿದವರು ಇದು ಥೇಟ್ ಕತ್ರಿನಾರ ತಂಗಿಯಂತೆಯೇ ಕಾಣುತ್ತಿರುವುದರಿಂದ, ಆಕೆಯಲ್ಲವೆಂದು ಖಂಡಿತಾ ತಳ್ಳಿಹಾಕುವಂತಿಲ್ಲ ಎನ್ನುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇದು ಇಸಬೆಲ್ಲಾ ಥರಾನೇ ಇರುವ ಬೇರೆ ಹುಡುಗಿಯ ವಿಡಿಯೋ, ಸುಮ್ಮನೆ ಇಸಬೆಲ್ ಹೆಸರನ್ನು ಇದಕ್ಕೆ ಥಳುಕು ಹಾಕಲಾಗುತ್ತಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಹುಡುಗಿಯ ಮುಖ ಸ್ಪಷ್ಟವಾಗಿ ಕಾಣುತ್ತಿದ್ದರೂ, ಹುಡುಗನ ಮುಖ ಕಾಣುವುದಿಲ್ಲ. ಹುಡುಗಿಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ ಹುಡುಗ ಬೇಕೆಂತಲೇ ಹೊಟೇಲಿನಲ್ಲಿ ವಿಡಿಯೋ ಮಾಡಿದಂತಿದೆ ಎಂದೂ ಹೇಳಲಾಗುತ್ತಿದೆ.
ಇತ್ತೀಚೆಗೆ ಸಲ್ಮಾನ್ ಮುಂದಿನ ಚಿತ್ರ ನಾಯಕಿ ಈ ಇಸಬೆಲ್ ಎಂಬವರೆಗೂ ಸುದ್ದಿಯಾಗಿತ್ತು. ಆದರೆ ಆಮೇಲೆ ಕತ್ರಿನಾರೇ, ಆಕೆಗಿನ್ನೂ 18 ತುಂಬಿಲ್ಲ. ಈಗಲೇ ಚಿತ್ರರಂಗಕ್ಕೆ ಬರಬೇಡ, ಚೆನ್ನಾಗಿ ನಟನೆ ಕಲಿತು ಬಾ ಎಂದು ತಾನೇ ಹೇಳಿದ್ದಾಗಿ ಕತ್ರಿನಾ ಮಾಧ್ಯಮಕ್ಕೆ ಹೇಳಿದ್ದರು. ಆದರೆ ಈ ಲೈಂಗಿಕ ಹಗರಣದಿಂದಾಗಿ ಬಾಲಿವುಡ್ಡಿಗೆ ಬರುವ ಮೊದಲೇ ಇಸಬೆಲ್ ಸುದ್ದಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಕತ್ರಿನಾಗೂ ಗೊತ್ತಿದ್ದರೂ, ಆಕೆ ಮಾಧ್ಯಮದೆದುರು ಏನೂ ಹೇಳಿಕೆ ನೀಡಿಲ್ಲ. ಈ ಬಗ್ಗೆ ಮೌನ ಧರಿಸಿದ್ದಾರೆ. ಸದ್ಯ ಬಾಲಿವುಡ್ಡಿನಲ್ಲಿ ಭಾರೀ ಬೇಡಿಕೆ ಹೊಂದಿರುವ ಕತ್ರಿನಾಗೆ ಇದು ಕಪ್ಪುಚುಕ್ಕೆಯೆಂದರೂ ಸುಳ್ಳಲ್ಲ.