ಐಶ್ವರ್ಯಾ ರೈ ಇನ್ನೂ ತಾಯಿ ಯಾಕಾಗಿಲ್ಲ ಎಂಬುದು ಸದ್ಯದ ಬಾಲಿವುಡ್ಡಿನ ಬಹುಚರ್ಚಿತ ವಿಷಯ. ಹಲವು ಬಾರಿ ಮಾಧ್ಯಮಗಳಲ್ಲಿ ಐಶ್ವರ್ಯ ಗರ್ಭವತಿಯಾಗಿದ್ದಾಳೆ ಎಂದೇ ವರದಿಯಾದರೂ, ಅದನ್ನು ಸ್ವತಃ ಐಶ್ ತಳ್ಳಿಹಾಕಿದ್ದಳು. ಹಾಗಾಗಿ ಐಶ್ ತಾಯಿಯಾಗೋದೇ ಮಹತ್ವದ ವಿಚಾರವಾಗಿ ಪರಿಣಮಿಸಿತ್ತು. ಆದರೀಗ ಐಶ್ವರ್ಯಾ ರೈ ಗರ್ಭಿಣಿಯಾಗದಿರಲು ಕಾರಣ ಬಹಿರಂಗವಾಗಿದೆ!
ಹೌದು. ಐಶ್ ಹೊಟ್ಟೆಯ ಕ್ಷಯ ರೋಗದಿಂದ ಬಳಲುತ್ತಿದ್ದು, ಇದರಿಂದಾಗಿ ಗರ್ಭವತಿಯಾಗಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರವೊಂದು ಹೊರಬಂದಿದೆ. ಮದುವೆಯ ನಂತರ ಐಶ್ವರ್ಯಾ ತಾಯಿಯಾಗಲು ಸಾಕಷ್ಟು ಪ್ರಯತ್ನಿಸಿದ್ದರೂ, ತಾಯಿಯಾಗಲು ಸಾಧ್ಯವಾಗಿಲ್ಲ. ಐಶ್ ಹೊಟ್ಟೆಯ ಕ್ಷಯ ಅರ್ಥಾತ್ ಸ್ಟೊಮಕ್ ಟಿಬಿಯಿಂದ ಬಳಲುತ್ತಿದ್ದು, ಇದು ವಾಸಿಯಾದ ಮೇಲಷ್ಟೇ ಆಕೆ ಗರ್ಭವತಿಯಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಐಶ್ ಅಭಿ ಬಾಲಿವುಡ್ಡಿನಲ್ಲಿ ಹಾಟ್ ಜೋಡಿ ಎಂದೇ ಪ್ರಸಿದ್ಧರು. ಮದುವೆಗೆ ಮುನ್ನ ಸಾಕಷ್ಟು ಗಾಸಿಪ್‌ಗಳಲ್ಲಿ ಐಶ್ ಸುದ್ದಿಯಾದರೂ, ಮದುವೆಯ ನಂತರ ಈ ಕರುನಾಡ ಬೆಡಗಿ ಸಂದರ ಸುಸಂಸ್ಕೃತ ಜೀವನ ನಡೆಸಿಯೇ ಸೈ ಎನಿಸಿದ್ದಳು. ಕೌಟುಂಬಿಕ ಹಾಗೂ ವೃತ್ತಿಜೀವನವನ್ನು ಸರಿಸಮನಾಗಿ ನಡೆಸಿಕೊಂಡು ತನ್ನ ಅತ್ತೆ ಮಾವ ಬಿಗ್ ಬಿ, ಜಯಾರಿಂದಲೂ ಭೇಷ್ ಎನಿಸಿಕೊಂಡಿದ್ದಳು. ಆದರೀಗ ಈಕೆ ಅನಾರೋಗ್ಯವೇ ಬಿಗ್ ಬಿ ಕುಟುಂಬಕ್ಕೇ ಚಿಂತೆಯ ಮೂಲ ಕಾರಣವಾಗಿದೆ ಎನ್ನಲಾಗಿದೆ.
ಹೊಟ್ಟೆನೋವು, ಜ್ವರ, ಬಳಲಿಕೆ, ಕೆಮ್ಮು, ಶೀತ ಮುಂತಾದ ಲಕ್ಷಣಗಳ್ನನು ಹೊಂದಿರುವ ಈ ಹೊಟ್ಟೆಯ ಕ್ಷಯ ರೋಗ ಒಮ್ಮೆ ವಾಸಿಯಾದಂತೆ ಕಂಡರೂ ಇದರ ಬ್ಯಾಕ್ಟೀರಿಯಾ ಬಹುಕಾಲ ಹಾಗೆಯೇ ದೇಹದಲ್ಲಿ ಇರಬಲ್ಲುದು. ಇಂಥ ರೋಗಕ್ಕೆ ತುತ್ತಾಗಿರುವ ಐಶ್‌ಗೆ ಚಿಕಿತ್ಸೆ ನಡೆಯುತ್ತಿದೆ. ಈ ರೋಗದಿಂದ ಸಂಪೂರ್ಣ ಗುಣಮುಖವಾದರಷ್ಟೇ ಈಗೆ ಗರ್ಭವತಿಯಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಐಶ್ವರ್ಯಾಗೆ ಈಗ 37ರ ಹರೆಯ. ಇಂಥ ವಯಸ್ಸಿನಲ್ಲೂ ಆಕೆ ಯಾಕೆ ತಾಯಿಯಾಗಲು ಬಯಸುತ್ತಿಲ್ಲ ಎಂಬುದೇ ಎಲ್ಲರಿಗೂ ಕುತೂಹಲಕರ ವಿಷಯವಾಗಿತ್ತು. ಈಗ ಅದು ಬಹಿರಂಗವಾಗಿದೆ. ಐಶ್ ಬೇಗ ಗುಣಮುಖರಾಗಿ, ಶೀಘ್ರದಲ್ಲೇ ಬಿಗ್ ಅಜ್ಜನಾಗಲಿ ಎಂದು ಹಾರೈಸೋಣ.